ADVERTISEMENT

ಬುಲೆಟ್‌ ಹತ್ತಿ ದೇಶ ಸುತ್ತಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST
ಬುಲೆಟ್‌ ಹತ್ತಿ ದೇಶ ಸುತ್ತಿ
ಬುಲೆಟ್‌ ಹತ್ತಿ ದೇಶ ಸುತ್ತಿ   

ನಗರದ ವಿವಿಧ ಕಂಪೆನಿಗಳಲ್ಲಿ ಉದ್ಯೋಗಸ್ಥರಾಗಿರುವ ಬೈಕ್‌ಮೋಹಿ ಗೆಳೆಯರಾದ ದೀಪಕ್‌ಗೌಡ, ಸುನೀಲ್ ಗೌಡ, ಪ್ರವೀಣ್ ಯಾದವ್, ಸುಚೇಂದ್ರ, ನವೀನ್ ಕುಮಾರ್, ಪವನ್ ಕುಮಾರ್, ಭರತ್ ನಾಯ್ಡು ತಮ್ಮ ಬುಲೆಟ್‌ಗಳಲ್ಲಿ ಜಮ್ಮುವಿನಿಂದ ಅಮೃತಸರದವರೆಗೆ ಪ್ರವಾಸ ಮಾಡಿಬಂದಿದ್ದಾರೆ.

ಏಳು ಮಂದಿ ಗೆಳೆಯರು ನಾಲ್ಕು ಬುಲೆಟ್‌ ಬೈಕ್‌ಗಳಲ್ಲಿ ಜಮ್ಮುವಿನಿಂದ ಕಾಶ್ಮೀರ ಅಲ್ಲಿಂದ ಕಾರ್ಗಿಲ್ ಅಲ್ಲಿಂದ ಲೇಹ್, ಕಾರ್ದುಂಗ್ಲಾ, ನೂಪುರ, ಸರಚು, ಮನಾಲಿಯಿಂದ ಅಮೃತಸರ ಹೀಗೆ ಪ್ರಯಾಣ ಮಾಡಿ ಬಂದಿದ್ದಾರೆ. 15 ದಿನ 3,400 ಕಿ.ಮೀ ದೂರ ಕ್ರಮಿಸಿದ್ದಾರೆ.

ಬೈಕ್‌ನಲ್ಲಿ ಈ ತಂಡದ ಮೊದಲ ದೂರದೂರಿನ ಪ್ರವಾಸ ಇದು. ಈ ಮುಂಚೆ ಬೆಂಗಳೂರಿನಿಂದ ನೂರಾರು ಕಿ.ಮೀ ದೂರದ ಊರುಗಳಿಗೆ ಹೋಗುತ್ತಿದ್ದ ಈ ತಂಡ ಇದೇ ಮೊದಲ ಬಾರಿಗೆ ದೂರದ ಪ್ರದೇಶಕ್ಕೆ ಯಾನ ಕೈಗೊಂಡಿತ್ತು.

ADVERTISEMENT

‘ದೂರ ಪ್ರಯಾಣಕ್ಕೆ ನಾವು ಅನನುಭವಿಗಳೇ ಆದರೆ ಉತ್ಸಾಹ ಮತ್ತು ಬೈಕ್ ಪ್ರೀತಿಗೆ ಯಾರಿಗೂ ಕಮ್ಮಿ ಇರಲಿಲ್ಲ ಹಾಗಾಗಿ ಹಿಮಾಲಯ ಪ್ರದೇಶದಲ್ಲಿ ಬೈಕು ಓಡಿಸಬೇಕೆಂದ ಆಲೋಚನೆ ಬಂದ ಕೂಡಲೇ ಹೆಚ್ಚು ಯೋಚಿಸದೇ ನೇರವಾಗಿ ಹೊರಟೇ ಬಿಟ್ಟೆವು’ ಎನ್ನುತ್ತಾರೆ ಈ ತಂಡದ ಸದಸ್ಯ ದೀಪಕ್‌ ಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.