ಟೆಕ್ನೊ ಮೊಬೈಲ್ ಬಿಡುಗಡೆ
ಟೆಕ್ನೊ ಮೊಬೈಲ್ ಕಂಪನಿಯು ಹೊಸ ವಿನ್ಯಾಸದ ‘ಕಾಮನ್ ಐ ಸ್ಕೈ’ ‘ಕಾಮನ್ ಐ ಏರ್’ ಹಾಗೂ ‘ಕಾಮನ್ ಐ’, ಮೊಬೈಲ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇವುಗಳ ಬೆಲೆ ಕ್ರಮವಾಗಿ ₹7,499, ₹ 7,999 ಹಾಗೂ ₹ 8,999 ನಿಗದಿ ಮಾಡಲಾಗಿದೆ. ಈ ಮೊಬೈಲ್ಗಳಲ್ಲಿ ಗುಣಮಟ್ಟದ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕಡಿಮೆ ಬೆಳಕಿನಲ್ಲೂ ಉತ್ತಮವಾದ ಚಿತ್ರಗಳನ್ನು ಸೆರೆ ಹಿಡಿಯಲು ಸಾಮರ್ಥ್ಯವನ್ನು ಇವು ಹೊಂದಿವೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಮಾರ್ಟ್ ಕೀ ಹೋಲ್ಡರ್
ಪೆನ್ಲೈನ್ ಕಂಪನಿಯು ಸ್ಮಾರ್ಟ್ ಕೀ ಹೋಲ್ಡರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕಪ್ಪು, ಕೆಂಪು, ಗನ್ಮೆಟಲ್, ಸಿಲ್ವರ್ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಇದು ಮಳಿಗೆಗಳಲ್ಲಿ ಲಭ್ಯವಿದೆ. ಬೆಲೆ ₹ 895 ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಅಯಾನ್ ಶೂ ಪರಿಚಯ
ಜೆವೆನ್ ಕಂಪನಿಯು ಬೇಸಿಗೆಗೆ ಒಗ್ಗುವಂತಹ ವಿವಿಧ ಮಾದರಿಯ ಅಯಾನ್ ಶೂಗಳನ್ನು ಬಿಡುಗಡೆ ಮಾಡಿದೆ.
ಬಿಳಿ, ನೀಲಿ, ಹಸಿರು, ಬೂದು, ಕಿತ್ತಳೆ ಬಣ್ಣದಲ್ಲಿ ಈ ಶೂಗಳು ಲಭ್ಯವಿದ್ದು, ಇವುಗಳ ದರ ₹2,150 ಇದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಫಾಸ್ಟ್ಟ್ರ್ಯಾಕ್ ಯುನಿಲೆಸ್ ಕನ್ನಡಕ
ಫಾಸ್ಟ್ಟ್ರ್ಯಾಕ್ ಬೇಸಿಗೆಗೆ ಸರಿಹೊಂದುವಂತಹ ವಿವಿಧ ಶ್ರೇಣಿಯ ಯುನಿಲೆಸ್ ಕನ್ನಡಕಗಳನ್ನು ಬಿಡುಗಡೆ ಮಾಡಿದೆ. ಇವು ಸಮಕಾಲೀನ ವಿನ್ಯಾಸದಲ್ಲಿದ್ದು, ಆಕರ್ಷಕ ನೋಟ ನೀಡಲಿವೆ. ಪುರುಷರು ಹಾಗೂ ಮಹಿಳೆ ಇಬ್ಬರು ಬಳಸಬಹುದು.
ಬ್ಯ್ಲೂ ಫ್ಯ್ಯಾಶ್ ಹಾಗೂ ಪಿ 3 ಯುನಿಲೆನ್ಸ್ ಕನ್ನಡಕಗಳ ಬೆಲೆ ತಲಾ ₹2,499 ನಿಗದಿ ಮಾಡಲಾಗಿದೆ. ಕಂಪನಿಯು ಬೇರೆ ಬೇರೆ ಮಾದರಿಯ ಕನ್ನಡಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಿದ್ದು, ಅವುಗಳ ದರ ₹1,199 ರಿಂದ ₹2,400 ರವರೆಗೂ ಲಭ್ಯವಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.