ADVERTISEMENT

ನಾಲಿಗೆ ಚುರುಗುಟ್ಟಿಸುವ ಚಟ್ನಿಪುಡಿ

​ಪ್ರಜಾವಾಣಿ ವಾರ್ತೆ
Published 22 ಮೇ 2015, 19:30 IST
Last Updated 22 ಮೇ 2015, 19:30 IST
ಹಾಗಲಕಾಯಿ ಪುಡಿ
ಹಾಗಲಕಾಯಿ ಪುಡಿ   

ಹಾಗಲಕಾಯಿ ಪುಡಿ
ಸಾಮಗ್ರಿ: ಅರ್ಧ ಕೆ.ಜಿ. ಹಾಗಲಕಾಯಿ, 4 ಚಮಚ ಒಣಮೆಣಸಿನಪುಡಿ, ಅರ್ಧ ಕಪ್‌ ಒಣಕೊಬ್ಬರಿ, ಸ್ವಲ್ಪ ಹುಣಸೇಹಣ್ಣು, ರುಚಿಗೆ ಉಪ್ಪು, 2 ಚಮಚ ತುಪ್ಪ, ಒಗ್ಗರಣೆಗೆ ಸಾಸಿವೆ, ಕರಿಬೇವು

ವಿಧಾನ: ಹಾಗಲಕಾಯಿ ತೊಳೆದು ಒಣಗಿಸಿಕೊಳ್ಳಿ. ನಂತರ ಇದನ್ನು ಚಿಕ್ಕದಾಗಿ ತುರಿದು ಅದಕ್ಕೆ ಸ್ವಲ್ಪ ಉಪ್ಪನ್ನು ಸವರಬೇಕು. ಅದರ ನೀರು ಸೋರಿದ ಮೇಲೆ ಅದನ್ನು ಚೆನ್ನಾಗಿ ಹಿಂಡಬೇಕು. ಒಂದು ಪ್ಯಾನ್‌ನಲ್ಲಿ ಸ್ವಲ್ಪ ತುಪ್ಪವನ್ನು ಹಾಗಲಕಾಯಿಯನ್ನು ಚೆನ್ನಾಗಿ ಫ್ರೈ ಮಾಡಬೇಕು. ಒಣ ಮೆಣಸಿನಪುಡಿ, ಕೊಬ್ಬರಿ, ಹುಣಸೇಹಣ್ಣು, ಉಪ್ಪು ಸೇರಿ ಮಿಕ್ಸಿಯಲ್ಲಿ ರುಬ್ಬಿ. ಸ್ವಲ್ಪ ತುಪ್ಪಕ್ಕೆ ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಅದರಲ್ಲಿ ರುಬ್ಬಿದ ಪದಾರ್ಥ ಹಾಕಿ ಕೈಯಾಡಿಸಿ ಸ್ವಲ್ಪ ಹೊತ್ತಿನ ನಂತರ ಕೆಳಗಿಳಿಸಿ.

ಸಾರಿನ ಪುಡಿ
ಸಾಮಗ್ರಿ:
4 ಕಪ್‌ ಕೊತ್ತಂಬರಿ, ಅರ್ಧ ಕಪ್‌ ಜೀರಿಗೆ, 12-15 ಕರಿಬೇವು, ಒಂದು ಟೇಬಲ್‌ ಸ್ಪೂನ್‌ ಸಾಸಿವೆ, ಒಂದು ಟೇಬಲ್‌ ಸ್ಪೂನ್‌ ಅರಿಶಿಣ ಪುಡಿ, ಸ್ವಲ್ಪ ಮೆಂತ್ಯ, ಸ್ವಲ್ಪ ಇಂಗು

ವಿಧಾನ: ಎಲ್ಲವನ್ನೂ ಪ್ರತ್ಯೇಕವಾಗಿ ಹುರಿದುಕೊಳ್ಳಬೇಕು. ಎಲ್ಲವನ್ನೂ ಸೇರಿಸಿ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಇದನ್ನು ಹುಳಿಯನ್ನದ ಗೊಜ್ಜಿಗೆ ಹಾಕಿದರೆ ರುಚಿ ಹೆಚ್ಚುತ್ತದೆ.

ADVERTISEMENT

ವಾಂಗಿಬಾತ್‌ ಪುಡಿ
ಸಾಮಗ್ರಿ: ಒಂದೂವರೆ ಕಪ್‌ ದಾಲ್ಚಿನ್ನಿ, ಒಂದು ಟೇಬಲ್‌ ಸ್ಪೂನ್‌ ಲವಂಗ, ಒಂದೂವರೆ ಚಮಚ ಮರಾಠ ಮೊಗ್ಗು, ಒಂದು ಮಸಾಲೆ ಎಲೆ, 4 ಅನಾನಸ್‌ ಹೂವುಎರಡೂವರೆ ಕಪ್‌ ಒಣಮೆಣಸು, ಒಂದೂವರೆ ಕಪ್‌ ಕೊತ್ತಂಬರಿ ಬೀಜ, ಒಂದೂವರೆ ಕಪ್‌ ಜೀರಿಗೆ, ಸ್ವಲ್ಪ ಉದ್ದಿನಬೇಳೆ, ಸ್ವಲ್ಪ ಕಡ್ಲೆಬೇಳೆ, ಸ್ವಲ್ಪ ಮೆಂತ್ಯ

ವಿಧಾನ: ಕೊನೆಯ ಮೂರು ಪದಾರ್ಥಗಳನ್ನು ಎಣ್ಣೆಹಾಕಿ ಹುರಿದುಕೊಳ್ಳಿ. ಉಳಿದವುಗಳನ್ನು ಹಾಗೆಯೇ ಪ್ರತ್ಯೇಕವಾಗಿ ಹುರಿದುಕೊಂಡು ಪುಡಿ ಮಾಡಿಕೊಳ್ಳಬೇಕು.

ಶೇಂಗಾ ಚಟ್ನಿಪುಡಿ
ಸಾಮಗ್ರಿ: ಕಾಲು ಕೆ.ಜಿ. ಶೇಂಗಾಬೀಜ (ಕಡ್ಲೆಕಾಯಿ), ಎರಡು ಗಡ್ಡೆ ಬೆಳ್ಳುಳ್ಳಿ 4 ಚಮಚ ಖಾರದ ಪುಡಿ, 2 ಕಪ್‌ ಒಣಕೊಬ್ಬರಿ, ರುಚಿಗೆ ಉಪ್ಪು, ಸ್ವಲ್ಪ ಇಂಗು, ಸ್ವಲ್ಪ ಹುಣಸೇಹಣ್ಣು.

ವಿಧಾನ: ಮೊದಲು ಶೇಂಗಾಬೀಜವನ್ನು ಹುರಿದು ಸಿಪ್ಪೆ ತೆಗೆದುಕೊಳ್ಳಿ. ಇದಕ್ಕೆ ಉಳಿದ ಸಾಮಗ್ರಿಗಳನ್ನು ಸೇರಿಸಿಕೊಂಡು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ. ಕೈಯಲ್ಲಿಯೇ ಕುಟ್ಟಿ ಪುಡಿ ಮಾಡಿದರೆ ರುಚಿ ಇನ್ನೂ ಹೆಚ್ಚು. ದೋಸೆ, ಪೂರಿ, ಚಪಾತಿ ಜೊತೆ ಇದನ್ನು ತಿನ್ನಬಹುದು.

ಬಿಸಿಬೇಳೆ ಬಾತ್‌ ಪುಡಿ
ಸಾಮಗ್ರಿ: 20-25 ಒಣ ಮೆಣಸು, ಕಾಲು ಕಪ್‌ ಕೊಬ್ಬರಿ ತುರಿ, 3 ಟೇಬಲ್‌ ಸ್ಪೂನ್‌ ಕೊತ್ತಂಬರಿ, ಅರ್ಧ ಚಮಚ ದಾಲ್ಚಿನ್ನಿ, 3-4 ಮರಾಠ ಮೊಗ್ಗು, 6-8 ಲವಂಗ, 2 ಟೇಬಲ್‌ ಸ್ಪೂನ್ ಉದ್ದಿನ ಬೇಳೆ, 2 ಟೇಬಲ್‌ ಸ್ಪೂನ್‌ ಕಡ್ಲೆಬೇಳೆ, ಸ್ವಲ್ಪ ಹುಣಸೇಹಣ್ಣು

ವಿಧಾನ: ಮೇಲೆ ತಿಳಿಸಿರುವ ಎಲ್ಲ ಸಾಮಗ್ರಿಗಳನ್ನು ಪ್ರತ್ಯೇಕವಾಗಿ ಹುರಿದುಕೊಂಡು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ. ಇದನ್ನು ಅನ್ನಕ್ಕೆ ಹಾಕಬೇಕು.

ಬೇಳೆಗಳ ಪುಡಿ

ಸಾಮಗ್ರಿ:  ಕಡ್ಲೆ ಬೇಳೆ, ಉದ್ದಿನ ಬೇಳೆ, ತೊಗರಿ ಬೇಳೆ, ಹೆಸರು ಬೇಳೆ ತಲಾ ಅರ್ಧ ಕಪ್‌, ಒಂದು ಕಪ್‌ ಒಣಕೊಬ್ಬರಿ, 5 ಚಮಚ ಖಾರದ ಪುಡಿ, ಒಂದು ಚಮಚ ಮಸಾಲೆ ಪುಡಿ, ರುಚಿಗೆ ಉಪ್ಪು, ಸ್ವಲ್ಪ ಹುಣಸೇಹಣ್ಣು, ಸ್ವಲ್ಪ ಇಂಗು, ಒಂದು ಸ್ವಲ್ಪ ಬೆಲ್ಲ

ವಿಧಾನ: ಎಲ್ಲಾ ಬೇಳೆಗಳನ್ನು ಮೊದಲು ಪ್ರತ್ಯೇಕವಾಗಿ ಹುರಿದುಕೊಳ್ಳಬೇಕು. ಇದು ಸೇರಿದಂತೆ ಉಳಿದೆಲ್ಲಾ ಸಾಮಗ್ರಿಗಳನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ. ಸ್ವಲ್ಪ ಎಣ್ಣೆಯಲ್ಲಿ ಒಂದು ಸ್ಪೂನ್ ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಮಾಡಬೇಕು. ಈ ಒಗ್ಗರಣೆಗೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿ ಹಾಕಬೇಕು. ಒಂದು ಸುತ್ತು ಕೈಯಾಡಿಸಿ ಒಲೆಯಿಂದ ಕೆಳಗಿಳಿಸಿ. ಇದನ್ನು ಸಾಂಬಾರ ಮಾಡುವಾಗ ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.