ADVERTISEMENT

ಅಂಗವಿಕಲ ಯುವತಿ ಮೇಲೆ ಅತ್ಯಾಚಾರ

ಗರ್ಭಿಣಿಯಾದ ಬಳಿಕ ಆಶ್ರಮದಿಂದ ಹೊರ ಹಾಕಿದ ಬಾಬಾ: ಬಂಧನ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST

ಲಖನೌ: ಅಂಗವಿಕಲ ಯುವತಿ ಮೇಲೆ ಅತ್ಯಾಚಾರವೆಸಗಿದ ಆರೋಪಕ್ಕಾಗಿ ಮಥುರಾ ಜಿಲ್ಲೆಯ ಬರ‍್ಸಾನಾದಲ್ಲಿರುವ ಆಶ್ರಮದ ‘ಬಾಬಾ’ ಅವರನ್ನು ಬಂಧಿಸಲಾಗಿದೆ.

ಪಶ್ಚಿಮ ಬಂಗಾಳದ ಈ ಯುವತಿ ಕೆಲವು ತಿಂಗಳಿಂದ ಆಶ್ರಮದಲ್ಲಿ ವಾಸಿಸುತ್ತಿದ್ದರು.

‘ಹಲವು ಬಾರಿ ಬಾಬಾ ತನ್ನ ಮೇಲೆ ಅತ್ಯಾಚಾರ ಎಸಗಿದ್ದ. ಗರ್ಭಿಣಿಯಾದ ಮೇಲೆ ಆಶ್ರಮದಿಂದ ಹೊರ ಹಾಕಿದ್ದಾರೆ’ ಎಂದು ಯುವತಿ ಆರೋಪಿಸಿದ್ದಾರೆ.

ADVERTISEMENT

ಪಶ್ಚಿಮ ಬಂಗಾಳದ ಈ ಯುವತಿ ಮನೆಗೆ ಹಿಂತಿರುಗಿದ ಬಳಿಕ ಅಲ್ಲಿನ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಪಶ್ಚಿಮ ಬಂಗಾಳದ ಪೊಲೀಸರು, ಸ್ಥಳೀಯ ಪೊಲೀಸರಸಹಾಯದೊಂದಿಗೆ ಆಶ್ರಮಕ್ಕೆ ತೆರಳಿ ಬಾಬಾ ಅವರನ್ನು ಗುರುವಾರ ರಾತ್ರಿ ಬಂಧಿಸಿದ್ದು, ಪಶ್ಚಿಮ ಬಂಗಾಳಕ್ಕೆಕರೆದೊಯ್ದಿದ್ದಾರೆ. ಆದರೆ, ಯುವತಿಯ ಆರೋಪವನ್ನು ಬಾಬಾ ತಳ್ಳಿಹಾಕಿದ್ದಾರೆ. ‌

‘ಯುವತಿಯು ತನ್ನನ್ನೇ ಆಶ್ರಮದಿಂದ ಹೊರಹಾಕಲು ಯತ್ನಿಸಿದ್ದರು. ಹೀಗಾಗಿ ಸುಳ್ಳು ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ. ಕಳೆದ ವರ್ಷ ಯುವತಿಯ ಕುಟುಂಬದ ಸದಸ್ಯರು ಆಕೆಯನ್ನು ಕರೆ ತಂದಿದ್ದರು. ಆಕೆಯನ್ನು ನೋಡಿಕೊಳ್ಳುವಂತೆ ಹೇಳಿ ಇಲ್ಲಿಯೇ ಬಿಟ್ಟು ಹೋಗಿದ್ದರು’ ಎಂದು ಬಾಬಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.