ADVERTISEMENT

Fact Check: ರಾಹುಲ್ ಗಾಂಧಿ BJP ಚಿಹ್ನೆಯ ಟಿ–ಶರ್ಟ್‌ ಧರಿಸಿದ್ದು ಸುಳ್ಳು ಸುದ್ದಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2024, 19:30 IST
Last Updated 23 ಜನವರಿ 2024, 19:30 IST
<div class="paragraphs"><p>ತಿರುಚಲಾದ ಚಿತ್ರ.</p></div>

ತಿರುಚಲಾದ ಚಿತ್ರ.

   

ಕಾಂಗ್ರೆಸ್‌ ಸಂಸದ ಮತ್ತು ನಾಯಕ ರಾಹುಲ್ ಗಾಂಧಿ ಅವರು, ಬಿಜೆಪಿಯ ಚಿಹ್ನೆಯಾದ ‘ಕಮಲ’ದ ಚಿತ್ರ ಇರುವ ಟಿ–ಶರ್ಟ್‌ ಧರಿಸಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ. ಅದರೊಟ್ಟಿಗೆ, ‘ನಾವು ಮೊದಲೇ ಹೇಳುತ್ತಿದ್ದೆವು, ರಾಹುಲ್ ಗಾಂಧಿ ಬಿಜೆಪಿಯ ಏಜೆಂಟ್‌ ಎಂದು. ಈಗ ಅದು ಸಾಬೀತಾಗಿದೆ’ ಎಂಬ ಸಂದೇಶವನ್ನೂ ಹಂಚಿಕೊಳ್ಳಲಾಗಿದೆ. ಆದರೆ ಇದು ತಿರುಚಲಾದ ಚಿತ್ರ.

ಇದು ಮೂಲ ಚಿತ್ರ. ಕಾಂಗ್ರೆಸ್‌ನ ಐಟಿ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರೀನೆತ್‌ ಅವರು ಜನವರಿ 14ರಂದು ಈ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದರು. ಮೂಲಚಿತ್ರದಲ್ಲಿ ರಾಹುಲ್ ಗಾಂಧಿ ಧರಿಸಿರುವ ಟಿ–ಶರ್ಟ್‌ನ ಹಿಂಭಾಗದಲ್ಲಿ ಯಾವುದೇ ಚಿತ್ರ ಇಲ್ಲ.

ADVERTISEMENT

ಇದು ಮೂಲ ಚಿತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.