ADVERTISEMENT

ಪ್ರಭಾಸ್‌ಗೆ ಮದುವೆಯಂತೆ!

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 19:30 IST
Last Updated 27 ಮಾರ್ಚ್ 2017, 19:30 IST
ಪ್ರಭಾಸ್‌
ಪ್ರಭಾಸ್‌   

‘ಬಾಹುಬಲಿ’ ಎರಡು ಸರಣಿಯಲ್ಲಿ ನಟಿಸುವಷ್ಟರಲ್ಲಿ ಸುಸ್ತಾಗಿದ್ದೇನೆ ಎಂದು  ಇತ್ತೀಚೆಗಷ್ಟೇ ಹೇಳಿಕೊಂಡಿದ್ದ ನಟ ಪ್ರಭಾಸ್‌ಗೆ ಮದುವೆ ಮಾಡಬೇಕೆಂದು ಅವರ ಮನೆ ಮಂದಿ ನಿರ್ಧರಿಸಿದ್ದಾರಂತೆ.

ಅಮೋಘ ಅಭಿನಯದ ಮೂಲಕ ಚಿತ್ರರಂಗವನ್ನೇ ಅಲ್ಲಾಡಿಸುವಂತೆ ಮಾಡಿರುವ ‘ಬಾಹುಬಲಿ’ ಸಿನಿಮಾ, ಪ್ರಭಾಸ್‌ನ ವೈಯಕ್ತಿಕ ಮತ್ತು ಕಲಾ ಬದುಕಿನ ಗ್ರಾಫ್‌  ಅನ್ನು ಮೇಲೇರಿಸಿದೆ. ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗ ಅವರತ್ತ ತಿರುಗಿ ನೋಡುವಂತೆ ಮಾಡಿದೆ.

ಅಂದ ಹಾಗೆ, ಪ್ರಭಾಸ್‌ ಮದುವೆ ನಿಗದಿಯಾಗಿಲ್ಲ. ಅಸಲಿಗೆ ವಧು ಯಾರು ಎಂಬುದೂ ಗೊತ್ತಿಲ್ಲ. ಆದರೂ ಏಪ್ರಿಲ್‌ ನಂತರ ಮದುವೆ ಯಾಗುವುದಾಗಿಯೂ  ತಮ್ಮ ಪೋಷಕರು ನೋಡಿ ಒಪ್ಪಿದ ಹುಡುಗಿಗೆ ತಾಳಿ ಕಟ್ಟುವುದಾಗಿ ಪ್ರಭಾಸ್‌ ಹೇಳಿದ್ದಾರೆ.

37 ವರ್ಷದ ಪ್ರಭಾಸ್ ಅವರ ಮದುವೆಯ ಬಗ್ಗೆ ಆಗಾಗ್ಗೆ ಗಾಸಿಪ್‌ ಏಳುತ್ತಲೇ ಇದ್ದವು. ನಟಿ ಅನುಷ್ಕಾ ಶೆಟ್ಟಿ ಸೇರಿದಂತೆ ಕೆಲವು ನಟಿಯರ ಜತೆಗೆ ಅವರ ಹೆಸರು ತಳುಕು ಹಾಕಿಕೊಂಡಿತ್ತು.

‘ಬಾಹುಬಲಿ2’ ಮುಗಿಸಿ ಹೊಸ ಚಿತ್ರದ ಮುಹೂರ್ತಕ್ಕೂ ಮೊದಲೇ ಪ್ರಭಾಸ್ ಮದುವೆ ಮುಹೂರ್ತ ಸಜ್ಜಾಗಲಿದೆ ಎಂದು ಅವರ ಚಿಕ್ಕಪ್ಪ ಕೃಷ್ಣಂ ರಾಜು ಹೇಳಿರುವುದು, ಮುಂದಿನ ತಿಂಗಳು ಮದುವೆ ಎಂಬ ಮಾತಿಗೆ ಪುಷ್ಟಿ ಕೊಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.