ADVERTISEMENT

ಉದ್ದೇಶ ಒಂದು... ಹೆಜ್ಜೆ ನಾಲ್ಕಾರು...

ಪ್ರಜಾವಾಣಿ ಚಿತ್ರ
Published 26 ಫೆಬ್ರುವರಿ 2015, 19:30 IST
Last Updated 26 ಫೆಬ್ರುವರಿ 2015, 19:30 IST

ಜಾತಿ, ಧರ್ಮ, ವಯಸ್ಸು ಎಲ್ಲವನ್ನೂ ಮರೆತ ಮಹಿಳೆಯರು ಒಂದೇ ಉದ್ದೇಶ, ಒಂದೇ ಆಶಯದೊಂದಿಗೆ ನೂರಾರು ಸಂಖ್ಯೆಯಲ್ಲಿ, ನಾಲ್ಕಾರು ಹೆಜ್ಜೆ ಹಾಕಿದರು.

ಹಸುಗೂಸುಗಳನ್ನು ಕಟ್ಟಿಕೊಂಡು, ಎಳೆ ಕಂದಮ್ಮಗಳನ್ನು ಎದೆಗವುಚಿಕೊಂಡು ಓಟಕ್ಕೆ ನಿಂತ ಗಟ್ಟಿಗರು ಅಲ್ಲಿದ್ದರು. ದಣಿವರಿಯದ ಗರ್ಭಿಣಿಯರೂ ಓಟಕ್ಕೆ ಹೆಜ್ಜೆ ಹಾಕಿದರು. ಮಹಿಳಾ ಸಬಲೀಕರಣ ಮತ್ತು ಸ್ತನ ಕ್ಯಾನ್ಸರ್‌ ಬಗ್ಗೆ ಅರಿಯುವುದು ಮತ್ತು ಸಾಮಾನ್ಯರಲ್ಲಿ ಆ ಬಗ್ಗೆ ಜಾಗೃತಿ ಮೂಡಿಸುವುದು ಅವರಲ್ಲಿ ಇಂಥದ್ದೊಂದು ಚೈತನ್ಯ ತುಂಬಿತ್ತು.

ಇತ್ತೀಚೆಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಹಾಗೂ ಯುನೈಟೆಡ್‌ ಸಿಸ್ಟರ್ಸ್‌ ಪ್ರತಿಷ್ಠಾನದ ಸಹಯೋಗದಲ್ಲಿ ನಡೆದ ‘ಪಿಂಕಥಾನ್‌–2015’ ಮ್ಯಾರ­ಥಾನ್‌ನಲ್ಲಿ ಕಂಡುಬಂದ ದೃಶ್ಯಗಳಿವು.

ಕಂಠೀರವ ಕ್ರೀಡಾಂಗಣದಿಂದ ಆರಂಭವಾದ ಮ್ಯಾರಥಾನ್‌ನಲ್ಲಿ ಸುಮಾರು 10 ಸಾವಿರ ಮಹಿಳೆಯರು ಒಂದೇ ಉದ್ದೇಶಕ್ಕೆ ಒಂದಾಗಿ ಪಾದ ಬೆಳೆಸಿದ್ದರು. ಕ್ಯಾನ್ಸರ್‌ನಿಂದ ಗುಣ­ಮುಖ­ರಾದವರು, ಕಿವುಡ–ಮೂಕ ಬಾಲಕಿಯರು ಮ್ಯಾರಥಾನ್‌ಗೆ ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.