ADVERTISEMENT

ಕೃಷಿ ಮತ್ತು ಆಹಾರ ಮೇಳ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2014, 19:30 IST
Last Updated 21 ಆಗಸ್ಟ್ 2014, 19:30 IST

ಕೃಷಿಗೆ ಸಂಬಂಧಿಸಿದ ಹೊಸ ತಂತ್ರಜ್ಞಾನಗಳು, ಸಂಶೋಧನೆಗಳು, ಮತ್ತು ಅವನ್ನು ಅಳವಡಿಸಿಕೊಂಡು ಯಶಸ್ವಿಯಾಗಿರುವ ಅತ್ಯುತ್ತಮ ಕೃಷಿ ವಿಧಾನಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ಈ ಬಾರಿಯ ಕೃಷಿ ಮೇಳದಲ್ಲಿ ಸಿಗಲಿದೆ.

ಆಗಸ್ಟ್ 22 ರಿಂದ 24ರವರೆಗೆ ನಡೆಯಲಿರುವ ‘ಅಗ್ರಿಟೆಕ್ ಇಂಡಿಯಾ 2014’ರಲ್ಲಿ ಪ್ರದರ್ಶನದಲ್ಲಿ ಇಂಡಿಯಾ ಫುಡೆಕ್ಸ್, ಗ್ರೀನ್‌ಟೆಕ್‌ ಇಂಡಿಯಾ, ಡೈರಿಟೆಕ್ ಇಂಡಿಯಾ, ಹಾಗೂ ಅಂತರರಾಷ್ಟ್ರೀಯ ಪೌಲ್ಟ್ರಿ ಹಾಗೂ ಲೈವ್‍ಸ್ಟಾಕ್ ಪ್ರದರ್ಶನ, ಮೀಟ್‌ಟೆಕ್‌ ಏಷಿಯಾ ಮತ್ತು ಫ್ಲೋರಾಟೆಕ್ ಐಪಿಎಂ ಇಂಡಿಯಾ ಪ್ರದರ್ಶನಗಳೂ ಇರಲಿವೆ.

ರೈತರು, ಆಹಾರ ಸಂಸ್ಕರಣೆದಾರರು, ತಾಜಾ ಉತ್ಪನ್ನಗಳ ಆಮದು ಮತ್ತು ರಫ್ತುದಾರರು ಭಾಗವಹಿಸಲಿದ್ದು, ‘ತೋಟದಿಂದ ತಟ್ಟೆಗೆ’ ಉತ್ಪನ್ನಗಳ ಪರಿಕಲ್ಪನೆ ಕುರಿತು, ಸುಗ್ಗಿ ನಂತರ ಬೆಳೆಗಳ ಆರೈಕೆ, ನಿರ್ವಹಣೆ, ಮೌಲ್ಯವರ್ಧನೆ, ಮಾರುಕಟ್ಟೆ ಪರಿಹಾರೋಪಾಯಗಳು ಮುಂತಾದವುಗಳನ್ನು ಅರ್ಥೈಸಿಕೊಳ್ಳುವ ಅವಕಾಶ ಇದಾಗಿದೆ. 8 ದೇಶಗಳು ಈ ಮೇಳದಲ್ಲಿ ಭಾಗವಹಿಸಲಿದ್ದು, ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಬಿ.ಐ.ಇ.ಸಿ)ದಲ್ಲಿ ಮೇಳ ನಡೆಯಲಿದೆ.
ಮಾಹಿತಿಗೆ: www.agritechindia.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.