ADVERTISEMENT

ಆಟಕ್ಕೆ ಮುನ್ನ...

ಪಿಕ್ಚರ್ ಪ್ಯಾಲೆಸ್

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2014, 19:30 IST
Last Updated 20 ನವೆಂಬರ್ 2014, 19:30 IST

ಕ್ರಿಕೆಟ್‌ನಿಂದ ಜನರ ದೃಷ್ಟಿ ಬೇರೆ ಕ್ರೀಡೆಗಳೆಡೆ ಹರಿಯುವಂತೆ ಮಾಡುವ ಯತ್ನಗಳು ಈ ವರ್ಷದುದ್ದಕ್ಕೂ ನಡೆಯುತ್ತಾ ಬಂದಿವೆ. ಕಬಡ್ಡಿ, ಫುಟ್‌ಬಾಲ್‌ನಂಥ ಆಟಗಳತ್ತ ಒಂದಿಷ್ಟು ಪ್ರೇಕ್ಷಕರ ಗಮನ ವಾಲುವಂತೆ ಮಾಡಿದ ಬಾಲಿವುಡ್‌ ಮಂದಿಯ ಯತ್ನಗಳನ್ನು ಸಫಲ ಎನ್ನಬಹುದು. ಈಗ ಟೆನಿಸ್‌ನ ಸರದಿ.

ಚಾಂಪಿಯನ್ಸ್‌ ಟೆನಿಸ್‌ ಲೀಗ್‌ ಪಂದ್ಯಾವಳಿಯ ಬೆಂಗಳೂರು ಲೀಗ್‌ ಪಂದ್ಯಗಳು ಕಳೆಗಟ್ಟುವ ಮುನ್ನ ಅಮೆರಿಕದ ಟೆನಿಸ್‌ ಆಟಗಾರ್ತಿ ವೀನಸ್‌ ವಿಲಿಯಮ್ಸ್‌ ಹಾಡೊಂದಕ್ಕೆ ಹೆಜ್ಜೆ ಹಾಕಿದರು. ಸ್ಪೇನ್‌ನ ಟೆನಿಸ್‌ ಆಟಗಾರ ಫೆಲಿಸಿಯಾನೊ ಲೊಪೆಜ್‌ ಎಸೆದ ಚೆಂಡನ್ನು ಹಿಡಿದು ಸ್ಥಳೀಯ ಯುವ ಆಟಗಾರರು ಧನ್ಯರಾದರು. ವೀನಸ್‌ ಹಸ್ತಾಕ್ಷರ ಪಡೆಯುವಾಗ ಮುಖವನ್ನು ಮೊರದಗಲ ಮಾಡಿಕೊಂಡವರೂ ಅನೇಕರು.

ವೀನಸ್‌ ಹಾಗೂ ಫೆಲಿಸಿಯಾನೊ ಟೂರ್ನಿಯಲ್ಲಿ ಬೆಂಗಳೂರು ರ್‍್ಯಾಪ್ಟರ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕೆಎಸ್‌ಎಲ್‌ಟಿಎ ಟೆನಿಸ್‌ ಕ್ರೀಡಾಂಗಣದಲ್ಲಿ ಎಫ್‌ಎಂ ರೇಡಿಯೊ ವಾಹಿನಿ ‘94.3–ರೇಡಿಯೊ ಒನ್‌’ಗಾಗಿ ನಡೆದ ಟೂರ್ನಿಯ ಪ್ರಚಾರ ಕಾರ್ಯಕ್ರಮ ಕಳೆಕಟ್ಟಿತು ಎನ್ನುವುದನ್ನು ಈ ಚಿತ್ರಗಳೇ ಹೇಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.