ADVERTISEMENT

‘ಪ್ಲೇ ಫಾರ್ ಕಾಸ್’ ಸಂಗೀತ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2017, 19:30 IST
Last Updated 17 ಮಾರ್ಚ್ 2017, 19:30 IST
‘ಪ್ಲೇ ಫಾರ್ ಕಾಸ್’ ಸಂಗೀತ ಕಾರ್ಯಕ್ರಮ
‘ಪ್ಲೇ ಫಾರ್ ಕಾಸ್’ ಸಂಗೀತ ಕಾರ್ಯಕ್ರಮ   

ಇಂಗ್ಲೆಂಡ್‌ನ ಸ್ಯಾಕ್ಸೊಫೋನ್‌ ವಾದಕ ಕ್ರಿಸ್ ವೈಟ್‌ ಮತ್ತು ಮೊಜಾಂಬಿಕ್ ಮೂಲದ ಗಿಟಾರ್ ವಾದಕ ಟೆರೆನ್ಸ್‌ ರೇಸ್‌ ಅವರ ಜನಪ್ರಿಯ ಬ್ಯಾಂಡ್ ‘ದಿ ಡೈರ್ ಸ್ಟ್ರೈಟ್ಸ್‌ ಎಕ್ಸ್‌ಪೀರಿಯನ್ಸ್‌’ ಮೊದಲ ಬಾರಿಗೆ ಭಾರತದಲ್ಲಿ ಪ್ರದರ್ಶನ ನೀಡುತ್ತಿದೆ. 

ರಾಜಸ್ತಾನದ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು ಸಹಾಯ ಮಾಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಬ್ಯಾಂಡ್ ಸದಸ್ಯರಾದ ಟಿಂಫೋನಿ ವಾಲ್ಟರ್ಸ್‌, ಡೇನಿಯಲ್ ಶೋಜರ್, ಸಿಮೊನ್ ಕಾರ್ಟರ್, ಪೌಲ್ ಗ್ಯಾರಿ, ಕ್ರಿಸ್ಟೋಫರ್ ವೈಟನ್ ಪ್ರದರ್ಶನ ನೀಡಲಿದ್ದಾರೆ.

ಆಯೋಜನೆ– 100 ಪೈಪರ್ಸ್‌. ಸ್ಥಳ: ತಾಜ್ ವಿವಾಂತಾ, ಯಶವಂತಪುರ. ಭಾನುವಾರ ಮಧ್ಯಾಹ್ನ 2.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.