ADVERTISEMENT

ಅಣ್ಣಾ ಹಜಾರೆಗೆ ಹೊಸ ಕಾರು

​ಪ್ರಜಾವಾಣಿ ವಾರ್ತೆ
Published 4 ಜೂನ್ 2015, 10:29 IST
Last Updated 4 ಜೂನ್ 2015, 10:29 IST

ಮುಂಬೈ(ಪಿಟಿಐ): ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ತಮ್ಮ ಸ್ಕಾರ್ಪಿಯೊ ವಾಹನವನ್ನು ಹರಾಜಿನಲ್ಲಿ ಮಾರಾಟ ಮಾಡಿದ ತಿಂಗಳ ಬಳಿಕ ಹೊಸ ಇನ್ನೊವಾ ಕಾರನ್ನು ಖರೀದಿಸಿದ್ದಾರೆ.

ತಮ್ಮ ಹೊಸ ಟೊಯೊಟಾ ಇನ್ನೊವಾ ಕಾರಿನಲ್ಲಿ ಅಣ್ಣಾ ಅವರು ರಾಳೇಗಣ ಸಿದ್ಧಿಯಲ್ಲಿ ಗುರುವಾರ ಸುತ್ತಾಟ ನಡೆಸಿದರು. ಗ್ರಾಮದ ಜನರು ರಸ್ತೆಗಳಲ್ಲಿ ಗುಂಪು ಗೂಡಿ ಅಣ್ಣಾ ಅವರ ಹೊಸ ಕಾರಿನ ‘ಮೆರವಣಿಗೆ’ ವೀಕ್ಷಿಸಿದರು.

‘ಇನ್ನೊವಾ ಕಾರು ನಿನ್ನೆ ರಾಳೇಗಣ ಸಿದ್ಧಿಗೆ ಬಂತು. ಅಣ್ಣಾ ಹಜಾರೆ ಅವರಿಗೆ ಬೆನ್ನುನೋವಿರುವುದರಿಂದ ಅವರಿಗೆ ಹಿತವೆನಿಸುವ ಹಾಗೆ ಕಾರಿನ ಆಸನಗಳನ್ನು ಮರು ವಿನ್ಯಾಸ ಮಾಡಿಸಲಾಗಿದೆ’ ಎಂದು ಅಣ್ಣಾ ಅವರ ಸಹಾಯಕ ದತ್ತಾ ಅವಾರಿ ತಿಳಿಸಿದ್ದಾರೆ.

ADVERTISEMENT

ಎಂಟು ವರ್ಷ ಹಳೆಯದಾಗಿದ್ದ ಸ್ಕಾರ್ಪಿಯೊ ವಾಹನವನ್ನು ಮೇ 17ರಂದು ನಡೆದ ಬಹಿರಂಗ ಹರಾಜಿನಲ್ಲಿ ₹ 9.11 ಲಕ್ಷಕ್ಕೆ ಮಾರಾಟ ಮಾಡಲಾಗಿತ್ತು. ಪ್ರವೀಣ ಅಲಿಯಾಸ್‌ ಅತುಲ್‌ ಲೋಖಂಡೆ ಎಂಬುವರು ಸ್ಕಾರ್ಪಿಯೊ ಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.