ಮೈದಾ ಹಿಟ್ಟಿನಲ್ಲಿ ಮೃದುವಾದ ಸಿಹಿ ಶಂಕರಪೋಳಿ ಮಾಡುವುದು ಬಹಳ ಸುಲಭ! ಈ ಸಲ ಪ್ರಜಾವಾಣಿ ರೆಸಿಪಿಯಲ್ಲಿ ಸಿಹಿ ಶಂಕರಪೋಳಿ ಮಾಡುವ ವಿಧಾನವನ್ನು ವಿಡಿಯೊ ಮೂಲಕ ತೋರಿಸಿಕೊಡಲಾಗಿದೆ.
ಸಾಮಗ್ರಿಗಳು
1. ಮೈದಾ - 1/2 ಕಪ್
2. ಪುಡಿ ಸಕ್ಕರೆ - 1/4 ಕಪ್
3. ಡಾಲ್ಡಾ - 2 ಸ್ಪೂನ್
4. ಏಲಕ್ಕಿ ಪುಡಿ - ಸ್ವಲ್ಪ
5. ಎಣ್ಣೆ - ಕರಿಯಲು
ಮಾಡುವ ವಿಧಾನ: ಒಂದು ಬಾಣಲೆಯಲ್ಲಿ ಡಾಲ್ಡಾವನ್ನು ಕರಗಿಸಿ. ಇದಕ್ಕೆ ಪುಡಿ ಸಕ್ಕರೆ, ಮೈದಾ, ಏಲಕ್ಕಿ ಪುಡಿ ಹಾಕಿ ಹದವಾಗಿ ಹಿಟ್ಟನ್ನು ಕಲಸಿ, 5 ನಿಮಿಷದ ನಂತರ ಚಪಾತಿಯಂತೆ ಲಟ್ಟಿಸಿ, ಡೈಮಂಡ್ ಆಕಾರಕ್ಕೆ ಕತ್ತರಿಸಿ. ಕಾದ ಎಣ್ಣೆಯಲ್ಲಿ ಕರಿಯಿರಿ. ಆಮೇಲೆ ಪುಡಿ ಸಕ್ಕರೆಯನ್ನು ಮೇಲಿಂದ ಉದುರಿಸಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.