ADVERTISEMENT

ಹಳ್ಳಿಹಾಡು

ಪಿಕ್ಚರ್‌ ಪ್ಯಾಲೆಸ್‌

ಪ್ರಜಾವಾಣಿ ಚಿತ್ರ
Published 14 ಸೆಪ್ಟೆಂಬರ್ 2014, 19:30 IST
Last Updated 14 ಸೆಪ್ಟೆಂಬರ್ 2014, 19:30 IST

ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಜಾನಪದ ಕಲೆಗಳು ಮರೆಯಾಗುತ್ತಿವೆ ಎಂಬ ಕೂಗು ಹೊಸದೇನಲ್ಲ. ಆದರೆ ಇಂದಿನ ವಿಜ್ಞಾನ/ತಂತ್ರಜ್ಞಾನ/ಕಂಪ್ಯೂಟರ್ ಯುಗ ಪರಂಪರಾಗತ ಕಲೆಗಳನ್ನು ಮರೆಸುತ್ತಿದೆ ಎಂಬ ಆಪಾದನೆಯ ನಡುವೆಯೇ ನಗರದ ಜನಕ್ಕೆ ‘ಜನಪದ’ ಮನರಂಜನೆ ನೀಡುವ ಪ್ರಯತ್ನಕ್ಕೆ ಅರಬಿಂದೊ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಮುಂದಾಗಿದ್ದಾರೆ .

ಶನಿವಾರ (ಸೆ.13) ಮಹಾಲಕ್ಷ್ಮಿಪುರದ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಗ್ರಾಮೋತ್ಸವ’ದಲ್ಲಿ ವಿದ್ಯಾರ್ಥಿನಿಯರು ವಿವಿಧ ಕಲಾಪ್ರಕಾರಗಳನ್ನು ಪ್ರದರ್ಶಿಸಿ ಸಂಭ್ರಮಿಸಿದರು. ಕನ್ನಡದ ಜಾನಪದ ಸಂಸ್ಕೃತಿಯು ಪ್ರಮುಖ ಭಾಗವಾಗಿ ಬೆಳೆದು ಬಂದ ಜನಪದ ಗೀತೆಗಳು, ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ಸಾರುವ ನೃತ್ಯಗಳು, ಯಕ್ಷಗಾನ ಹೀಗೆ ಹಲವಾರು ಬಗೆಯ ಕಲಾ ಪ್ರಕಾರಗಳನ್ನು ವಿದ್ಯಾರ್ಥಿನಿಯರು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.