ADVERTISEMENT

ವಿದ್ಯಾ ತುಂಟತನದ ಬಿಂಬ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 19:30 IST
Last Updated 17 ಜನವರಿ 2017, 19:30 IST
ವಿದ್ಯಾ ತುಂಟತನದ ಬಿಂಬ
ವಿದ್ಯಾ ತುಂಟತನದ ಬಿಂಬ   
ಪ್ರಿಯತಮೆಯಾಗಿ, ನೆಚ್ಚಿನ ಮಡದಿಯಾಗಿ ಕಾಣಿಸಿಕೊಳ್ಳುತ್ತಿದ್ದ ವಿದ್ಯಾ ಬಾಲನ್‌ ನಂತರದ ದಿನಗಳಲ್ಲಿ ಹಾಟ್‌ ಬೆಡಗಿಯಾಗಿಯೂ ಜನಪ್ರಿಯತೆ ಗಳಿಸಿದರು. ಹಸಿಬಿಸಿ ಪಾತ್ರಗಳಲ್ಲಿ ಕಾಣಿಸಿಕೊಂಡ ಈ ‘ಡರ್ಟಿ ಪಿಕ್ಚರ್‌’ ಚೆಲುವೆ ಹದಿಹರೆಯದವರ ಎದೆಬಡಿತವನ್ನೂ ಅಲ್ಲೋಲಕಲ್ಲೋಲ ಮಾಡಿದ್ದರು.
 
ಹೀಗೆ ವಿಭಿನ್ನ ಸಿನಿಮಾ, ಪಾತ್ರಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನಗೆಲ್ಲುತ್ತಿರುವ ವಿದ್ಯಾ ಬಾಲನ್‌ ಇದೀಗ ತನ್ನ ಹೊಸ ಸಿನಿಮಾ ‘ತುಮ್ಹಾರಿ ಸುಲು‘ವಿನಲ್ಲಿ ತನ್ನ ತುಂಟತನ ಹೊರಹಾಕಿದ್ದಾರಂತೆ. 
 
ಈ ಚಿತ್ರದಲ್ಲಿ ವಿದ್ಯಾ ಅವರದ್ದು ರೇಡಿಯೊ ಜಾಕಿ ಪಾತ್ರ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ರೇಡಿಯೊ ಜಾಕಿಯಾಗಿ ಅಭಿನಯಿಸುತ್ತಿದ್ದು, ‘ನನ್ನೊಳಗಿನ ತುಂಟತನ ಈ ಚಿತ್ರದಲ್ಲಿ ಬಿಂಬಿತವಾಗಿದೆ’ ಎಂದಿದ್ದಾರೆ. 
 
‘ಬೇಗಂ ಜಾನ್‌ ಹಾಗೂ ತುಮ್ಹಾರಿ ಸುಲು ಚಿತ್ರದಲ್ಲಿ ನಾನು ಬ್ಯುಸಿ ಆಗಿದ್ದೇನೆ. ಎರಡೂ ಚಿತ್ರಗಳು ಸಂಪೂರ್ಣ ಭಿನ್ನ ಕಥೆಯನ್ನು ಹೊಂದಿವೆ. ‘ತುಮ್ಹಾರಿ ಸುಲು’ ಮನೋರಂಜನಾತ್ಮಕ ಸಿನಿಮಾ. ಸುಲು ಆರ್‌ಜೆ ಹೆಸರು. ಸುಲು ಪಾತ್ರದ ಮೂಲಕ ನನ್ನ ತುಂಟತನ, ಹಠಮಾರಿತನ ಅನಾವರಣಗೊಂಡಿದೆ’ ಎಂದು ಪಾತ್ರದ ಕುರಿತು ಹೇಳಿಕೊಂಡಿದ್ದಾರೆ ವಿದ್ಯಾ. 
 
ಸುರೇಶ್‌ ತ್ರಿವೇಣಿ ನೇತೃತ್ವದ ಈ ಚಿತ್ರದಲ್ಲಿ ರೇಡಿಯೊ ಜಾಕಿ ಹೆಸರು ಸುಲೋಚನಾ. ಆದರೆ ಸುಲು ಎಂದೇ ಪರಿಚಿತರಾಗಿರುತ್ತಾರೆ. ನಡುರಾತ್ರಿಯಲ್ಲಿ ಕೆಲಸ ಮಾಡುವ ಆರ್‌ಜೆಗಳ ಕೆಲಸ, ತುಂಟತನ, ಮೋಜಿನ ಸನ್ನಿವೇಶದ ಎಳೆ ಇಟ್ಟುಕೊಂಡು ಈ ಕಥೆ ಹೆಣೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.