ADVERTISEMENT

ಹಲವು ಕಲೆಗಳ ಸಂಗಮ

​ಪ್ರಜಾವಾಣಿ ವಾರ್ತೆ
Published 31 ಜನವರಿ 2016, 19:30 IST
Last Updated 31 ಜನವರಿ 2016, 19:30 IST
ವೈಜಯಂತಿ ಕಾಶಿ ಮತ್ತು ಪ್ರತೀಕ್ಷಾ ಕಾಶಿ ಅವರ ಕೂಚಿಪುಡಿ ನೃತ್ಯದ ಆಕರ್ಷಕ ಭಂಗಿ
ವೈಜಯಂತಿ ಕಾಶಿ ಮತ್ತು ಪ್ರತೀಕ್ಷಾ ಕಾಶಿ ಅವರ ಕೂಚಿಪುಡಿ ನೃತ್ಯದ ಆಕರ್ಷಕ ಭಂಗಿ   

ಇತ್ತೀಚೆಗೆ ಪುರಂದರ ದಾಸ ಮತ್ತು  ತ್ಯಾಗರಾಜರ ಸ್ಮರಣಾರ್ಥವಾಗಿ ಇಂದಿರಾನಗರ ಸಂಗೀತ ಸಭಾ 12ನೇ ವಾರ್ಷಿಕ ಸಂಗೀತ ಮತ್ತು ನೃತ್ಯ ಉತ್ಸವವನ್ನು ಆಯೋಜಿಸಿತ್ತು. ಶಾಸ್ತ್ರೀಯ ಸಂಗೀತ, ನೃತ್ಯ ಹಾಗೂ ವಾದ್ಯ ಸಂಗೀತ ಕ್ಷೇತ್ರದ ಖ್ಯಾತ ಕಲಾವಿದರು ಕಾರ್ಯಕ್ರಮ ನೀಡಿದರು.

ಅಕ್ಕರೈ ಸಹೋದರಿಯರಾದ ಎಸ್ ಸುಬ್ಬುಲಕ್ಷ್ಮಿ ಮತ್ತು ಎಸ್. ಸ್ವರಣಲತಾ, ವಯಲಿನ್ ಯುಗಳ ಗೋಷ್ಠಿ ಮೂಲಕ ಕಾರ್ಯಕ್ರಮ ಆರಂಭವಾಯಿತು. ಎರಡನೇ ದಿನ, ಪದ್ಮಭೂಷಣ ಟಿ.ವಿ. ಶಂಕರನಾರಾಯಣನ್ ಅವರ ‘ಸ್ವರ ಪ್ರಸ್ತಾರ’ ಪ್ರೇಕ್ಷಕರ ಮನರಂಜಿಸಿತು. ಇನ್ನೊಂದು ವಿಶಿಷ್ಟ ಪ್ರದರ್ಶನವೆಂದರೆ  ಗೌರಿ ನಿರ್ದೇಶನ ‘ಫೈರ್ ಮತ್ತು ಆ್ಯಶ್’. ನೃತ್ಯ, ಸಂಗೀತ, ಕವನ ಮತ್ತು ಚಿತ್ರಕಲೆಗಳನ್ನು ಮಿಶ್ರಗೊಳಿಸಿ ರೂಪಿಸಲಾದ ಈ ಪ್ರದರ್ಶನವು ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.

22 ವರ್ಷದ ಉತ್ಸವ ಲಾಲ್ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಪಿಯಾನೊ ಮೂಲಕ ನುಡಿಸಿದರು.  ನಾಲ್ಕನೇ ದಿನ. ವೈಜಯಂತಿ ಕಾಶಿ ಮತ್ತು ಪ್ರತೀಕ್ಷಾ ಕಾಶಿ ಕೂಚಿಪುಡಿ ನೃತ್ಯ ಪ್ರದರ್ಶನ ನೀಡಿದರು. ಐದನೇ ದಿನ ಮೈಸೂರು ಎಂ. ನಾಗರಾಜ್‌, ಮೈಸೂರು ಎಂ, ಮಂಜುನಾಥ್‌, ವಯಲಿನ್ ಯುಗಳ ಪ್ರದರ್ಶನ ನೀಡಿದರು.

ಅಂತಿಮ ದಿನ ಅಮೃತಾ ವೆಂಕಟೇಶ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತ ಪಡಿಸಿದರು. ಇಂದಿರನಗರ ಸಂಗೀತ ಸಭಾ ನೀಡಿ ಗೌರವಿಸುವ ‘ಪುರಂದರ ಪ್ರಶಸ್ತಿ–2016’ ಪ್ರಶಸ್ತಿಯನ್ನು ಟಿ.ವಿ. ಶಂಕರನಾರಾಯಣನ್ ಅವರಿಗೆ ನೀಡಿ ಗೌರವಿಸಲಾಯಿತು. ‘ಯುವ ಪುರಂದರ ಪ್ರಶಸ್ತಿ 2016’ ಪ್ರಶಸ್ತಿಯನ್ನು ಅಮೃತಾ ವೆಂಕಟೇಶ್ ಕರ್ನಾಟಕ ಸಂಗೀತ - ಗಾಯನ ವಿಭಾಗದಲ್ಲಿ ಮತ್ತು ಎಸ್ ಶುಭಾಲಕ್ಷ್ಮಿ, ಎಸ್. ಸ್ವರಣಲತಾ, ಕರ್ನಾಟಕ ಸಂಗೀತ– ವಯಲಿನ್ ವಿಭಾಗದಿಂದ ಪಡೆದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT