ADVERTISEMENT

ಅತ್ಯಾಚಾರ:ಡಿಐಜಿ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 24 ಜುಲೈ 2014, 19:30 IST
Last Updated 24 ಜುಲೈ 2014, 19:30 IST


ಮುಂಬೈ (ಪಿಟಿಐ): ಹಿರಿಯ ಐಪಿಎಸ್‌ ಅಧಿಕಾರಿ ಹಾಗೂ ಮುಂಬೈ ನಾಗರಿಕ ಹಕ್ಕುಗಳ ರಕ್ಷಣಾ ವಿಭಾಗದ ಡಿಐಜಿ ಸುನೀಲ್ ಪಾರಸ್ಕರ್  ವಿರುದ್ಧ ರೂಪದರ್ಶಿಯೊಬ್ಬಳು ಅತ್ಯಾಚಾರ ದೂರು ದಾಖಲಿಸಿದ್ದಾಳೆ.

ಪಾರಸ್ಕರ್‌ ತನ್ನ ಮೇಲೆ ಅನೇಕ  ಬಾರಿ ಅತ್ಯಾಚಾರ ನಡೆಸಿದ್ದಾರೆ ಎಂದು  ರೂಪದರ್ಶಿ ಆರೋಪಿಸಿದ್ದಾಳೆ. ಆಕೆ ನೀಡಿದ ದೂರಿನ ಮೇಲೆ ಅಧಿಕಾರಿ ವಿರುದ್ಧ ಮಲ್ವಾನಿ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. 

ಪಾರಸ್ಕರ್‌  ಮುಂಬೈ ಉತ್ತರ ವಲಯದ ಹೆಚ್ಚುವರಿ ಕಮೀಷನರ್‌ ಆಗಿದ್ದ ವೇಳೆ ನೆರವು ಕೇಳಲು ಹೋದ ತನ್ನನ್ನು ಹೋಟೆಲ್‌ಗೆ ಕರೆದೊಯ್ದು  ಅತ್ಯಾಚಾರವೆಸಗಿದ್ದಾರೆ ಎಂದು ರೂಪದರ್ಶಿ ಆರೋಪಿಸಿದ್ದಾರೆ. ತನ್ನ ಆರೋಪವನ್ನು ಸಮರ್ಥಿಸುವ  ಪುರಾವೆಗಳನ್ನು ಆಕೆ ಒದಗಿಸಿದ್ದಾಳೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.