ADVERTISEMENT

ಸಿಂಗಾರಗೊಂಡ ಮಾಲ್‌

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2017, 19:30 IST
Last Updated 12 ಫೆಬ್ರುವರಿ 2017, 19:30 IST
ಸಿಂಗಾರಗೊಂಡ ಮಾಲ್‌
ಸಿಂಗಾರಗೊಂಡ ಮಾಲ್‌   

ಇನ್‌ಆರ್ಬಿಟ್‌ ಮಾಲ್‌ ಕೆಂಪು ಹೃದಯ ವಿನ್ಯಾಸದಿಂದ ಅಲಂಕಾರಗೊಂಡು ಪ್ರೇಮಿಗಳ ದಿನವನ್ನು ಆಚರಿಸಲು ಸಿದ್ಧವಾಗಿದೆ. ಸಂಪೂರ್ಣ ಮಾಲ್ ರೊಮ್ಯಾಂಟಿಕ್ ಆಗಿ ಸಿಂಗಾರಗೊಂಡಿದ್ದು, ಜೋಡಿಗಳಿಗಾಗಿ ಪ್ರತಿ ಗಂಟೆಗೊಂದು ವಿವಿಧ ಚಟುವಟಿಕೆಗಳನ್ನೂ ಆಯೋಜನೆ ಮಾಡಿದೆ. ಮೇಕ್‌ ಓವರ್, ನೇಲ್‌ ಆರ್ಟ್‌ ಸೌಲಭ್ಯವೂ ಇದೆ. ಸ್ಥಳ– ಇನ್‌ಆರ್ಬಿಟ್‌ ಮಾಲ್ , ವೈಟ್‌ಫೀಲ್ಡ್‌. ಫೆ. 14 ಮಧ್ಯಾಹ್ನ 3ರಿಂದ 8, ದೂರವಾಣಿ 080-6728 0000.

*
ವಿಶೇಷ ಪ್ರವಾಸ ಅವಕಾಶ
ಮೈ ಫಾರ್ಚೂನ್ ರೆಸ್ಟೊರೆಂಟ್‌ ಪ್ರೇಮಿಗಳ ದಿನಾಚರಣೆಗೆ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಬಾಣಸಿಗ ತಲವಾರ್ ಮೂರು ವಿವಿಧದ ಅಡುಗೆಯನ್ನು ಪ್ರೇಮಿಗಳಿಗಾಗಿ ಸಿದ್ಧಪಡಿಸಿದ್ದಾರೆ. ವಾಲ್‌ನಟ್ ಮತ್ತು ಸ್ಟ್ರಾಬೆರಿಯಿಂದ ಅಲಂಕಾರಗೊಂಡ ಬಾತುಕೋಳಿ ಸಲಾಡ್. ಕಿತ್ತಲೆ ಹಣ್ಣು ಮತ್ತು ಹುರಿದ ತರಕಾರಿ, ದಾಳಿಂಬೆಯೊಂದಿಗೆ ಸಾಸಿವೆ ಎಲೆ ಮತ್ತು ಸೊಪ್ಪುಗಳನ್ನು ಹಾಕಿ ಮಾಡಿದ ಬಗೆಬಗೆಯ ಅಡುಗೆ ತಯಾರಾಗಲಿದೆ. ಹಾಗೂ ‘ಎಕ್ಸ್‌ಪ್ರೆಸ್‌ ಯುವರ್ ಲವ್’ ಸ್ಪರ್ಧೆ ಆಯೋಜನೆಗೊಂಡಿದ್ದು ವಿಜೇತರಾದವರಿಗೆ ಎರಡು ರಾತ್ರಿ ಮೂರು ಹಗಲು ಪಂಚತಾರಾ ಹೋಟೆಲ್‌ನಲ್ಲಿ ಉಳಿದುಕೊಳ್ಳುವ ಅವಕಾಶವಿದೆ. ಫ್ರೆ. 14, ಮಧ್ಯಾಹ್ನ ಮತ್ತು ರಾತ್ರಿ ಊಟ ಲಭ್ಯ, ಒಬ್ಬರಿಗೆ ₹3,000.

*
ಉಡುಗೊರೆಗಾಗಿ ವಜ್ರದ ಆಭರಣ
ಈ ಬಾರಿಯ ಪ್ರೇಮಿಗಳ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಚಿರಕಾಲ ನೆನಪಿನಲ್ಲಿ ಉಳಿಯುವಂತಹ ಉಡುಗೊರೆ ನೀಡಬಹುದು. ಅದಕ್ಕೆಂದೇ ಫಾರ್‌ಎವರ್‌ಮಾರ್ಕ್‌ ವಿಶೇಷ ವಜ್ರದ ಆಭರಣಗಳನ್ನು ಬಿಡುಗಡೆ ಮಾಡಿದೆ.

ADVERTISEMENT

ಈ ಸಂಗ್ರಹದಲ್ಲಿರುವ ಪ್ರತಿಯೊಂದು ಆಭರಣವೂ ಒಂದೇ ಗಾತ್ರದ ಎರಡು ಹೊಳೆಯುವ ವಜ್ರಗಳನ್ನು ಹೊಂದಿರುತ್ತದೆ. ಮಾಹಿತಿಗೆ www.forevermark.com ನೋಡಿ.

*
ವಿಶೇಷ ಊಟ

ಕೋರ್ಟ್‌ಯಾರ್ಡ್‌ ಮ್ಯಾರಿಯೇಟ್  ರೆಸ್ಟೊರೆಂಟ್‌ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಐದು ಬಗೆಯ ವಿಶೇಷ ಅಡುಗೆ ಸಿದ್ಧಪಡಿಸಲಿದೆ. ಕಾಕ್‌ಟೇಲ್, ಶ್ಯಾಂಪೇನ್, ವೈನ್‌ ಮೇಲೆ ಶೇ 50ರಷ್ಟು ರಿಯಾಯಿತಿ ಇದೆ. ಫೆ. 14. ಸಂಜೆ 7.30ಯಿಂದ 11.30. ಟೇಬಲ್ ಕಾಯ್ದಿರಿಸಲು www.courtyardorr.com / www.fairfieldorr.com

*
ಲವ್ಲೀ ಶೂ..

ಮನ್ರೋ ಪಾದರಕ್ಷೆ ಬ್ರ್ಯಾಂಡ್ ಈ ಬಾರಿ ಪ್ರೇಮಿಗಳ ದಿನಕ್ಕೆ ಹೊಸ ವಿನ್ಯಾಸದ ಪಾದರಕ್ಷೆಗಳನ್ನು ಬಿಡುಗಡೆಗೊಳಿಸಿದೆ. ಪ್ರೇಮಿಗಳ ದಿನಾಚಾರಣೆಗಾಗಿ ಕೆಂಪು ಬಣ್ಣದ ತುಪ್ಪಟದ ಶೂ, ಹೀಲ್ಸ್‌, ಪಂಪ್ ಶೂಗಳು ಆಕರ್ಷಕವಾಗಿವೆ. ಪಂಪ್, ಫರ್‌ ಶೂಗಳು ₹2999ರಿಂದ ಆರಂಭ. ಹೈಹೀಲ್ಡ್‌ ಶೂಗಳ ಬೆಲೆ ₹3299. ನಗರದ ಮಳಿಗೆಗಳಲ್ಲಿ ಹಾಗೂ ಆನ್‌ಲೈನ್‌ನಲ್ಲೂ ಇವು ಲಭ್ಯ.

*
ರೊಮ್ಯಾಂಟಿಕ್ ಕೊಡುಗೆ
ಲೆನ್ಸ್‌ಕಾರ್ಟ್‌ ಆನ್‌ಲೈನ್ ತಾಣ ಪ್ರೇಮಿಗಳ ದಿನಕ್ಕೆ ವಿಶೇಷ ರಿಯಾಯಿತಿ ಮೇಲೆ ಕನ್ನಡಕಗಳನ್ನು ನೀಡುತ್ತಿದೆ. ಸನ್‌ಗ್ಲಾಸ್ ಮತ್ತು ಟೆಸ್ಟೆಡ್ ಕನ್ನಡಕಗಳ ಮೇಲೆ ರಿಯಾಯಿತಿ ಅನ್ವಯವಾಗುತ್ತದೆ.

ವಿನ್ಸೆಂಟ್ ಚೇಸ್ ಬ್ರಾಂಡ್‌ನ ಕನ್ನಡಕಗಳು ₹650ರಿಂದ ಆರಂಭವಾಗುತ್ತದೆ. ಕಪ್ಪು, ಹಸಿರು, ಕಂದು, ಬೂದುಬಣ್ಣದ ಸನ್‌ಗ್ಲಾಸ್‌ಗಳ ಬೆಲೆ ₹1499ರಿಂದ ಆರಂಭ. ಜಾನ್ ಜಾಕ್ಬಸ್‌ ರಾಡೊಡ್ರೈವ್‌ನ ಕಪ್ಪು ಮತ್ತು ಕಂದು ಬಣ್ಣದ ಸನ್‌ಗ್ಲಾಸ್ ₹4000ರಿಂದ ಆರಂಭವಾಗಲಿದೆ. ರೇವೊ ರಿಫ್ಲೆಕ್ಟರ್‌ ಹಾಗೂ ಪಾಪ್ ಸ್ಟಾರ್ ಎವಿಯೇಟರ್ಸ್‌ ಬೆಲೆ ₹1,499. ಇಟಾಲಿಯನ್ ಕರಕುಶಲ ಕರ್ಮಿಗಳು ತಯಾರಿಸುವ ಮರದ ಫ್ರೇಮ್ ₹4,000.  www.lenscart.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.