ADVERTISEMENT

ಈಗ ಓಡಿ, ನೋಡೋಣ!

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2015, 19:30 IST
Last Updated 6 ಮಾರ್ಚ್ 2015, 19:30 IST
ಈಗ ಓಡಿ, ನೋಡೋಣ!
ಈಗ ಓಡಿ, ನೋಡೋಣ!   

ಅಂತರರಾಷ್ಟ್ರೀಯ ಮಹಿಳೆಯರ ದಿನಾಚರಣೆಯ ಅಂಗವಾಗಿ ಯುಬಿ ಸಿಟಿಯ ದಿ ಕಲೆಕ್ಷನ್‌ನಲ್ಲಿ ದೇಶದ ಮೊಟ್ಟ ಮೊದಲ ಸ್ಟಿಲ್ಲೆಟೊ ರನ್ (ಎತ್ತರದ ಪಾದರಕ್ಷೆಗಳನ್ನು ಧರಿಸಿ ಓಡುವ ಸ್ಪರ್ಧೆ) ಕಾರ್ಯಕ್ರಮ ಏರ್ಪಡಿಸಿದೆ.

ಎಲ್ಲೆ ಸಾದರಪಡಿಸುತ್ತಿರುವ ಹಾಗೂ ಗೋಲ್ಡ್ ರಷ್ ಎಂಟರ್‌ಟೇನ್‌ಮೆಂಟ್ ಪ್ರೈ. ಲಿ. ನಿರ್ಮಾಣದ ಈ ಕಾರ್ಯಕ್ರಮ ಮಾರ್ಚ್ ೮ರಂದು ಭಾನುವಾರ ಬೆಳಗ್ಗೆ ೧೦ ಗಂಟೆಗೆ, ಪೋರ್ಚ್‌ನಲ್ಲಿ ನಡೆಯಲಿದೆ. ಪುರುಷರೂ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದ್ದು, ಈ ಕಾರ್ಯಕ್ರಮದ ವಿಶೇಷತೆಯಾಗಿದೆ. ಪುರುಷರಿಗೆ ಸ್ಟಿಲ್ಟ್‌ಗಳನ್ನು (ಊರುಗೋಲು) ನೀಡಲಾಗುತ್ತದೆ. ಇದನ್ನು ಧರಿಸಿ ಅವರು ತಮ್ಮ ಸಂಗಾತಿಗಳೊಂದಿಗೆ ಓಡುವ ಮೂಲಕ ಅವರನ್ನು ಬೆಂಬಲಿಸಬಹುದು. ೫೦ ಮೀ ಓಟವನ್ನು ಯೋಜಿಸಲಾಗಿದೆ. ಮಹಿಳೆಯರು ಕನಿಷ್ಠ ೩.೫ ಎತ್ತರದ ಪಾದರಕ್ಷೆಗಳನ್ನು ಧರಿಸಿ ಓಡಬೇಕು.

ಮೊದಲ ಮೂರು ವಿಜೇತರಿಗೆ ಬಹುಮಾನಗಳನ್ನು ನೀಡಲಾಗುತ್ತದೆ ಮತ್ತು ಉಡುಗೊರೆಗಳಾಗಿ ೧೦ ಫಾಸ್ಸಿಲ್ ಕೈಗಡಿಯಾರಗಳು ಒಳಗೊಂಡಂತೆ ಅನಿರೀಕ್ಷಿತ ಬಹುಮಾನಗಳಿರುತ್ತವೆ. 

ವನಿತಾ ಅಶೋಕ್ (ಫಿಟ್‌ನೆಸ್ ತಜ್ಞೆ), ಅರ್ಚನಾ ಜಯಕೃಷ್ಣನ್ (ರೂಪದರ್ಶಿ/ನಟಿ), ಲಕ್ಷ್ಮಿ ಜಗಮೋಹನ್ (ವಿನ್ಯಾಸಗಾರರು), ಎಲಿಕ್ಸಿರ್ (ರೂಪದರ್ಶಿ), ಸೋನ್ಯಾ ಸೂರಿ (ಒಳಾಂಗಣ ವಿನ್ಯಾಸಗಾರರು), ಪ್ರಿಯಾ ನಾಯಕ್ (ರೂಪದರ್ಶಿ) ಹಾಗೂ ಅರ್ಚರ್ (ರೂಪದರ್ಶಿ) ಸೇರಿದಂತೆ ಇನ್ನೂ ಅನೇಕರು ಈ ವಿನೋದಭರಿತ ಕಾರ್ಯಕ್ರಮದಲ್ಲಿ  ಭಾಗವಹಿಸುತ್ತಿದ್ದಾರೆ. ನೋಂದಣಿಗಾಗಿ: +೯೧ ೯೮೪೪೧ ೧೧೯೪೧.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.