ADVERTISEMENT

‘ಬಿಪಾಷಾ ದಿ ಬೆಸ್ಟ್‌’

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2016, 19:30 IST
Last Updated 22 ಏಪ್ರಿಲ್ 2016, 19:30 IST
ಬಿಪಾಷಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್
ಬಿಪಾಷಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್   

‘ಬಿಪಾಷಾ, ಯು ಆರ್‌ ದಿ ಬೆಸ್ಟ್‌’ ಹೀಗೆಂದು ಬಾಲಿವುಡ್ ಕೃಷ್ಣಸುಂದರಿಯನ್ನು ಹಾಡಿ ಹೊಗಳಿದ್ದು ಬೇರಾರೂ ಅಲ್ಲ. ಅವರ ಭಾವಿ ಪತಿ ಕರಣ್ ಸಿಂಗ್ ಗ್ರೋವರ್. ಸಾಕಷ್ಟು ಸುದ್ದಿ ಮಾಡಿ ಕೊನೆಗೂ ಮದುವೆ ನಿರ್ಧಾರವನ್ನು ಪ್ರಕಟಿಸಿದ್ದ ಈ ಜೋಡಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಸಂದೇಶಗಳನ್ನು ಹರಿಬಿಡುತ್ತಿದೆ.

ತಮ್ಮ ಭಾವಿ ಪತ್ನಿ ಬಿಪಾಷಾ ಬಸು ಅವರನ್ನು ಮನತುಂಬಿ ಹೊಗಳಿರುವ ಕರಣ್‌, ‘ನಿನ್ನ ಬಗ್ಗೆ ಹೇಳುವುದೇನು, ಯು ಆರ್‌ ದಿ ಬೆಸ್ಟ್‌’ ಎಂದು ಟ್ವೀಟ್‌ ಮಾಡಿದ್ದಾರೆ. ಬಿಪಾಷಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ ಸಪ್ತಪದಿ ತುಳಿಯುವ ಮಹೂರ್ತ ನಿಗದಿ ಆಗಿದ್ದು, ಕರೆಯೋಲೆಯೂ ಸಹ ಸಿದ್ಧವಾಗಿದೆ.

ಏ.30ರಂದು ಈ ಬಾಲಿವುಡ್ ಜೋಡಿ ಹಸೆಮಣೆ ಏರಲಿದೆ. ಬಿಪಾಷಾ ಬ್ರೈಡಲ್ ವೇರ್‌ ಮತ್ತು ಕರಣ್ ಬ್ಲಾಕ್ ಅಂಡ್ ವೈಟ್ ಸೂಟ್‌ನಲ್ಲಿರುವ ಫೋಟೊ ಕಾರ್ಡ್‌ ಆಕರ್ಷಕವಾಗಿ ಮೂಡಿಬಂದಿದೆ. ಈ ನಡುವೆ ಕರಣ್‌ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಆಕರ್ಷಕ ಕವಿತೆಯನ್ನೂ ಬರೆದು ತಮ್ಮ ಪ್ರೀತಿಯ ಆಳವನ್ನು ತೋರ್ಪಡಿಸಿಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಬೀಪ್ಸ್‌, ‘ನಿನ್ನ ಪ್ರೀತಿ ಹಾಗೂ ಭಾವನೆಗೆ ಧನ್ಯವಾದ’ ಎಂದಿದ್ದಾರೆ.

ಕೆಲ ಸಮಯದ ಹಿಂದಷ್ಟೇ ಬಿಪ್ಸ್ ತಾನು ಮದುವೆಯಾಗುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದರು. ‘ಅಲೋನ್’ ಚಿತ್ರದ ನಂತರ ಈ ಜೋಡಿ ನಂತರ  ಅಲ್ಲಲ್ಲಿ ಒಟ್ಟೊಟ್ಟಿಗೇ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು. ಸದ್ಯ ಇಬ್ಬರೂ ಮನೆಯವರ ಒಪ್ಪಿಗೆ ಪಡೆದು, ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಬಿಪಾಷಾ ಮನೆಯಲ್ಲೇ ಬಂಗಾಳದ ಸಂಪ್ರದಾಯದಂತೆ ಮದುವೆ ನಡೆಯಲಿದೆ. ಮದುವೆಗಿನ್ನೂ ಎಂಟೇ ದಿನಗಳು ಬಾಕಿ ಉಳಿದಿವೆ. ಮೆಹಂದಿ ಕಾರ್ಯಕ್ರಮ ಆರಂಭವಾಗಿದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿ ಹೀಗೆ ಪ್ರಣಯ ಸಂದೇಶಗಳನ್ನು ಬದಲಾಯಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಪುಳಕವನ್ನು ಉಂಟುಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.