ADVERTISEMENT

ಬಿಗ್‌ಬಾಸ್‌ ಸೀಜನ್‌ 8

ಸಲ್ಮಾನ್‌ ಸಾರಥ್ಯದಲ್ಲಿ...

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2014, 19:30 IST
Last Updated 18 ಆಗಸ್ಟ್ 2014, 19:30 IST

ಬಿಗ್‌ಬಾಸ್‌ ಕಾರ್ಯಕ್ರಮದ 8ನೇ ಸೀಜನ್‌ನ ನಿರೂಪಕರಾಗಿ ಬಾಲಿವುಡ್‌ ಸೂಪರ್‌ಸ್ಟಾರ್‌ ಸಲ್ಮಾನ್‌ಖಾನ್‌ ಮತ್ತೆ ಕಾಣಿಸಿಕೊಳ್ಳಲಿದ್ದಾರೆ.

ಕಲರ್ಸ್‌ ಚಾನೆಲ್‌ನಲ್ಲಿ ಮೂಡಿಬರಲಿರುವ ಬಿಗ್‌ಬಾಸ್‌ ರಿಯಾಲಿಟಿ ಷೋನ 8ನೇ ಸೀಜನ್‌ ನಿರೂಪಕರಾಗಿ ಯಾರು ಬರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು.  ಆದರೆ 8ನೇ ಸೀಜನ್‌ನಲ್ಲೂ ಸಲ್ಮಾನ್‌ ಅವರೇ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ ಎಂದು ಕಲರ್ಸ್‌ ಚಾನೆಲ್‌ನ ಸಿಇಓ ರಾಜ್‌ ನಾಯಕ್‌ ಟ್ವೀಟ್ ಮಾಡಿದ್ದಾರೆ.

ಬಿಗ್‌ಬಾಸ್‌ ಕಾರ್ಯಕ್ರಮದ ನಾಲ್ಕು ಸೀಜನ್‌ಗಳ ನಿರೂಪಣೆ ಮಾಡಿದ್ದ ಸಲ್ಮಾನ್‌ ಈ ಬಾರಿ ಕಾರ್ಯಕ್ರಮದ ನಿರೂಪಕರಾಗಿ ಕಾಣಿಸಿಕೊಳ್ಳುವುದಿಲ್ಲ. ಅವರು ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಮೂಡ್‌ನಲ್ಲಿ ಇಲ್ಲ ಎಂಬ ಗಾಳಿಮಾತು ಎಲ್ಲೆಡೆ ಹಬ್ಬಿತ್ತು.

ಅತಿ ಶೀಘ್ರದಲ್ಲೇ ಕಾರ್ಯಕ್ರಮವೊಂದರ ನಿರೂಪಕರಾಗಿ ತಾವು ಕಾಣಿಸಿಕೊಳ್ಳಬಹುದು ಹಾಗೂ ಇಲ್ಲದೆಯೂ ಇರಬಹುದು ಎಂದಿದ್ದ ಸಲ್ಮಾನ್‌, ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ನಿರೂಪಕರಾಗಿ ‘ಶಾರುಖ್‌ ಖಾನ್‌’ ಅತ್ಯಂತ ಉತ್ತಮ ಆಯ್ಕೆಯಾಗುತ್ತಾರೆ ಎಂದಿದ್ದರು.  

ಬಿಗ್‌ಬಾಸ್‌ ಕಾರ್ಯಕ್ರಮದ ನಿರೂಪಕನ ಬಗ್ಗೆ ಉಂಟಾಗಿದ್ದ ಊಹಾಪೋಹಗಳಿಗೆ ಈಗ ಬ್ರೇಕ್‌ ಬಿದ್ದಂತಾಗಿದೆ. ಕಾರ್ಯಕ್ರಮದ ಅಭಿಮಾನಿಗಳು ನೆಚ್ಚಿನ ನಟ ಸಲ್ಮಾನ್‌ ಅವರನ್ನು ಮತ್ತೊಮ್ಮೆ ಬಿಗ್‌ಬಾಸ್‌ನಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.