ADVERTISEMENT

‘ಹಿಂದಿ ಮೀಡಿಯಂ’ ಹಾಡು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2017, 19:30 IST
Last Updated 28 ಏಪ್ರಿಲ್ 2017, 19:30 IST
‘ಹಿಂದಿ ಮೀಡಿಯಂ’ ಹಾಡು ಬಿಡುಗಡೆ
‘ಹಿಂದಿ ಮೀಡಿಯಂ’ ಹಾಡು ಬಿಡುಗಡೆ   

ಶಾಲಾ ದಿನಗಳನ್ನು ನೆನೆಸಿಕೊಳ್ಳುವುದೆಂದರೆ ಮಳೆಯಲ್ಲಿ ನೆನೆದು ಬಿಸಿ ಕಾಫಿ ಕುಡಿದಂತೆ. ಬೆಚ್ಚನೆಯ ಅನುಭವ ನೀಡುತ್ತವೆ. ಮಕ್ಕಳ ಶೈಕ್ಷಣಿಕ ಬದುಕು, ಅವರಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ನಿಟ್ಟಿನಲ್ಲಿ ತಂದೆತಾಯಿ ಪಡುವ ಶ್ರಮ ಎಲ್ಲದರ ಹೂರಣವನ್ನು ಹೊತ್ತುಕೊಂಡು ನಿರ್ಮಾಣವಾದ ಸಿನಿಮಾ ‘ಹಿಂದಿ ಮೀಡಿಯಂ’.

ಈ ಸಿನಿಮಾದ ತನಿಷ್ಕಾ ಸಾಂಘ್ವಿ ಹಾಡಿರುವ ಗೀತೆ ಯೂ ಟ್ಯೂಬ್‌ನಲ್ಲಿ ಏಪ್ರಿಲ್‌್ 28ರಂದು ಬಿಡುಗಡೆಯಾಗಿದ್ದು ಕೆಲವೇ ಗಂಟೆಗಳಲ್ಲಿ 10ಸಾವಿರ ವೀಕ್ಷಕರನ್ನು ಪಡೆದಿದೆ. ಈ ಹಾಡನ್ನು ಸಚಿನ್ ಜಿಗಾರ್ ಸಂಯೋಜನೆ ಮಾಡಿದ್ದಾರೆ.

ಇರ್ಫಾನ್ ಖಾನ್, ಸಬಾ ಕಮ್ರ್‌ ಅಭಿನಯಿಸಿರುವ ಈ ಸಿನಿಮಾವನ್ನು ಸಾಕೇತ್‌ ಚೌಧರಿ ನಿರ್ದೇಶಿಸಿದ್ದಾರೆ. ಶಾಲೆಗೆ ಪ್ರವೇಶ ಪಡೆದ ಮೊದಲ ದಿನದ ಆತಂಕಭರಿತ ಸಂಭ್ರಮ, ಹೊಸ ಪುಸ್ತಕ ಖರೀದಿಸಿದ ಖುಷಿ, ಗೆಳೆಯರೊಂದಿಗೆ ಆಟ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ಪಡೆದ ಹೆಮ್ಮೆಯ ಕ್ಷಣಗಳ ಮೆಲುಕು ಈ ಹಾಡಿನಲ್ಲಿ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.