ADVERTISEMENT

ಮತ್ತೆ ಒಂದಾದರು ಹೃತಿಕ್‌–ಸೂಸೇನ್‌

​ಪ್ರಜಾವಾಣಿ ವಾರ್ತೆ
Published 22 ಮೇ 2017, 19:30 IST
Last Updated 22 ಮೇ 2017, 19:30 IST
ಮತ್ತೆ ಒಂದಾದರು ಹೃತಿಕ್‌–ಸೂಸೇನ್‌
ಮತ್ತೆ ಒಂದಾದರು ಹೃತಿಕ್‌–ಸೂಸೇನ್‌   

ಬಾಲಿವುಡ್‌ನ ಸ್ನೇಹಪರ ದಂಪತಿ ಎಂದೇ ಗುರುತಿಸಿಕೊಂಡಿದ್ದ ಹೃತಿಕ್‌ ರೋಷನ್ ಮತ್ತು ಸೂಸೇನ್ ಖಾನ್ ಅವರು ವೈವಾಹಿಕ ವಿಚ್ಛೇದನ ಪಡೆದಾಗ ಎಲ್ಲರೂ ನಿಬ್ಬೆರಗಾಗಿದ್ದರು. ಸೂಸೇನ್ ಅಂತೂ ಪತಿಯ ಬಗ್ಗೆ ಖಾರವಾಗಿ ಮಾತನಾಡಿದ್ದರು.

ಆದರೆ ವಿಚ್ಛೇದನ ಪಡೆದ ಮೇಲೂ ಉತ್ತಮ ಸ್ನೇಹಿತರಾಗಿ ಮುಂದುವರಿದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು. ಅದು ತಮ್ಮ ಮಕ್ಕಳಿಗಾಗಿ ಅವರು ಕೈಗೊಂಡ ನಿರ್ಧಾರವಾಗಿತ್ತು. ಆದರೆ ಈ ದಂಪತಿ ಈಗ ಮತ್ತೆ ಒಂದಾಗಿ ಬಾಳುವ ನಿರ್ಧಾರ ತೆಗೆದುಕೊಂಡು ಸುದ್ದಿಯಾಗಿದ್ದಾರೆ.

ವಿಚ್ಛೇದನ ಪಡೆದ ಮೇಲೆ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ.

ADVERTISEMENT

ತಂದೆ–ತಾಯಿ ವಿಚ್ಛೇದನ ಪಡೆದ ನಂತರ ಇಬ್ಬರೂ ಮಕ್ಕಳು ಬಹಳ ಅಂತರ್ಮುಖಿಗಳಾಗಿದ್ದರು. ಓದಿನಲ್ಲಿಯೂ ಹಿಂದೆ ಉಳಿದಿದ್ದರು. ಹೀಗೆ ಮಕ್ಕಳ ಮಾನಸಿಕ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರಲಾರಂಭಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ ದಂಪತಿ ಮತ್ತೆ ಒಂದಾಗುತ್ತಿದ್ದಾರೆ.

ತಮ್ಮ ಮನೆಯ ಬಳಿಯೇ ಮತ್ತೊಂದು ಮನೆಯನ್ನು ಹೃತಿಕ್ ಖರೀದಿಸಿದ್ದಾರೆ. ಈ ಹೊಸ ಮನೆಯಲ್ಲಿ ಸೂಸೇನ್ ಮತ್ತು ಮಕ್ಕಳು ಇರಲಿದ್ದಾರೆ. ಮಕ್ಕಳಿಗೆ ಯಾವಾಗ ಬೇಕಾದರೂ ತಂದೆ–ತಾಯಿ ಲಭ್ಯವಿರಬೇಕು ಎನ್ನುವುದು ಹೊಸ ಮನೆ ಖರೀದಿಯ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.