ADVERTISEMENT

‘ಅವರವರ ಪ್ರೀತಿ ಅವರಿಗೆ’

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2014, 19:30 IST
Last Updated 12 ಡಿಸೆಂಬರ್ 2014, 19:30 IST
ಕಿರಣ್‌, ಅಮೀರ್‌ ಖಾನ್‌
ಕಿರಣ್‌, ಅಮೀರ್‌ ಖಾನ್‌   

ಸಾರ್ವಜನಿಕವಾಗಿ ಪ್ರೀತಿ ವ್ಯಕ್ತಪಡಿಸುವುದರಲ್ಲಿ ತಪ್ಪಿಲ್ಲ. ಅದು ಅವರವರ ವೈಯಕ್ತಿಕ ಆಯ್ಕೆ’ ಎಂದು ನಟ ಅಮೀರ್‌ ಖಾನ್‌ ‘ಕಿಸ್‌ ಆಫ್‌ ಲವ್‌ ಡೇ’ ಆಚರಣೆಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.

ದೇಶದ ನಾನಾ ಭಾಗಗಳಲ್ಲಿ ಇತ್ತೀಚೆಗೆ ನಡೆಯುತ್ತಿರುವ ‘ಕಿಸ್‌ ಆಫ್‌ ಲವ್’ ಆಚರಿಸುವ ಕುರಿತು ಅಮೀರ್‌ ಅವರನ್ನು ಕೇಳಿದಾಗ, ‘ನಾನು ನನ್ನ ಪ್ರೀತಿಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತೇನೆ’ ಎಂದು ಹೇಳಿದ್ದಾರೆ.

‘ಜನರ ನಡುವೆ ಸಾಗುವಾಗ ನಾನು ಪತ್ನಿ ಕಿರಣ್‌ ಅವರ ಕೈಯನ್ನು ಹಿಡಿದುಕೊಂಡೇ ಓಡಾಡುತ್ತೇನೆ. ಸಾರ್ವಜನಿಕವಾಗಿ ಪ್ರೀತಿ ವ್ಯಕ್ತಪಡಿಸುವುದನ್ನು ಕೆಲವರು ಏಕೆ ವಿರೋಧಿಸುತ್ತಾರೆ ಎಂದು ನನಗೆ ಅರ್ಥವಾಗುತ್ತದೆ. ಆದರೆ ನಮ್ಮ ಅಭಿಪ್ರಾಯ ಹೇಳುವ ಹಕ್ಕು ನಮಗಿದೆ’ ಎಂದಿದ್ದಾರೆ ನಟ ಅಮೀರ್‌.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.