ADVERTISEMENT

ಚೈನೀಸ್ ಆಹಾರ ಉತ್ಸವ

​ಪ್ರಜಾವಾಣಿ ವಾರ್ತೆ
Published 2 ಜೂನ್ 2017, 19:30 IST
Last Updated 2 ಜೂನ್ 2017, 19:30 IST
ಚೈನೀಸ್ ಆಹಾರ ಉತ್ಸವ
ಚೈನೀಸ್ ಆಹಾರ ಉತ್ಸವ   

ಯವೂಚಾ ರೆಸ್ಟೊರೆಂಟ್ ‘ಡ್ರ್ಯಾಗನ್ ಬೋಟ್’ ಹೆಸರಿನಲ್ಲಿ ಚೈನೀಸ್ ಖಾದ್ಯ ಉತ್ಸವ ಆಯೋಜಿಸಿದೆ. ಪುರಾತನ ಶೈಲಿಯ ಚೈನೀಸ್ ಖಾದ್ಯಗಳನ್ನು ಉತ್ಸವದಲ್ಲಿ ಉಣ ಬಡಿಸಲಿದ್ದಾರೆ ಯವೂಚಾದ ಬಾಣಸಿಗರು.

ಸ್ಟಿಕಿ ರೈಸ್ ಇನ್ ಲೋಟಸ್ ಲೀಫ್, ಚಿಕನ್ ಆ್ಯಂಡ್ ಪ್ರಾನ್ ಸ್ಟಿಕಿ ರೈಸ್, ಪೋರ್ಕ್ ಬೆಲ್ಲಿ ಸ್ಟಿಕ್, ಚಿಕನ್ ಕ್ಲೇಪಾಟ್ ವಿತ್ ಮಶ್ರೂಂ, ವೈಲ್ಡ್ ಪ್ರಾನ್ ಕರ್ರಿ ಸೇರಿದಂತೆ ಹಲವು ಚೈನೀಸ್  ಸಸ್ಯಹಾರಿ ಮತ್ತು ಮಾಂಸಾಹಾರಿ ಖಾದ್ಯಗಳು ಉತ್ಸವದಲ್ಲಿ ಲಭ್ಯ.

ಸ್ಥಳ: ಯವೂಚಾ ರೆಸ್ಟೊರೆಂಟ್, ಒನ್‌ ಎಂ.ಜಿ. ಮಾಲ್, ಎಂ.ಜಿ. ರಸ್ತೆ.
ಸಮಯ: ಸೋಮವಾರದಿಂದ ಗುರುವಾರ ಮತ್ತು ಭಾನುವಾರ ಮಧ್ಯಾಹ್ನ  12 ರಿಂದ ರಾತ್ರಿ 11. ಶುಕ್ರವಾರ ಮತ್ತು ಶನಿವಾರ ಮಧ್ಯಾಹ್ನ 12 ರಿಂದ ರಾತ್ರಿ 1. ಕೊನೆಯ ದಿನ ಜೂನ್ 26

ADVERTISEMENT

*


ಡಾಬಾ ಬೈ ಕ್ಲಾರಿಡ್ಜೆಸ್‌
ಡಾಬಾ ಬೈ ಕ್ಲಾರಿಡ್ಜೆಸ್‌, ಪಂಜಾಬಿ ಆಹಾರ ಮೇಳ ‘ಡಾಬಾ ರೋಡ್ ಟ್ರಿಪ್’ ಅನ್ನು  ಆಯೋಜಿಸಿದೆ. ಶೆಫ್ ರವಿ ಸಕ್ಸೇನಾ ಅವರ ರೆಸಿಪಿಗಳಿಂದ ಸ್ಫೂರ್ತಿ ಪಡೆದು ಹೊಸ ರೀತಿಯ ಪಂಜಾಬಿ ಖಾದ್ಯಗಳನ್ನು ವಿಶೇಷವಾಗಿ ಉತ್ಸವಕ್ಕೆಂದು ತಯಾರು ಮಾಡಲಾಗಿದೆ.

ತವಾ ಚಿಕನ್ ಚಾಂಪ್, ಲಾರೆನ್ಸ್ ರೋಡ್‌ ಕಿ ಟಿಕ್ಕಿ, ಬರ್ವನ್ ಆಮ್ಲೆಟ್, ಮಚ್ಚಿ ದಿ ಟಿಕ್ಕಿ, ತಂದೂರಿ ಸಬ್ಜಿ, ತಂದೂರಿ ಅನಾನಸ್, ಗೋಬಿ ನುತ್ರಿ, ನುತ್ರಿ ಸಾಂಗ್ ಪನ್ನೀರ್,  ಪ್ರಮುಖ ಖಾದ್ಯಗಳು.
ಸ್ಥಳ: 2ನೇ ಮಹಡಿ, ಚಿಕ್ಕೂ ಸ್ಟೋರ್ ಮೇಲೆ, ಎಚ್‌ಎಎಲ್ 2ನೇ ಹಂತ.
ಸಮಯ– ಮಧ್ಯಾಹ್ನ 12 ರಿಂದ ರಾತ್ರಿ 11

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.