ADVERTISEMENT

ಅಜ್ಮೀರ್‌ ಸ್ಫೋಟ ಪ್ರಕರಣ; ಸ್ವಾಮಿ ಅಸೀಮಾನಂದ ಖುಲಾಸೆ

ಎನ್‌ಐಎ ವಿಶೇಷ ನ್ಯಾಯಾಲಯ

ಏಜೆನ್ಸೀಸ್
Published 8 ಮಾರ್ಚ್ 2017, 13:56 IST
Last Updated 8 ಮಾರ್ಚ್ 2017, 13:56 IST
ಅಜ್ಮೀರ್‌ ಸ್ಫೋಟ ಪ್ರಕರಣ; ಸ್ವಾಮಿ ಅಸೀಮಾನಂದ ಖುಲಾಸೆ
ಅಜ್ಮೀರ್‌ ಸ್ಫೋಟ ಪ್ರಕರಣ; ಸ್ವಾಮಿ ಅಸೀಮಾನಂದ ಖುಲಾಸೆ   

ಜೈಪುರ: 2007ರ ಅಜ್ಮೀರ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌) ಮಾಜಿ ಪ್ರಚಾರಕ ಸ್ವಾಮಿ ಅಸೀಮಾನಂದ ಅವರನ್ನು ಜೈಪುರ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.

ರಂಜಾನ್‌ ಆಚರಣೆ ವೇಳೆ 2007ರ ಅಕ್ಟೋಬರ್‌ 11ರಂದು ಅಜ್ಮೀರ್‌ನ ಖವಾಜಾ ಮೊಯ್ನುದ್ದೀನ್‌ ಚಿಸ್ತಿ ದರ್ಗಾದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಮೃತ ಪಟ್ಟು, 15 ಜನ ಗಾಯಗೊಂಡಿದ್ದರು.

ಹೈದರಾಬಾದ್‌ನ ಮೆಕ್ಕಾ ಮಸೀದಿ ಸ್ಫೋಟ ಹಾಗೂ ಸಂಜೋತಾ ಎಕ್ಸ್‌ಪ್ರೆಸ್‌ ರೈಲು ಸ್ಫೋಟದಲ್ಲಿ ಭಾಗಿಯಾಗಿರುವವರೇ ಈ ಘಟನೆಯನ್ನೂ ನಡೆಸಿದ್ದಾರೆ ಎಂಬುದು ತನಿಖೆಯಿಂದ ತಿಳಿದು ಬಂದಿತ್ತು.

ADVERTISEMENT

ಸ್ವಾಮಿ ಅಸೀಮಾನಂದ ಸೇರಿದಂತೆ ಹಲವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿಲಾಗಿತ್ತು. ಎನ್‌ಐಎ ನ್ಯಾಯಾಲಯವು ಸ್ವಾಮಿ ಅಸೀಮಾನಂದ ಹಾಗೂ ಇತರೆ ಐದು ಆರೋಪಿಗಳನ್ನು ನಿರ್ದೋಷಿಗಳೆಂದು ಹೇಳಿದೆ.

ದೇವೇಂದ್ರ ಗುಪ್ತಾ, ಭವೇಶ್‌ ಗುಪ್ತಾ ಹಾಗೂ ಸುನಿಲ್‌ ಜೋಷಿ(ಮೃತ) ಅಪರಾಧಿಗಳೆಂದು ಕೋರ್ಟ್‌ ಹೇಳಿದೆ. ಮಾರ್ಚ್‌ 16ರಂದು ನ್ಯಾಯಾಲಯ ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 149 ಸಾಕ್ಷೀದಾರರು, 451 ದಾಖಲೆಗಳ ಪರಿಶೀಲನೆ ನಡೆಸಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಮೂರು ಪ್ರತ್ಯೇಕ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.