ADVERTISEMENT

ಶಿಕ್ಷಕರ ಮೆದುಳಿಗೆ ಕಚಗುಳಿ...

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST
ಶಿಕ್ಷಕರ ಮೆದುಳಿಗೆ ಕಚಗುಳಿ...
ಶಿಕ್ಷಕರ ಮೆದುಳಿಗೆ ಕಚಗುಳಿ...   

ಶಿಕ್ಷಕರ ದಿನ ಸಮೀಪಿಸುತ್ತಿದೆ. ಅಕ್ಷರ ಕಲಿಸಿದ ಗುರುವಿಗೆ ಗೌರವ ಸಲ್ಲಿಸಲು ಶಾಲಾ, ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.  ಆದರೆ ಇಲ್ಲೊಂದು ಶಾಲೆ ಶಿಕ್ಷಕರಿಗಾಗಿ ರಸಪ್ರಶ್ನೆ ಸ್ಪರ್ಧೆ (ಕ್ವಿಜ್‌) ನಡೆಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.

ವರ್ಷ ಪೂರ್ತಿ ಮಕ್ಕಳಿಗೆ ಪ್ರಶ್ನೆ ಕೇಳುವ ಮೇಷ್ಟ್ರುಗಳ ಮೆದುಳಿಗೆ ಕಚಗುಳಿಯಿಡುವ ಮೂಲಕ ಗುರುವಂದನೆ ಸಲ್ಲಿಸಲಾಗುತ್ತಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ನ್ಯಾಷನಲ್‌ ಹಿಲ್‌ ವೀವ್‌ ಪಬ್ಲಿಕ್ ಸ್ಕೂಲ್‌ 2004ರಿಂದ ಅಂತರ ಶಾಲಾ ಮಟ್ಟದ ಶಿಕ್ಷಕರ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸುತ್ತಿದೆ. ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಪ್ರಾಥಮಿಕ ಶಾಲೆಯಿಂದ ಪಿಯುಸಿ ಹಂತದವರೆಗಿನ ಶಿಕ್ಷಕರು ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಒಂದು ಶಾಲೆಯಿಂದ ಎಷ್ಟು ಶಿಕ್ಷಕರಾದರೂ ಬರಬಹುದು. ಒಂದು ತಂಡದಲ್ಲಿ ಇಬ್ಬರು ಶಿಕ್ಷಕರಿರುತ್ತಾರೆ. ಆಯ್ಕೆ ಸುತ್ತಿನಲ್ಲಿ ಆಡಿಯೊ, ವಿಡಿಯೊ ಪ್ರಶ್ನೆಗಳಿರುತ್ತವೆ. ಟಾಪ್‌ 6 ತಂಡಗಳನ್ನು ಕ್ವಿಜ್‌ಗೆ ಆಯ್ಕೆ ಮಾಡಲಾಗುತ್ತದೆ.

ಆರು ತಂಡಗಳಿಗೆ ನಾಲ್ಕು ಸುತ್ತುಗಳ ಕ್ವಿಜ್‌ ಆಯೋಜಿಸುತ್ತಾರೆ. ಜನರಲ್‌, ವಿಷ್ಯುವಲ್‌, ಬಜರ್‌, ಪಜಲ್‌ ಸುತ್ತುಗಳಿರುತ್ತವೆ. ಅಂತಿಮವಾಗಿ ಮೂರು ತಂಡಗಳಿಗೆ ಬಹುಮಾನ ವಿತರಿಸಲಾಗುತ್ತದೆ.

‘ಎರಡು ವರ್ಷಗಳ ಹಿಂದೆ ಗುಜರಾತ್‌, ತಮಿಳುನಾಡಿನ ಕೆಲ ಶಾಲೆಗಳ ಶಿಕ್ಷಕರು ಭಾಗವಹಿಸಿದ್ದರು. ಈ ಬಾರಿ 120 ಶಾಲೆಗಳಿಗೆ ಆಹ್ವಾನ ನೀಡಿದ್ದೇವೆ. ಸ್ಪರ್ಧೆ ನಡೆಯುವ (ಸೆಪ್ಟೆಂಬರ್‌ 2) ದಿನದವರೆಗೂ ನೋಂದಣಿ ಮಾಡಿಕೊಳ್ಳುತ್ತೇವೆ.

ಪಿಕ್‌ಬ್ರೈನ್‌ನ ಗಿರಿಬಾಲಸುಬ್ರಹ್ಮಣ್ಯ ಅವರು ಕ್ವಿಜ್‌ಮಾಸ್ಟರ್‌ ಆಗಿರುತ್ತಾರೆ. ಗುರುಶಿಷ್ಯ ಪರಂಪರೆ ಉಳಿಯಬೇಕು ಎಂಬುದೇ ನಮ್ಮ ಉದ್ದೇಶ. ಅದಕ್ಕಾಗಿ ಈ ಕ್ವಿಜ್‌’ ಎನ್ನುತ್ತಾರೆ’ ನ್ಯಾಷನಲ್‌ ಹಿಲ್‌ವೀವ್‌ ಪಬ್ಲಿಕ್‌ ಸ್ಕೂಲ್‌ನ ಶಿಕ್ಷಕ ಕೆ.ಟಿ. ರಘುರಾಜ್‌. 

ಕ್ವಿಜ್‌ಗೆ ಪ್ರವೇಶ ಶುಲ್ಕವಿಲ್ಲ. ಸೆ.2ರಂದು ಬೆಳಿಗ್ಗೆ10ರಿಂದ  ಕ್ವಿಜ್ ಆರಂಭ. ಮಾಹಿತಿ, ನೋಂದಣಿಗೆ: 080–65580067, 28603163.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT