ADVERTISEMENT

ಮಗೂ ಹುಷಾರು

ಪದ್ಮನಾಭ ಭಟ್ಟ‌
Published 25 ಜುಲೈ 2014, 19:30 IST
Last Updated 25 ಜುಲೈ 2014, 19:30 IST

ಮನೆಯನ್ನು ಹೊರತುಪಡಿಸಿದರೆ ಶಾಲೆಯೇ ಮಕ್ಕಳಿಗೆ ಅತ್ಯಂತ ಸುರಕ್ಷಿತ ತಾಣ ಎಂಬ ಸಾಮೂಹಿಕ ನಂಬಿಕೆ ಪಾಲಕರಲ್ಲಿತ್ತು. ಆದರೆ ಇತ್ತೀಚೆಗೆ ನಗರದ ವಿಬ್ಗಯೊರ್‌ ಶಾಲಾ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣ ಈ ನಂಬಿಕೆಯ ಬುಡಕ್ಕೇ ಕೊಡಲಿಪೆಟ್ಟು ಹಾಕಿದೆ.

ಶಿಕ್ಷಣ ಸಂಸ್ಕಾರ ನೀಡಬೇಕಾದ ವಿದ್ಯಾಕೇಂದ್ರಗಳಲ್ಲಿಯೇ ಹಾಲುಗಲ್ಲದ ಮುಗ್ಧ ಮಕ್ಕಳ ಮೇಲೆ ವಯಸ್ಸಿನ ಹಂಗಿಲ್ಲದೇ ಅಮಾನುಷ ದೌರ್ಜನ್ಯಗಳು ನಡೆಯತೊಡಗಿದರೆ ಮಕ್ಕಳನ್ನು ಎಲ್ಲಿ ಅಡಗಿಸಿಡುವುದು ಎಂಬ ಭಯ ಪಾಲಕರ ನಿದ್ದೆಗೆಡಿಸಿದೆ.

ಸೆಲೆಬ್ರಿಟಿಗಳಿಂದ ಸಾಮಾನ್ಯ ಅಮ್ಮಂದಿರಿಗೂ ಈ ಆತಂಕಗಳು ತಪ್ಪಿದ್ದಲ್ಲ. ಮೆಟ್ರೊದೊಂದಿಗೆ ಪಾಲಕರು ಹಂಚಿಕೊಂಡ ಮಾತಿನಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ಇನ್ನೂ ಹಲವು ಮುಖಗಳು ಅನಾವರಣಗೊಂಡಿವೆ.

‘ಮೊಬೈಲ್, ಇಂಟರ್ನೆಟ್, ಎಲ್ಲಕ್ಕಿಂತ ಹೆಚ್ಚಾಗಿ ಸಿನಿಮಾ ಮತ್ತು ಜಾಹೀರಾತುಗಳಲ್ಲಿ ಮಹಿಳೆಯರನ್ನು ಆಶ್ಲೀಲವಾಗಿ ತೋರಿಸುವುದರಿಂದಲೇ ಇಂತಹ ಘಟನೆಗಳಿಗೆ ಪ್ರಚೋದನೆಯಾಗುತ್ತದೆಯೇನೋ?

ಇಂದಿನ ಸ್ಕೂಲುಗಳಲ್ಲಿ ಬಹುತೇಕ ಮ್ಯಾನೇಜ್‌ಮೆಂಟುಗಳು ಹಣ ಮಾಡುವುದನ್ನೇ ಮುಖ್ಯ ಗುರಿಯಾಗಿಸಿಕೊಂಡಿವೆ. ಆದರೆ ಅವರು

ಎಚ್ಚರ ಇರಲಿ
*ಮಕ್ಕಳೊಂದಿಗೆ ಪ್ರತಿನಿತ್ಯ ಒಂದಷ್ಟು ಸಮಯ ಕಳೆಯಿರಿ. ಅವರ ದೈನದಿಂನ ಚಟುವಟಿಕೆಗಳ ಬಗ್ಗೆ ಕೇಳಿ ತಿಳಿದುಕೊಳ್ಳಿ.
*ನಿಮ್ಮ ಮಗುವಿನ ಸಹಪಾಠಿಗಳೊಂದಿಗೂ ಸಂಪರ್ಕ ಇರಿಸಿಕೊಳ್ಳಿ. ಮಕ್ಕಳಿಂದ ತಿಳಿಯದ ಎಷ್ಟೋ ವಿಷಯಗಳು ಅವರ ಸ್ನೇಹಿತರಿಂದ ತಿಳಿಯಬಹುದು.
*ಮಗು ಹೋಗುವ ಶಾಲೆಯೊಂದಿಗೆ ಸಂಪರ್ಕವಿರಿಸಿಕೊಂಡು ಅಲ್ಲಿನ ವಾತಾವರಣದ ಬಗ್ಗೆ ಮಾಹಿತಿ ಕಲೆಹಾಕುತ್ತಿರಿ.
*ಮಕ್ಕಳ ವರ್ತನೆಯಲ್ಲಿ ಏನಾದರೂ ಬದಲಾವಣೆ ಕಂಡುಬಂದರೆ ಗದರದೇ ಪ್ರೀತಿಯಿಂದ ವಿಚಾರಿಸಿಕೊಳ್ಳಿ.

ಗುಣಮಟ್ಟದ ಶಿಕ್ಷಣದ ಜತೆಯಲ್ಲಿಯೇ ಶಾಲೆಯಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆಯೂ ಗಮನ ಹರಿಸಬೇಕು. ಸಿಬ್ಬಂದಿಯನ್ನು ನೇಮಿಸಿಕೊಳ್ಳುವಾಗ ಅವರ ಪೂರ್ವಾಪರವನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ಸಿಬ್ಬಂದಿಯ ನೈತಿಕ ಗುಣಮಟ್ಟವೂ ಮುಖ್ಯವಾಗಬೇಕು.
ಅಲ್ಲದೇ ಮಕ್ಕಳಿಗೂ ಇಂತಹ ವಿಷಯಗಳ ಬಗ್ಗೆ ಸೂಕ್ತ ತಿಳಿವಳಿಕೆ ನೀಡಬೇಕು.

ಅವರು ಒಳ್ಳೆಯ ಮತ್ತು ಕೆಟ್ಟ ನಡವಳಿಕೆಯ ನಡುವಿನ ವ್ಯತ್ಯಾಸವನ್ನು ತಕ್ಷಣ ಗಮನಿಸಿ ಪ್ರತಿಭಟಿಸುವ ರೀತಿಯಲ್ಲಿ ಅವರನ್ನು ಬೆಳೆಸಬೇಕು. ಮಕ್ಕಳು ಶಿಕ್ಷಕರು ಮತ್ತು ಪಾಲಕರ ಜತೆಯಲ್ಲಿ ಇಂತಹ ವಿಷಯಗಳನ್ನು ನಿರ್ಭಿಡೆಯಿಂದ ಚರ್ಚಿಸುವಷ್ಟು ಮುಕ್ತ ವಾತಾವರಣ ಏರ್ಪಡಬೇಕು’ ಎನ್ನುವ ಯಶೋಮತಿ ಅವರ ಅಭಿಪ್ರಾಯ ಹಲವರ ಪ್ರಾತಿನಿಧಿಕ ನುಡಿಯಂತೆ ಕಾಣುತ್ತದೆ.

ಕ್ರೂರ ಶಿಕ್ಷೆಯೊಂದೇ ಪರಿಹಾರ
ಇಂದಿನ ಇಂತಹ ಪರಿಸ್ಥಿತಿಗೆ ಏನು ಕಾರಣ ಏನೆಂದು ಎಷ್ಟು ಯೋಚಿಸಿದರೂ ಹೊಳೆಯುತ್ತಿಲ್ಲ ಎನ್ನುತ್ತಲೇ ಮಾತಿಗಿಳಿದರು ಸೌಮ್ಯಾ ಪ್ರಭು ಕಲ್ಯಾಣಕರ್‌. ಅವರ ಪ್ರಕಾರ ಅತ್ಯಾಚಾರ ಅನ್ನೋದು ಒಂದು ಸಮೂಹ ಸನ್ನಿ ಥರ ಆಗಿಬಿಟ್ಟಿದೆ. ಮಕ್ಕಳನ್ನು ಎಲ್ಲಿ ತೆಗೆದುಕೊಂಡು ಹೋಗಿ ಬಚ್ಚಿಡುವುದೋ ತಿಳಿಯುತ್ತಿಲ್ಲ. ಪಿಕ್‌ಅಪ್‌, ಡ್ರಾಪ್ ಅಂತೆಲ್ಲ ಎಷ್ಟು ಎಚ್ಚರಿಕೆ ವಹಿಸಿದರೂ ಅವರು ಸ್ಕೂಲಿನಲ್ಲಿ ಕಳೆಯಬೇಕಾದ ಸಮಯದಲ್ಲಿ ಅವರ ಸುರಕ್ಷತೆಯ ಬಗ್ಗೆ ಹೆದರಿಕೆ ಆಗುತ್ತದೆ.

ಮನುಷ್ಯನನ್ನು ಜಡ್ಜ್‌ ಮಾಡುವುದು ಹೇಗೆ ಎನ್ನುವುದು ಅವರ ಜಿಜ್ಞಾಸೆ. ‘ಯಾರೋ ಒಬ್ಬ ಸೈಕೋ ಮಾಡಿದ ತಪ್ಪಿಗೆ ಇಡೀ ಶಿಕ್ಷಕ ಸಮುದಾಯವನ್ನೇ ದೂರಿದರೆ ಉಳಿದ ಒಳ್ಳೆಯ ಶಿಕ್ಷಕರಿಗೆ ಅವಮಾನ ಮಾಡಿದಂತಾಗುವುದಿಲ್ಲವೇ’ ಎಂದು ಅವರು ಪ್ರಶ್ನಿಸುತ್ತಾರೆ.
ಅಪರಾಧಿಗಳಿಗೆ ಕ್ರೂರವಾದ ಶಿಕ್ಷೆ ವಿಧಿಸುವುದೊಂದೇ ಇದಕ್ಕೇ ಪರಿಹಾರ  ಎಂದೂ ಅವರು ನಂಬಿದ್ದಾರೆ.

ಅನುಮಾನದ ಹುತ್ತದೊಳಗೇ ಕುಳಿತು, ಮಗುವಿನ ಮೇಲೆ ಬೀಳುವ ನೆರಳುಗಳಲ್ಲಿ ಒಳಿತು, ಕೆಡುಕನ್ನು ಗುರ್ತಿಸುವ ಅನಿವಾರ್ಯತೆಯನ್ನು ಸದ್ಯದ ಸದ್ದು ಸೃಷ್ಟಿಸಿದೆ.

ಮಕ್ಕಳಲ್ಲಿ ತಿಳಿವಳಿಕೆ ಮೂಡಿಸಿ
ಶಾಲೆಯಲ್ಲಿ ಅಂತಲ್ಲ. ವಿಕೃತ ಮನಸ್ಥಿತಿಯವರು ಎಲ್ಲಿದ್ದರೂ ಅತ್ಯಾಚಾರಗಳು ನಡೆಯುತ್ತವೆ. ಇದಕ್ಕೇ ಸ್ಕೂಲ್‌ನ್ನು ದೂಷಣೆ ಮಾಡುವುದೂ ತಪ್ಪು. ಸ್ಕೂಲಿನಲ್ಲಿ ಸಾಕಷ್ಟು ಮಕ್ಕಳಿರುತ್ತಾರೆ. ಎಲ್ಲರನ್ನೂ ವೈಯಕ್ತಿಕವಾಗಿ ಗಮನಿಸುವುದು ಆಗದ ಮಾತು. ಹೈಸ್ಕೂಲಿಗೆ

ಹೋಗುವಷ್ಟು ದೊಡ್ಡವರಾದ ಮೇಲಾದರೆ ಅವರಿಗೆ ಇಂತಹ ಸಂಗತಿಗಳ ಬಗ್ಗೆ ಸೂಕ್ತ ತಿಳಿವಳಿಕೆ ಮೂಡಿಸಿ ದಿಟ್ಟವಾಗಿ ಎದುರಿಸಲು ಧೈರ್ಯ ತುಂಬಬಹುದು. ಆದರೆ ಪ್ರಾಥಮಿಕ ಶಾಲಾ ಮಕ್ಕಳಿಗೆಲ್ಲ ಏನು ಗೊತ್ತಾಗುತ್ತದೆ? ಆದರೂ ಪಾಲಕರು ಈ ಬಗ್ಗೆ ಮಕ್ಕಳಲ್ಲಿ ಸೂಕ್ಷ್ಮವಾಗಿ ತಿಳಿವಳಿಕೆ ಮೂಡಿಸಬೇಕು. ಸಭ್ಯ, ಅಸಭ್ಯಗಳ ನಡುವಣ ವ್ಯತ್ಯಾಸವನ್ನು ತಿಳಿಸಿಕೊಡಬೇಕು.

ADVERTISEMENT

ಒಮ್ಮೆ ನನ್ನ ಪತಿ ಸುಂದರ್‌ ಬೈಕ್‌ನಲ್ಲಿ ಹೋಗುತ್ತಿದ್ದಾಗ ರಸ್ತೆ ಸಿಗ್ನಲ್‌ನಲ್ಲಿ ಒಂದು ಸ್ಕೂಲ್‌ ಮಕ್ಕಳನ್ನು ಸಾಗಿಸೋ ಆಟೊ ಬಂದು ನಿಂತುಕೊಂಡಿತು. ಅದರಲ್ಲಿನ ಆಟೊ ಡ್ರೈವರ್‌ ಸ್ಕೂಲಿಗೆ ಹೋಗುವ ಪುಟ್ಟ ಮಗುವಿನ ತೊಡೆ ಸವರುತ್ತಾ ಮಾತನಾಡುತ್ತಿದ್ದನಂತೆ.

ಸುಂದರ್‌ಗೆ ಇದನ್ನು ನೋಡಿ ತುಂಬ ನೋವಾಗಿ ಮನೆಗೆ ಬಂದು ಹೇಳಿದ್ರು. ಅವತ್ತಿದ್ದಂಲೇ ನಾವು ಎಚ್ಚೆತ್ತುಕೊಂಡು ಮಗಳಿಗೆ ತಿಳಿವಳಿಕೆ ನೀಡಲು ಶುರು ಮಾಡಿದ್ವಿ. ನನ್ನ ಮಗಳು ಇನ್ನೂ ಒಂದನೇ ತರಗತಿಯಲ್ಲಿ ಓದುತ್ತಿದ್ದಾಳೆ. ನಾನಂತೂ ನನ್ನ ಮಗಳಿಗೆ ಎರಡು ವರ್ಷದ ಹಿಂದಿನಿಂದಲೇ ಸಾಧ್ಯವಾದಷ್ಟೂ ಸೂಕ್ಷ್ಮವಾಗಿ ತಿಳಿವಳಿಕೆ ನೀಡುತ್ತಲೇ ಬಂದಿದ್ದೇನೆ.

ಇದಲ್ಲದೇ ಸ್ಕೂಲಿನಲ್ಲಿಯೂ ಮ್ಯಾನೇಜ್‌ಮೆಂಟ್‌ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬ ನಡವಳಿಕೆಗಳ ಬಗ್ಗೆ ನಿರಂತರವಾಗಿ ಕಣ್ಣಿಟ್ಟಿರಬೇಕು.
–ವೀಣಾ ಸುಂದರ್‌, ನಟಿ

ಸಮಸ್ಯೆ ಪರಿಹರಿಸುವುದು ಯಾರಿಗೂ ಇಷ್ಟವಿಲ್ಲ
ನಗರಗಳಲ್ಲಿ ಪಾಲಕರ ಜವಾಬ್ದಾರಿ ದೊಡ್ಡದಿದೆ. ಇತ್ತೀಚೆಗೆ ಶಾಲಾ ಮಗುವೊಂದರ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನೇ ಗಮನಿಸಿ.

ಆ ಘಟನೆ ಪಾಲಕರಿಗೆ ತಿಳಿಯಲು ಎಷ್ಟೋ ದಿನಗಳು ಬೇಕಾದವು. ದಿನನಿತ್ಯ ಪಾಲಕರು ಮತ್ತು ಮಕ್ಕಳ ನಡುವೆ ಸಂಭಾಷಣೆಯೇ ನಡೆಯುವುದಿಲ್ವಾ ಎಂಬ ಅನುಮಾನ ಹುಟ್ಟುತ್ತದೆ.

ಐದಾರು ತಿಂಗಳ ಹಿಂದೆ ಕೋರಮಂಗಲದಲ್ಲಿರುವ ಸ್ಕೂಲಿನಲ್ಲಿಯೇ ಇಂಥದ್ದೊಂದು ಘಟನೆ ನಡೆದಿತ್ತು. ಅಲ್ಲಿ ಕ್ಯಾಬ್‌ ಡ್ರೈವರ್‌ನಿಂದ ಅತ್ಯಾಚಾರಕ್ಕೆ ಒಳಗಾದ ಮಗುವಿಗೆ ಕೇವಲ 2 ವರ್ಷ 11 ತಿಂಗಳು. ಅದರ ಅಪ್ಪ ಚಾರ್ಟೆಡ್‌ ಅಕೌಂಟೆಂಟ್. ಅಲ್ಲಿಯೂ ಅತ್ಯಾಚಾರ ನಡೆದ ಸಂಗತಿ ಅಪ್ಪ–ಅಮ್ಮನಿಗೆ ತಿಳಿದದ್ದು ಮೂರು ದಿನಗಳ ನಂತರ; ಅದೂ ಮೂರನೇ ದಿನ ಮಗು ಡೈಪರ್‌ ಹಾಕಿಕೊಳ್ಳದೇ ಅಳುತ್ತಾ ಬಂದಾಗ. ಮೂರು ದಿನಗಳ ಕಾಲ ಮಗು ನರಕಯಾತನೆಯನ್ನು ಅನುಭವಿಸಿತ್ತು. ಆದರೆ ಪಾಲಕರಿಗೆ ಅದು ತಿಳಿದೇ ಇರಲಿಲ್ಲ.
–ಮಾಳವಿಕಾ, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.