ADVERTISEMENT

ಗೋವಿಂದ ಭೈಯ್ಯಾಜಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2014, 19:30 IST
Last Updated 30 ಸೆಪ್ಟೆಂಬರ್ 2014, 19:30 IST

ಕಾಮಿಡಿ ಕಿಂಗ್ ಗೋವಿಂದ ಆದಿತ್ಯ ಚೋಪ್ರಾ ನಿರ್ಮಾಣದ ‘ಕಿಲ್‌ ದಿಲ್‌’ ಚಿತ್ರದ ಮೂಲಕ ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ನಿರ್ದೇಶಕ ಶಾದ್‌ ಅಲಿ ಅವರ ‘ಕಿಲ್‌ ದಿಲ್‌’ ಸಿನಿಮಾ ನವೆಂಬರ್‌ 14ಕ್ಕೆ ಬಿಡುಗಡೆಯಾಗಲಿದೆ. ಗನ್ನು ಹಾಗೂ ರೊಮ್ಯಾನ್ಸ್ ಇರುವ ಥ್ರಿಲ್ಲರ್‌ ಚಿತ್ರದಲ್ಲಿ ಗೋವಿಂದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಉತ್ತರ ಭಾರತದ ಇಬ್ಬರು ಕೊಲೆಗಾರರು ಹಾಗೂ ಅವರಿಗೆ ಆಶ್ರಯ ನೀಡುವ ಭೈಯ್ಯಾಜಿಯ ಕಥೆ ಇದು. ಕೊಲೆಗಾರ ದೇವ್‌ ಪಾತ್ರದಲ್ಲಿ ರಣವೀರ್‌ ಸಿಂಗ್‌, ತುತು ಪಾತ್ರದಲ್ಲಿ ಅಲಿ ಜಾಫರ್ ಹಾಗೂ ಭೈಯ್ಯಾಜಿ ಪಾತ್ರದಲ್ಲಿ ಗೋವಿಂದ ಕಾಣಿಸಿಕೊಳ್ಳಲಿದ್ದು, ಪರಿಣೀತಿ ಚೋಪ್ರಾ ಸಹ ಅಭಿನಯಿಸಿದ್ದಾರೆ. ಶಂಕರ್–ಎಹಸಾನ್–ಲಾಯ್‌ ಸಂಗೀತ ನೀಡಿದ್ದಾರೆ ಎಂದು ಐಎಎನ್‌ಎಸ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.