ADVERTISEMENT

ಡಿಜಿಟಲ್ ಗಜಲ್ ಗಾಯನ

​ಪ್ರಜಾವಾಣಿ ವಾರ್ತೆ
Published 30 ಜುಲೈ 2014, 19:30 IST
Last Updated 30 ಜುಲೈ 2014, 19:30 IST
ಡಿಜಿಟಲ್ ಗಜಲ್ ಗಾಯನ
ಡಿಜಿಟಲ್ ಗಜಲ್ ಗಾಯನ   

ದೇಶದ ಹೆಸರಾಂತ ಗಜಲ್ ಗಾಯನ ಕಲಾವಿದರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ, ಖಝಾನ ಗಜಲ್‌ಗಳ ಮೇಳ ಈ ಬಾರಿ ಡಿಜಿಟಲ್ ಮಾದರಿಯ ಮೂಲಕ ಸಂಗೀತ ಪ್ರೇಮಿಗಳನ್ನು ರಂಜಿಸಲಿದೆ.

ಇದೇ ಆಗಸ್ಟ್ ೧ ಮತ್ತು ೨ರಂದು ನಡೆಯಲಿರುವ ಕಾರ್ಯಕ್ರಮ, ಹಂಗಾಮದ ಡಿಜಿಟಲ್ ವೇದಿಕೆಗಳ ಮೂಲಕ ನೇರ ಪ್ರಸಾರವಾಗಲಿದೆ. ಗಜಲ್ ಪ್ರಿಯರು ಈ ಕಾರ್ಯಕ್ರಮವನ್ನು ಹಂಗಾಮ.ಕಾಂನ ಗಜಲ್ ವಿಭಾಗದಲ್ಲಿ, ಹಂಗಾಮದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ, ಪಂಕಜ್ ಉದ್ಹಾಸ್‌ರವರ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಹಾಗೂ ಡೈಲಿ ಮೋಷನ್ ಇಂಡಿಯಾ ವೇದಿಕೆಗಳಲ್ಲಿ ನೋಡಬಹುದು. ಟಾಟಾ ಸ್ಕೈನ ಸಕ್ರಿಯ ಸಂಗೀತ ಚಂದಾದಾರರು ಈ ಕಾರ್ಯಕ್ರಮದ ಲೈವ್-ಸ್ಟ್ರೀಮಿಂಗ್ ನೋಡಬಹುದು.

ಕ್ಯಾನ್ಸರ್ ರೋಗಿಗಳ ಸಹಾಯಕ ಸಂಸ್ಥೆ (ಸಿಪಿಎಎ) ಹಾಗೂ ಪೇರೆಂಟ್ಸ್ ಅಸೋಸಿಯೇಶನ್ ಥಲಸ್ಸೆಮಿಕ್ ಯೂನಿಟ್ ಟ್ರಸ್ಟ್ (ಪೆಟಿಯುಟಿ) ಸಂಸ್ಥೆಗಳನ್ನು ಬೆಂಬಲಿಸಿ ಈ ವಾರ್ಷಿಕ ಚಾರಿಟಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಗಜಲ್ ಲೋಕದ ಮಹಾನ್ ಗಾಯಕರಾದ ಪಂಕಜ್ ಉದ್ಹಾಸ್, ಭೂಪಿಂದರ್ ಹಾಗೂ ಮಿಥಾಲಿ ಸಿಂಗ್, ಶ್ರುತಿ ಪಾಠಕ್, ತೌಸೀಫ್ ಅಖ್ತರ್, ತಲತ್ ಅಜೀಜ್, ಸಾಧನಾ ಸರಗಮ್, ಸ್ರಬೋನಿ ಚೌಧರಿ, ರುನಾ, ನೇಹಾ ರಿಜ್ವಿ, ಸುರೇಶ್ ವಾಡ್ಕರ್, ಸುರಿಂದರ್ ಖಾನ್ ಹಾಗೂ ಪೂಜಾ ಗಾಯ್ತೊಂಡೆ ಸೇರಿದಂತೆ ಅನೇಕರು ಇದರಲ್ಲಿ ಭಾಗವಹಿಸಲಿದ್ದಾರೆ.

ಖ್ಯಾತ ಗಾಯಕ ಸೋನು ನಿಗಂ ಕೂಡ ಈ ಮೇಳದಲ್ಲಿ ವಿಶೇಷ ಪ್ರದರ್ಶನ ನೀಡಲಿದ್ದಾರೆ. ಭಾರತೀಯ ಸಿನಿಮಾ ರಂಗದಲ್ಲಿ ಗಜಲ್‌ಗಳು ೧೦೦ ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಸಂಭ್ರಮಾಚರಣೆಯ ಅಂಗವಾಗಿ ಹೆಸರಾಂತ ಕಲಾವಿದ ಸಲೀಂ ಆರಿಫ್ ತಮ್ಮ ಸ್ವರಚಿತ ಅದ್ಭುತ ಗಜಲ್‌ಗಳು ಹಾಗೂ ನಜ್ಮ್‌ಗಳಿಂದ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.