ADVERTISEMENT

‘ಸೋಲೊ’ ಮೇಕಿಂಗ್ ವಿಡಿಯೊ ನೋಡಿದಿರಾ?

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2017, 19:30 IST
Last Updated 17 ಸೆಪ್ಟೆಂಬರ್ 2017, 19:30 IST
‘ಸೋಲೊ’ದಲ್ಲಿ ದುಲ್ಕರ್‌ ಸಲ್ಮಾನ್‌
‘ಸೋಲೊ’ದಲ್ಲಿ ದುಲ್ಕರ್‌ ಸಲ್ಮಾನ್‌   

ಬಹುತಾರಾಗಣದ ಚಿತ್ರ ‘ಸೋಲೊ’ ದಿನೇದಿನೇ ನಿರೀಕ್ಷೆ ಮತ್ತು ಕುತೂಹಲಗಳನ್ನು ಹೆಚ್ಚಿಸುತ್ತಲೇ ಇದೆ. ಫಸ್ಟ್‌ ಲುಕ್‌, ಮೋಷನ್‌ ಪೋಸ್ಟರ್‌, ಟ್ರೇಲರ್‌ ಬಿಡುಗಡೆಯಾದಾಗ ಮಾತ್ರವಲ್ಲ, ‘ಸೋಲೊ’ಗೆ ಸಂಬಂಧಿಸಿದ ಪ್ರತಿ ಸುದ್ದಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹಿಟ್‌ ಆಗುತ್ತಿದೆ.

ನಟ ದುಲ್ಕರ್ ಸಲ್ಮಾನ್‌ ಮತ್ತು ನಿರ್ದೇಶಕ ಬಿಜೋಯ್‌ ನಂಬಿಯಾರ್‌ ಸೇರಿಕೊಂಡು ತಮ್ಮ ಅಭಿಮಾನಿಗಳಿಗಾಗಿ ಮತ್ತೊಂದು ಗಿಮಿಕ್‌ ಮಾಡಿದ್ಧಾರೆ. ದುಲ್ಕರ್‌ನ ಸಂಭಾಷಣೆ, ಅವರ ಪಾತ್ರ ‘ರುದ್ರ’ದ ಕೆಲವು ಭಂಗಿಗಳು, ನೇಹಾ ಶರ್ಮಾ ಅವರ ‘ಅಕ್ಷರಾ’ ಪಾತ್ರ ಹೀಗೆ ಕೆಲವು ಸನ್ನಿವೇಶಗಳನ್ನು ಒಳಗೊಂಡ ವಿಡಿಯೊವನ್ನು ಈ ಜೋಡಿ ಬಿಡುಗಡೆ ಮಾಡಿದೆ.

‘ರುದ್ರ’ ಮತ್ತು ಶೇಖರ್‌ ಪಾತ್ರಗಳ ಮೂಲಕ ದುಲ್ಕರ್‌ ಇಡೀ ಚಿತ್ರವನ್ನು ಆವರಿಸಿಕೊಳ್ಳಲಿದ್ದಾರೆ. ನೇಹಾ ಶರ್ಮಾ, ಶ್ರುತಿ ಹರಿಹರನ್‌, ಆರತಿ ವೆಂಕಟೇಶ್‌, ಸಾಯಿ ಧನಿಷ್ಕಾ, ನಾಸೀರ್‌, ಸುಹಾಸಿನಿ, ಸುರೇಶ್‌ ಮೆಮನ್‌, ಸುಜಾತಾ ಸೆಹಗಲ್‌ ಮತ್ತು ದೀಪ್ತಿ ಸಾತಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

ADVERTISEMENT

‘ಸೋಲೊ– ದಿ ವರ್ಲ್ಡ್‌ ಆಫ್‌ ರುದ್ರ’ದ ಮೇಕಿಂಗ್‌ ಕುರಿತ 3.39 ನಿಮಿಷದ ಈ ವಿಡಿಯೊ ಯೂ ಟ್ಯೂಬ್‌ನಲ್ಲಿ 1.5 ಲಕ್ಷ ಬಾರಿ ವೀಕ್ಷಣೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.