ADVERTISEMENT

ಕೆಟಿಎಂ ಬೈಕ್‌ ರೇಸ್‌

​ಪ್ರಜಾವಾಣಿ ವಾರ್ತೆ
Published 29 ಮೇ 2015, 19:30 IST
Last Updated 29 ಮೇ 2015, 19:30 IST
ಕೆಟಿಎಂ  ಬೈಕ್‌ ರೇಸ್‌
ಕೆಟಿಎಂ ಬೈಕ್‌ ರೇಸ್‌   

ಕೆಟಿಎಂ ರೇಸಿಂಗ್‌ ಸಂಸ್ಥೆ ವತಿಯಿಂದ ಬೆಂಗಳೂರು ನಗರದ ಕೆಟಿಎಂ ಬೈಕ್‌ ಮಾಲೀಕರಿಗಾಗಿ ‘ರೇಸಿಂಗ್‌’ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಆರೆಂಜ್‌ ಡೇ ಅಂಗವಾಗಿ ಏರ್ಪಡಿಸಲಾಗಿರುವ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಕೇವಲ ನಗರದ ಕೆಟಿಎಂ ಷೋರೂಮ್‌ಗಳಲ್ಲಿ ಬೈಕ್‌ ಖರೀದಿಸಿರುವವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಶನಿವಾರ ಸಂಜೆ 6ಕ್ಕೆ ಕನಕಪುರ ರಸ್ತೆಯ ಮೆಟ್ರೊ ಕ್ಯಾಷ್‌ ಅಂಡ್‌ ಕ್ಯಾರಿ ಆವರಣದಲ್ಲಿ ಬೈಕ್‌ ರೇಸ್‌ ಆರಂಭವಾಗಲಿದೆ. ರೇಸ್‌ನಲ್ಲಿ ಮೂರು ಹಂತಗಳಿದ್ದು, ಮೂರು ಹಂತಗಳಲ್ಲಿ ಜಯ ಗಳಿಸಿದವರಿಗೆ ಬಹುಮಾನ ವಿತರಿಸಲಾಗುವುದು.

ರೇಸ್‌ ನಡೆದ ನಂತರ ರಾತ್ರಿ 8ಕ್ಕೆ ಕೆಟಿಎಂನ ಸ್ಟಂಟ್‌ ಟೀಮ್‌ ವತಿಯಿಂದ ಸಾಹಸ ಪ್ರದರ್ಶನ ಏರ್ಪಡಿಸಲಾಗಿದೆ. ಇದರಲ್ಲಿ ವೃತ್ತಿಪರ ಸ್ಟಂಟ್‌ಮ್ಯಾನ್‌ಗಳು ಸಾಹಸ ಪ್ರದರ್ಶನ ಪ್ರದರ್ಶಿಸಲಿದ್ದಾರೆ.

ಈ ಸ್ಪರ್ಧೆಯಲ್ಲಿ ಕೆಟಿಎಂ ಮಾಲೀಕರಿಗೆ ಆರ್‌ಸಿ 200 ಮತ್ತು 200 ಡ್ಯೂಕ್ ಬೈಕ್‌ಗಳ ಕಾರ್ಯಸಾಮರ್ಥ್ಯದ ಬಗ್ಗೆ ಸಮಗ್ರವಾಗಿ ಅರ್ಥ ಮಾಡಿಕೊಳ್ಳಲು ಅವಕಾಶ ಒದಗಿಸಲಾಗಿದೆ. ಈವರೆಗೆ ಕೆಟಿಎಂ, ದೆಹಲಿ, ಪುಣೆ, ಹೈದರಾಬಾದ್, ಬರೋಡ, ಅಹಮೆದಾಬಾದ್, ನೋಯಿಡಾ ಮತ್ತು ಭಾರತದ ಇತರೆ ನಗರಗಳಲ್ಲಿ ಈ ಆರೆಂಜ್ ಡೇಯನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಸ್ಪರ್ಧೆಯನ್ನು ವೀಕ್ಷಿಸಲು ಬಯಸುವವರಿಗಾಗಿ ಶನಿವಾರ ಸಂಜೆ 5 ಗಂಟೆಯಿಂದಲೇ ಉಚಿತ ನೊಂದಣಿ ಕಾರ್ಯ ಆರಂಭವಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.