ADVERTISEMENT

ಕೇರಳ ಸುಂದರಿಯ ಬಳುಕು

ಹರವು ಸ್ಫೂರ್ತಿ
Published 25 ಜೂನ್ 2017, 19:30 IST
Last Updated 25 ಜೂನ್ 2017, 19:30 IST
ಕೇರಳ ಸುಂದರಿಯ ಬಳುಕು
ಕೇರಳ ಸುಂದರಿಯ ಬಳುಕು   

ಆರು ವರ್ಷಗಳಿಂದ ರೂಪದರ್ಶಿಯಾಗಿ ಬೆಳಗುತ್ತಿರುವವರು ಎಲಿಜಬೆತ್ ಥಡಿಕರಾನ್. ಗರುಡಾ ಮಾಲ್‌ನ 12ನೇ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ಫ್ಯಾಷನ್ ಷೋ ರ್‌್ಯಾಂಪ್‌ನಲ್ಲೂ ಅವರೇ ಮಿಂಚಿದರು. ಈ ಚೆಲುವೆ ಮೆಟ್ರೊದೊಂದಿಗೆ ತಮ್ಮ ಮಾಡೆಲಿಂಗ್ ಅನುಭವ ಹಂಚಿಕೊಂಡ ಪರಿ ಇದು.

*ಮಾಡೆಲಿಂಗ್ ಕ್ಷೇತ್ರಕ್ಕೆ ಬಂದಿದ್ದು ಹೇಗೆ?
ನಾನು ಮೂಲತಃ ಕೇರಳದವಳು. ‘ಮಿಸ್ ಕೇರಳ’ ಸ್ಪರ್ಧೆ ಆಯೋಜನೆಗೊಂಡಿತ್ತು. ಸುಮ್ಮನೆ, ತಮಾಷೆಗೆಂದು ಆ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಆಶ್ಚರ್ಯವೆಂದರೆ ಮೊದಲ ಸುತ್ತಿನಲ್ಲೇ ಅಂತಿಮ ಪಟ್ಟಿಯಲ್ಲಿ ಆಯ್ಕೆಯಾದೆ. ಕೊನೆಗೆ ಸ್ಪರ್ಧೆಯಲ್ಲೂ ಗೆದ್ದೆ. ಮಾಡೆಲಿಂಗ್ ಕ್ಷೇತ್ರಕ್ಕೆ ಬರಬೇಕು ಎಂಬ ಆಸೆ ಇದ್ದರೂ, ಹೇಗೆ ಬರಬೇಕು ಎಂಬ ಬಗ್ಗೆ ಗೊತ್ತಿರಲಿಲ್ಲ. ಕಾಕತಾಳೀಯವೆಂಬಂತೆ ಸ್ಪರ್ಧೆಯಲ್ಲಿ ಗೆದ್ದು ಮಾಡೆಲಿಂಗ್‌ ಕ್ಷೇತ್ರಕ್ಕೆ ಬಂದೆ.

* ನೀವು ಓದಿದ್ದು ದಂತ ವೈದ್ಯಕೀಯ, ರೂಪದರ್ಶಿಯಾಗಿ ವೃತ್ತಿ ಬದುಕು ಹೇಗಿದೆ?
‘ಮಿಸ್‌ ಕೇರಳ’ ಪುರಸ್ಕಾರ ಸಿಕ್ಕ ನಂತರ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದೆ. ಈ ನಗರ ಫ್ಯಾಷನ್ ಡಿಸೈನ್ ಮತ್ತು ಮಾಡೆಲಿಂಗ್ ಮಾಡುವವರಿಗೆ ಹೆಬ್ಬಾಗಿಲು. ಇದರಿಂದ ನನಗೆ ಇನ್ನೂ ಅನುಕೂಲವಾಯ್ತು. ರಾಮಯ್ಯ ಕಾಲೇಜಿನಲ್ಲಿ ದಂತ ವೈದ್ಯಕೀಯ ಪದವಿ ಮಾಡುತ್ತಾ, ಫ್ಯಾಷನ್‌ ಷೋಗಳಲ್ಲಿ ಭಾಗವಹಿಸಲು ಆರಂಭಿಸಿದೆ.

ADVERTISEMENT

ಈಗ ನನ್ನ ಓದು ಮುಗಿದಿದೆ. ರೂಪದರ್ಶಿಯಾಗಿ ಉತ್ತಮ ಬದುಕು ಕಾಣುತ್ತಿದ್ದೇನೆ. ಒಳ್ಳೆಯ ಅವಕಾಶಗಳು ಬರುತ್ತಿವೆ. ಹಾಗೆಂದು ದಂತ ವೈದ್ಯಕೀಯ ವೃತ್ತಿಯನ್ನು ಬಿಟ್ಟಿಲ್ಲ. ವೃತ್ತಿ, ಪ್ರವೃತ್ತಿ ಎರಡನ್ನೂ ನಿರ್ವಹಿಸಿಕೊಂಡು ಹೋಗುತ್ತಿದ್ದೇನೆ.

* ರೂಪದರ್ಶಿಯಾಗಲು ನಿಮ್ಮನು ನೀವು ಹೇಗೆ ಗ್ರೂಮ್ ಮಾಡಿಕೊಂಡಿರಿ?
ಪ್ರಸಾದ್ ಬಿದಪ್ಪ ಪ್ರತಿ ವರ್ಷ ರೂಪದರ್ಶಿಯಾಗಲು ಬಯಸುವವರಿಗಾಗಿ ಆಡಿಷನ್ ಮಾಡುತ್ತಾರೆ. ಈ ಆಡಿಷನ್‌ನಲ್ಲಿ ನಾನೂ ಆಯ್ಕೆಯಾದೆ. ಅವರಿಂದ ಸಾಕಷ್ಟು ಕಲಿತೆ. ಫ್ಯಾಷನ್ ಕ್ಷೇತ್ರದ ಬಗ್ಗೆ, ರೂಪದರ್ಶಿಯಾಗಿ ಬದುಕು ಕಟ್ಟಿಕೊಳ್ಳುವ ಬಗ್ಗೆ, ರ್‌್ಯಾಂಪ್‌ ವಾಕ್ ಮಾಡುವ ಬಗ್ಗೆ, ಬಗೆಬಗೆ ವಿನ್ಯಾಸದ ಬಟ್ಟೆಗಳನ್ನು ತೊಡುವುದರ ಜೊತೆ ಅದನ್ನು ಕ್ಯಾರಿ ಮಾಡುವುದೂ ಮುಖ್ಯ. ಇಂಥ ವಿಚಾರಗಳ ಬಗ್ಗೆ ಅವರು ನನಗೆ ಸಾಕಷ್ಟು ಕಲಿಸಿದರು.

* ಫಿಟ್‌ನೆಸ್‌ಗಾಗಿ ನೀವು ಮಾಡುವ ಕಸರತ್ತು ಮತ್ತು ಆಹಾರ...
ಮಾಡೆಲಿಂಗ್‌ ಲೋಕದಲ್ಲಿ ಫಿಟ್‌ನೆಸ್‌ ತುಂಬಾ ಮುಖ್ಯ. ನಾನು ಪ್ರತಿದಿನ ಬೆಳಿಗ್ಗೆ 6ಕ್ಕೆ ಎದ್ದು ವಾರ್ಮ್‌ ಅಪ್ ಆಗಿ, ಒಂದು ಗಂಟೆ ಯೋಗ ಮಾಡುತ್ತೇನೆ. ನಂತರ ಈಜು, ಜಿಮ್. ತಿಂಡಿಗೆ ಮೊಟ್ಟೆ, ಮೊಳಕೆ ಕಾಳು, ಹಣ್ಣು, ಹಾಲು ಸೇವಿಸುತ್ತೇನೆ. ಊಟದಲ್ಲಿ ಅನ್ನ, ಚಪಾತಿ, ಮೀನು, ಕೋಳಿ, ತರಕಾರಿ ಇರುತ್ತದೆ. ಮೂರು ಹೊತ್ತು ಊಟ ಮಾಡುವುದನ್ನು ಐದು ಹೊತ್ತಿಗೆ ಹಂಚಿಕೊಂಡು ಸ್ವಲ್ಪ ಸ್ವಲ್ಪ ತಿನ್ನುತ್ತೇನೆ. ರಾತ್ರಿ ಊಟ 6.30ಕ್ಕೆ ಮುಗಿಯುತ್ತೆ. 8 ಗಂಟೆಗೆ ಒಂದಿಷ್ಟು ಹಣ್ಣು ಸೇವಿಸುತ್ತೇನೆ ಅಷ್ಟೆ.

* ಫ್ಯಾಷನ್‌ ಬಗ್ಗೆ ನಿಮ್ಮ ವ್ಯಾಖ್ಯಾನ..
ಏನೇ ಧರಿಸಿದರೂ ಆರಾಮದಾಯಕವಾಗಿರಬೇಕು. ನಮಗೆ ಕಂಫರ್ಟ್ ಫೀಲ್ ಆಗಬೇಕು. ಅದೇ ಫ್ಯಾಷನ್. ಟ್ರೆಂಡ್‌ ಪ್ರತಿದಿನ ಬದಲಾಗುತ್ತಿರುತ್ತದೆ. ಅದರ ಸೂಕ್ಷ್ಮ ಗ್ರಹಿಕೆ ನಮಗೆ ಇರಬೇಕು. ಹಾಗೇ ನಾವು ಧರಿಸುವ ವಸ್ತ್ರಗಳೂ ಟ್ರೆಂಡ್‌ ಸೆಟ್‌ ಮಾಡುವಂತಿರಬೇಕು.

***

ಎಲಿಜಬೆತ್ ಬಗ್ಗೆ ಒಂದಿಷ್ಟು
* ವಯಸ್ಸು: 24
* ಎತ್ತರ: 5.7
* ಮೈಮಾಟ: 34–27–35
* ಪುರಸ್ಕಾರ: ಮಿಸ್ ಕೇರಳ (2011), ಮಿಸ್‌ ಸೌತ್ ಇಂಡಿಯಾ–ರನ್ನರ್ ಅಪ್ (2012), ಮಿಸ್‌ ನೇವಿ ಕ್ವೀನ್ (2010), ಫೆಮಿನಾ ಮಿಸ್ ಬೆಂಗಳೂರು (2016), ಮಿಸ್ ಇಂಡಿಯಾ ವರ್ಲ್ಡ್‌ವೈಡ್‌–ಕೆನೆಡಾ (2015)
* ರೂಪದರ್ಶಿ: ಕೇರಳ ಬ್ಲಾಸ್ಟರ್, ವಂಡರ್‌ ಲಾ, ಈಎಲ್‌ಜಿಐ ಅಲ್ಟ್ರಾ ಪ್ಲಸ್ ಕಿಚನ್ ವೇರ್, ಭೀಮಾ, ಜಾಯ್ ಅಲುಕಾಸ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.