ADVERTISEMENT

ಅಂಗವಿಕಲ ಮಕ್ಕಳಿರುವ ಸರ್ಕಾರಿ ನೌಕರರ ವರ್ಗಾವಣೆ ನಿಷೇಧ

​ಪ್ರಜಾವಾಣಿ ವಾರ್ತೆ
Published 10 ಜೂನ್ 2014, 19:30 IST
Last Updated 10 ಜೂನ್ 2014, 19:30 IST

ನವದೆಹಲಿ (ಪಿಟಿಐ): ಅಂಗವಿಕಲ ಮಕ್ಕಳನ್ನು ಹೊಂದಿರುವ ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡಬಾರದು ಮತ್ತು ವರ್ಗಾವಣೆ ಮಾಡಿದ ಸಂದರ್ಭದಲ್ಲಿ ಹೋಗಲು ಒಪ್ಪದಿದ್ದಲ್ಲಿ ಸ್ವಯಂ ನಿವೃತ್ತಿ ಹೊಂದುವಂತೆ ಸೂಚಿಸಬಾರದು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

ಅಂಗವಿಕಲ ಮಕ್ಕಳನ್ನು ತಂದೆ ತಾಯಿ ಮಾತ್ರ ಕಾಳಜಿಯಿಂದ ನೋಡಿಕೊಳ್ಳಲು ಸಾಧ್ಯ ಮತ್ತು ವರ್ಗಾವಣೆಗೊಂಡರೆ ಮಕ್ಕಳ ಪುನರ್ವಸತಿ ವ್ಯವಸ್ಥೆ ಹದಗೆಟ್ಟು ಹೊಸ ಸ್ಥಳದಲ್ಲಿ ಹೊಂದಿಕೊಳ್ಳಲು ಮಕ್ಕಳಿಗೆ ಕಷ್ಟವಾಗುತ್ತದೆ ಎಂದು ಸಿಬ್ಬಂದಿ ಮತ್ತು ತರ­ಬೇತಿ ಇಲಾಖೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ತೀರಾ ಆಡಳಿ­ತಾತ್ಮಕ ಸಮಸ್ಯೆಗಳು ಇದ್ದಾಗ ಮಾತ್ರ ಅವರನ್ನು ವರ್ಗಾವಣೆ ಮಾಡ­ಬೇಕು. ಇಲ್ಲದಿದ್ದರೆ ಮಾಮೂಲಿ ವರ್ಗಾವಣೆ ಪ್ರಕ್ರಿಯೆಯಿಂದ ಇವರನ್ನು ಹೊರಗಿಡಬೇಕು ಎಂದು ಸೂಚಿಸಲಾಗಿದೆ.

ಕುರುಡುತನ, ದೃಷ್ಟಿ ಮಾಂದ್ಯತೆ, ಕಿವುಡುತನ, ಪಾರ್ಶ್ವವಾಯು, ಮಾನಸಿಕ ಅಸ್ವಸ್ಥತೆ ಮತ್ತು ಬಹುಅಂಗ ವಿಕಲತೆ ಹೊಂದಿದ ಮಕ್ಕಳಿದ್ದರೆ ಅಂತಹ ನೌಕರರನ್ನು ವರ್ಗಾವಣೆ ಮಾಡಬಾರದು ಎಂದು ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT