ADVERTISEMENT

‘ಕಾರ್ಬನ್’ ಕಿರುಚಿತ್ರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 19:30 IST
Last Updated 22 ಆಗಸ್ಟ್ 2017, 19:30 IST
ನವಾಜುದ್ದೀನ್
ನವಾಜುದ್ದೀನ್   

ನವಾಜುದ್ದೀನ್ ಸಿದ್ಧಿಕಿ ಮತ್ತು ಪ್ರಾಚಿ ದೇಸಾಯಿ ನಟನೆಯ, ಸಾಮಾಜಿಕ ಸಂದೇಶವಿರುವ ಕಿರುಚಿತ್ರ ‘ಕಾರ್ಬನ್’ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದೆ.

ಈ ಚಿತ್ರದ ಕತೆ ನಡೆಯುವುದು 2067ರಲ್ಲಿ.. ಅಲ್ಲಿ ಆಮ್ಲಜನಕಕ್ಕಾಗಿ ಯುದ್ಧಗಳು ನಡೆಯುತ್ತವೆ. ಇಂಗಾಲ ಬಿಟ್ಟು ಅಲ್ಲಿ ಇನ್ನೇನೂ ಉಚಿತವಾಗಿ ದೊರಕುವುದಿಲ್ಲ. ಈಗ ನಾವು ಎಚ್ಚೆತ್ತುಕೊಳ್ಳದಿದ್ದರೆ ಕರಾಳ ದಿನಗಳು ಕಾದಿವೆ ಎಂಬ ಸಂದೇಶ ಚಿತ್ರದಲ್ಲಿದೆ.

ಸಾಮಾಜಿಕ ಸಂದೇಶವಿದ್ದರೂ ಚಿತ್ರವನ್ನು ವಾಚ್ಯವಾಗಿಸದೆ ಕಮರ್ಷಿಯಲ್ ಚೌಕಟ್ಟಿನಲ್ಲೇ ಸಂದೇಶ ತಲುಪಿಸಿದ್ದಾರೆ ನಿರ್ದೇಶಕ ಮೈತ್ರಿ ಬಾಜಪೇಯಿ. ಚಿತ್ರದಲ್ಲಿ ತೋರಿಸಿದ ಫ್ಯಾಕ್ಟರಿ ಹೊಗೆ, ಕಲುಷಿತ ವಾತಾವರಣ ಚಿತ್ರಗಳು ನೋಡುಗನಲ್ಲಿ 2067ರಲ್ಲಿ ಬದುಕುತ್ತಿರುವ ಭ್ರಮೆ ಉಂಟುಮಾಡುತ್ತವೆ.

ADVERTISEMENT

ಎಲ್ಲ ಕಡೆ ಇಂಗಾಲವೇ ತುಂಬಿರುವ ಪ್ರಪಂಚದಲ್ಲಿ ಆಮ್ಲಜನಕ ಪೂರೈಸುವ ದಂಧೆ ಹುಟ್ಟಿಕೊಂಡಿದೆ. ಶುದ್ಧ ಆಮ್ಲಜನಕಕ್ಕಾಗಿ ಕೋಟ್ಯಾಂತರ ರೂಪಾಯಿಗಳನ್ನು ಚೆಲ್ಲುತ್ತಾರೆ. ಮನುಷ್ಯ ಮನುಷ್ಯನನ್ನು ಕೊಲ್ಲುತ್ತಾನೆ. ಯಾವ ಬಾಲಿವುಡ್ ಆ್ಯಕ್ಷನ್ ಸಿನಿಮಾಕ್ಕೆ ಕಡಿಮೆ ಇಲ್ಲದಂತೆ ಅದ್ದೂರಿಯಾಗಿ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ನವಾಜುದ್ದೀನ್ ಮಾಮೂಲಿನಂತೆಯೇ ಅದ್ಬುತವಾಗಿ ನಟಿಸಿದ್ದಾರೆ. ಅವರ ಜತೆಗೆ ಪ್ರಾಚಿ ದೇಸಾಯಿ ಮತ್ತು ಆಮ್ಲಜನಕ ಸ್ಮಗ್ಲರ್ ಯುವಕನ ಪಾತ್ರದಲ್ಲಿ ಜಾಕಿ ಬಗ್ನಾನಿ ಕೂಡ ಅತ್ಯುತ್ತಮ ಅಭಿನಯ ಪ್ರದರ್ಶಿಸಿದ್ದಾರೆ. ಚಿತ್ರ ಯೂಟ್ಯೂಬ್‌ನಲ್ಲಿ ಬಿಡುಗಡೆ ಆದ ಕೇವಲ 5 ಗಂಟೆಯಲ್ಲಿ 21 ಲಕ್ಷ ಮಂದಿ ವೀಕ್ಷಿಸಿದ್ದಾರೆ.

ಕಿರುಚಿತ್ರ ನೋಡಲು: bit.ly/2uZl9CZ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.