ADVERTISEMENT

ಪೇಸ್ಟ್ರಿ ಪ್ರಿಯರಿಗೆ ಸಿಹಿ ತಾಣ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2015, 19:30 IST
Last Updated 27 ಏಪ್ರಿಲ್ 2015, 19:30 IST

ರುಚಿರುಚಿಯಾದ ಪ್ರೇಸ್ಟ್ರಿಗಳೆಂದರೆ ಯಾರ ಬಾಯಲ್ಲಿ ತಾನೇ ನೀರೂರುವುದಿಲ್ಲ? ಅದರಲ್ಲೂ ಬೇಕರಿ ತಿನಿಸು ಪ್ರಿಯರ ಮುಂದೆ ವೈವಿಧ್ಯಮಯ ಸ್ವಾದದ ಪೇಸ್ಟ್ರಿಗಳನ್ನು ಪ್ರದರ್ಶನಕ್ಕಿಟ್ಟರಂತೂ ಮುಗಿಯಿತು. ಅವರಿಗೆ ತಿನ್ನುವ ಆಸೆಯನ್ನು ಅದುಮಿಟ್ಟುಕೊಳ್ಳುವುದೇ  ಕಷ್ಟವಾಗುತ್ತದೆ.  

ನಗರದ ಪೇಸ್ಟ್ರಿ ಪ್ರಿಯರ ನಾಲಗೆಯ ರುಚಿ ತಣಿಸುತ್ತಿದೆ ದಿವಾನ್‌ ಮಾಧವರಾವ್‌ ರಸ್ತೆಯಲ್ಲಿರುವ ಕೇಕ್‌ ಯಾರ್ಡ್‌. ಈ ಮಳಿಗೆ ಪೇಸ್ಟ್ರಿಗಳಿಗೆ ಹೆಸರುವಾಸಿ. ಮೂವತ್ತಕ್ಕೂ ಅಧಿಕ ಸ್ವಾದದ ಪೇಸ್ಟ್ರೀಸ್‌ ದೊರೆಯುತ್ತವೆ. ಚೀಸ್‌ ಕೇಕ್‌, ಬರ್ತ್‌ಡೇ ಕೇಕ್‌ಗಳೂ ಇಲ್ಲಿ ದೊರೆಯುತ್ತವೆ. ಸಿಂಗಲ್‌ ಪೀಸ್‌ ಪೇಸ್ಟ್ರೀಸ್‌ ಬೆಲೆ ₹30ರಿಂದ ಆರಂಭಗೊಂಡು₹60ರವರೆಗೆ ಇದೆ.

ಅಪ್ಪಟ ಸಸ್ಯಾಹಾರಿಗಳಿಗೆ ಇಲ್ಲಿ ಎಂಟು ಬಗೆಯ ಸ್ವಾದದ ಎಗ್‌ಲೆಸ್‌ ಕೇಕ್‌ಗಳೂ ಸಿಗುತ್ತವೆ. ಎಗ್‌ಲೆಸ್‌ ಕೇಕ್‌ಗಳ ಪ್ರದರ್ಶನಕ್ಕೆಂದೇ ಪ್ರತ್ಯೇಕ ಷೋಕೇಸ್‌ ಇದೆ. ಉಳಿದಂತೆ ಕೇಕ್‌ ಯಾರ್ಡ್‌ನಲ್ಲಿ ಎಲ್ಲ ಬಗೆಯ ಬೇಕರಿ ತಿನಿಸುಗಳು ದೊರೆಯುತ್ತವೆ. ಆರು ಬಗೆಯ ಬ್ರೆಡ್‌ಗಳು, ಹತ್ತು ಬಗೆಯ ಬಿಸ್ಕತ್‌ಗಳು, ಹನ್ನೆರಡು ಬಗೆಯ ಕೇಕ್‌ಗಳು, ಪಫ್ಸ್‌, ಪಿಜ್ಜಾ, ಪನ್ನೀರ್‌ ಪಫ್ಸ್‌, ಸ್ಪ್ರಿಂಗ್‌ ರೋಲ್‌, ಚನ್ನಾ ರೋಲ್‌ ಸಿಗುತ್ತವೆ.

‘ನಮ್ಮಲ್ಲಿ ಎಲ್ಲ ಬಗೆಯ ಬೇಕರಿ ತಿನಿಸುಗಳು ದೊರೆಯುತ್ತವೆ. ಆದರೆ, ನಮ್ಮ ಮಳಿಗೆ ಫೇಮಸ್‌ ಆಗಿರುವುದು ಪೇಸ್ಟ್ರೀಸ್‌ನಿಂದ. ಪೇಸ್ಟ್ರೀಸ್‌ನಲ್ಲಿ ಸಾಕಷ್ಟು ಬಗೆಗಳು ಲಭ್ಯ ಇವೆ. ಗ್ರಾಹಕರು ನಮ್ಮ ಬಳಿ ಬಂದು ಅವರಿಷ್ಟದ ಯಾವುದೇ ವಿನ್ಯಾಸದ ಕೇಕ್‌ಗಳನ್ನು ಕೇಳಿದರೂ ಮಾಡಿಕೊಡುತ್ತೇವೆ. ಒಂದು ಕಿ.ಲೋ. ಪೇಸ್ಟ್ರಿ ಬೆಲೆ ₹450ರಿಂದ ಪ್ರಾರಂಭಗೊಳ್ಳುತ್ತದೆ’ ಎನ್ನುತ್ತಾರೆ ಕೇಕ್‌ ಯಾರ್ಡ್‌ನ ಮಾಲೀಕ ಬಿ.ರಾಘವೇಂದ್ರ ಹೆಬ್ಬಾರ್‌.

ಸ್ಥಳ: ನಂ.3/3–1, ದಿವಾನ್‌ ಮಾಧವರಾವ್‌ ರಸ್ತೆ, ಸೌತ್‌ಕ್ರಾಸ್‌ ರಸ್ತೆ, ಬಸವನಗುಡಿ. ಮಾಹಿತಿಗೆ: 080 2661 1115.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.