ADVERTISEMENT

ಕ್ಯಾನ್ಸರ್ ನಿಖರ ನಿರ್ಣಯ ಯಂತ್ರ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2016, 19:31 IST
Last Updated 7 ಫೆಬ್ರುವರಿ 2016, 19:31 IST
ಕ್ಯಾನ್ಸರ್ ನಿಖರ ನಿರ್ಣಯ ಯಂತ್ರ
ಕ್ಯಾನ್ಸರ್ ನಿಖರ ನಿರ್ಣಯ ಯಂತ್ರ   

ಉತ್ತರ ಬೆಂಗಳೂರಿನಲ್ಲಿರುವ, ಕ್ಯಾನ್ಸರ್ ಚಿಕಿತ್ಸಾ ಕೇಂದ್ರವಾದ ಎಚ್‌ಸಿಜಿ–ಎಂಎಸ್‌ಆರ್‌ ಕ್ಯಾನ್ಸರ್ ಕೇಂದ್ರವು ಡಿಸ್ಕವರಿ ಐಕ್ಯೂವನ್ನು ಅನಾವರಣಗೊಳಿದೆ. ಇದು ಕ್ಯಾನರ್‌ನ ನಿಖರ ರೋಗನಿರ್ಣಯ ಮತ್ತು ಚಿಕಿತ್ಸೆಗೆ ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಮೊದಲ ಪಿಇಟಿ–ಸಿಟಿ ಯಂತ್ರವಾಗಿದೆ.

ಈ ಹೊಸ ಪಿಇಟಿ ಯಂತ್ರದಲ್ಲಿ ಮುಂದುವರೆದ ರೋಗ ತಪಾಸಣೆ ಸಾಮರ್ಥ್ಯವಿದೆ. ಜತೆಗೆ ಕ್ಯಾನ್ಸರ್ ಚಿಕಿತ್ಸೆಗೆ ರೋಗಿಯಪ್ರತಿಕ್ರಿಯೆಗಳನ್ನೂ ಅರಿತುಕೊಳ್ಳಲು ಸಹಾಯಕವಾಗುವ ಮಾಪನಗಳನ್ನೂ ಒಳಗೊಂಡಿದೆ. ಈ ಅತ್ಯಾಧುನಿಕ ತಪಾಸಣಾ ತಂತ್ರಜ್ಞಾನದ ಯಂತ್ರವು ಕ್ಯಾನ್ಸರ್ ಪ್ರಕರಣಗಳ ನಿರ್ವಹಣೆ ಮಾತ್ರವಲ್ಲದೆ ಹೃದ್ರೋಗ, ನರಶಾಸ್ತ್ರ ಮತ್ತು ಉರಿಯೂತ/ಸೋಂಕಿನ ಪತ್ತೆಯಲ್ಲಿಯೂ ಸಹಾಯಕವಾಗಲಿದೆ.

ಈ ಯಂತ್ರದ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದ ಡಾ. ಬಿ ಎಸ್.ಅಜಯ್‌ಕುಮಾರ್‌  ‘ಆರೋಗ್ಯಸೇವೆಗೆ ಅಗ್ಗವಾದ ತಂತ್ರಜ್ಞಾನದ ಪರಿಹಾರವನ್ನು ಭಾರತದಲ್ಲಿ ವಿನ್ಯಾಸಗೊಳಿಸುವುದರಿಂದ ಸೇವೆಯ ಲಭ್ಯತೆಯನ್ನು ಸುಧಾರಿಸುತ್ತದೆ. ಉತ್ತರ ಬೆಂಗಳೂರಿನ ಮತ್ತು ಸುತ್ತಮುತ್ತಲಿನ ರೋಗಿಗಳು ತಮ್ಮ ರೋಗದ ಸ್ಥಿತಿಯ ಬಗ್ಗೆ ನಿಖರವಾದ ಮಾಹಿತಿ ಪಡೆಯಲು ರೋಗನಿರ್ಣಯ ಮತ್ತು ಚಿಕಿತ್ಸೆಯ ಯಂತ್ರದ ಲಭ್ಯತೆ ಹೊಂದಿರುವುದು ಮಾತ್ರವಲ್ಲದೆ, ಚಿಕಿತ್ಸೆಗೆ ಪ್ರತಿಕ್ರಿಯೆಯ ಮೌಲ್ಯಮಾಪನವನ್ನೂ ಮಾಡಬಹುದಾಗಿದೆ’ ಎಂದು ಅಭಿಪ್ರಾಯ ಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.