ADVERTISEMENT

ಕಾಕೋಳು ದೇವಸ್ಥಾನದಲ್ಲಿ 85ನೇ ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 19:30 IST
Last Updated 19 ಮಾರ್ಚ್ 2018, 19:30 IST
ಕಾಕೋಳು ದೇವಸ್ಥಾನದಲ್ಲಿ 85ನೇ ಬ್ರಹ್ಮರಥೋತ್ಸವ
ಕಾಕೋಳು ದೇವಸ್ಥಾನದಲ್ಲಿ 85ನೇ ಬ್ರಹ್ಮರಥೋತ್ಸವ   

ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಕಾಕೋಳುನಲ್ಲಿರುವ ಚತುರ್ಭುಜ ವೇಣುಗೋಪಾಲಸ್ವಾಮಿ ಮತ್ತು ವ್ಯಾಸರಾಜ ಸ್ವಾಮಿ ಪ್ರತಿಷ್ಠಿತ ಕಂಬದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಈಗ ಸಂಭ್ರಮದ ವಾತಾವರಣ.

ವೇಣುಗೋಪಾಲಸ್ವಾಮಿ ದೇವಾಲಯದ ಈ ಬಾರಿಯ ಬ್ರಹ್ಮರಥೋತ್ಸವಕ್ಕೆ 85ನೇ ವಸಂತದ ಸಂಭ್ರಮ. ಈ ಹಿನ್ನೆಲೆಯಲ್ಲಿ ಪಾಂಚಜನ್ಯ ಪ್ರತಿಷ್ಠಾನದ ಸಹಯೋಗದಲ್ಲಿ ಮಾರ್ಚ್ 20ರಿಂದ 25ರವರೆಗೆ ಹಲವು ಉತ್ಸವ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮಾರ್ಚ್ 20ರಂದು ಬೆಳಿಗ್ಗೆ 85ನೇ ಬ್ರಹ್ಮ ರಥೋತ್ಸವ ಕಾರ್ಯಕ್ರಮಗಳಿಗೆ ಸೋಸಲೆ ವ್ಯಾಸರಾಜಮಠದ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಚಾಲನೆ ನೀಡುವರು. ಸಂಜೆ ದೊಡ್ಡಬಳ್ಳಾಪುರದ ಡಾ.ಜಿ. ಶ್ರೀನಿವಾಸ ರಾಘವನ್ ಮತ್ತು ಮಕ್ಕಳ ಸಾರಥ್ಯದಲ್ಲಿ ಗರುಡ ಧ್ವಜಾರೋಹಣ, ಗರುಡ ಬುತ್ತಿ, ತೊಟ್ಟಿಲು ಪೂಜೆ ಆಯೋಜಿಸಲಾಗಿದೆ.

ADVERTISEMENT

ಮಾರ್ಚ್ 21ರಂದು ಕಡಗತ್ತೂರು ಪುರುಷೋತ್ತಮಾಚಾರ್ಯ ಅವರಿಂದ ಪ್ರವಚನ ಆಯೋಜಿಸಲಾಗಿದೆ. ಸಂಜೆ ನಾದಸ್ವರ, ಸ್ಯಾಕ್ಸೋಫೋನ್ ವಾದನ, ಮಹಾಕಲ್ಯಾಣೋತ್ಸವ ನಡೆಯಲಿದೆ. ಮಾ.22ರಂದು ಗರುಡೋತ್ಸವ, ಪುಷ್ಪಾಲಂಕೃತ ಮಹಾರಥಾರೋಹಣ, ತೇರಿನ ಉತ್ಸವ ನಡೆಯಲಿದೆ. 23ರಂದು ಹರಿದಾಸ ನಮನ, ಗೋಪಿವಲ್ಲಭ ಗಾನಸುಧಾ, ವಸಂತೋತ್ಸವ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ: 98450 75250, 97393 69621.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.