ಈ ವರ್ಷ ಅತಿ ಹೆಚ್ಚು ಸಂಭಾವನೆ ಪಡೆದ ನಟಿಯರ ಪಟ್ಟಿಯಲ್ಲಿ ಎಮ್ಮಾ ಸ್ಟೋನ್ ಮೊದಲ ಸ್ಥಾನದಲ್ಲಿದ್ದಾರೆ. ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಪಟ್ಟಿಯಿದು.
‘ಲಾ ಲಾ ಲ್ಯಾಂಡ್’ ಚಿತ್ರದ ನಾಯಕಿ ಎಮ್ಮಾ 2016ರ ಜೂನ್ನಿಂದ 2017 ಜೂನ್ವರೆಗೆ ₹166 ಕೋಟಿ ಸಂಭಾವನೆ ಪಡೆದಿದ್ದಾರೆ. ‘ಲಾ ಲಾ ಲ್ಯಾಂಡ್’ ಚಿತ್ರದ ನಟನೆಗೆ ಎಮ್ಮಾಗೆ ಆಸ್ಕರ್ ಪ್ರಶಸ್ತಿ ದೊರಕಿತ್ತು. ಇದು ಅವರ ಬೇಡಿಕೆ ಮತ್ತು ಸಂಭಾವನೆಯ ಗ್ರಾಫ್ ಏರಲು ಕಾರಣವಾಗಿತ್ತು.
ಎರಡು ದಶಕಗಳಿಂದ ಹಾಲಿವುಡ್ನಲ್ಲಿ ನಾಯಕನಟಿಯಾಗಿ ಗುರುತಿಸಿಕೊಂಡಿರುವ ಜೆನಿಫರ್ ಅನಿಸ್ಟನ್ ಅವರು ₹163 ಕೋಟಿ ಗಳಿಸುವ ಮೂಲಕ ಎಮ್ಮಾಳ ನಂತರದ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ಜೆನಿಫರ್ ಲಾರೆನ್ಸ್ ಈ ವರ್ಷ 153 ಕೋಟಿ ಸಂಭಾವನೆ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.