ADVERTISEMENT

ಅಧಿಕ ಉಪ್ಪಿನಾಂಶದಲ್ಲಿ ಬೆಳೆಯುವ ಹೊಸ ಬ್ಯಾಕ್ಟೀರಿಯಾ ಪತ್ತೆ

ಸುಂದರ್‌ಬನ್ಸ್‌ ಅರಣ್ಯ ವಲಯ

ಏಜೆನ್ಸೀಸ್
Published 19 ಜೂನ್ 2017, 14:05 IST
Last Updated 19 ಜೂನ್ 2017, 14:05 IST
ಅಧಿಕ ಉಪ್ಪಿನಾಂಶದಲ್ಲಿ ಬೆಳೆಯುವ ಹೊಸ ಬ್ಯಾಕ್ಟೀರಿಯಾ ಪತ್ತೆ
ಅಧಿಕ ಉಪ್ಪಿನಾಂಶದಲ್ಲಿ ಬೆಳೆಯುವ ಹೊಸ ಬ್ಯಾಕ್ಟೀರಿಯಾ ಪತ್ತೆ   

ನವದೆಹಲಿ: ಅತಿ ಹೆಚ್ಚು ಉಪ್ಪಿನಾಂಶದ ಪ್ರದೇಶದಲ್ಲಿಯೂ ಬೆಳೆಯುವ ಬ್ಯಾಕ್ಟೀರಿಯಾದ ಹೊಸ ಪ್ರಭೇದ ಪತ್ತೆಯಾಗಿದೆ.

‘ಸ್ಟ್ರೇಪ್ಟೋಮೈಸಸ್‌’ ಕುಟುಂಬಕ್ಕೆ ಸೇರಿದ ಹೊಸ ಬ್ಯಾಕ್ಟೀರಿಯಾ(Streptomyces euryhalinus Strain MS3/20Tsp) ಪ್ರಭೇದವನ್ನು ಕೋಲ್ಕತದ ಜಾದವ್‌ಪುರ ವಿಶ್ವವಿದ್ಯಾಲಯದ ಸಂಶೋಧಕರು ಪತ್ತೆ ಮಾಡಿದ್ದಾರೆ.

ಸುಂದರ್‌ಬನ್ಸ್‌ ಅರಣ್ಯ ಪ್ರದೇಶದ ಲೊಥಿಯಾನ್‌ ದ್ವೀಪದಲ್ಲಿ ನಡೆಸಿರುವ ಸಂಶೋಧನೆಯಲ್ಲಿ ಬ್ಯಾಕ್ಟೀರಿಯಾದ ಹೊಸ ಪ್ರಭೇದ ಗುರುತಿಸಲಾಗಿದೆ.

ADVERTISEMENT

ಉಪ್ಪಿಂನಾಂಶ ಅಧಿಕ ಪ್ರದೇಶದಲ್ಲಿ ಕಾಣಸಿಗುವ ಮ್ಯಾಂಗ್ರೋ ಮರಗಳಿರುವ ವಲಯದಲ್ಲಿ ಈ ಬ್ಯಾಕ್ಟೀರಿಯಾ ಬೆಳೆದಿರುವುದು ಸಂಶೋಧನೆಯಿಂದ ತಿಳಿದಿದೆ.

ಶೇ 20ರಷ್ಟು ಉಪ್ಪಿನಿಂದ ಕೂಡಿದ ನೀರಿನಲ್ಲಿಯೂ ಈ ಬ್ಯಾಕ್ಟೀರಿಯಾ ಬೆಳವಣಿಗೆ ಕಾಣುತ್ತದೆ. ಪ್ರಯೋಗಾಲಯದಲ್ಲಿ 28 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದ ವಾತಾವರಣದಲ್ಲಿ ಸುಲಭವಾಗಿ ಬೆಳೆಸಬಹುದಾಗಿದ್ದು, ಬಳಷ್ಟು ಜೀವ ವಿರೋಧಕಗಳಿಂದ ಇದನ್ನು ನಿಷ್ಪ್ರಯೋಜಕಗೊಳಿಸಬಹುದು.

ಹೊಸ ಬ್ಯಾಕ್ಟೀರಿಯಾ ಪ್ರಭೇದದಿಂದ ಕಾಗದ, ಜವಳಿ, ಚರ್ಮ ಸಂಸ್ಕರಣಾ ಕಾರ್ಖಾನೆಗಳಲ್ಲಿ ಹಲವು ರೀತಿ ಪ್ರಯೋಜನದ ಸಾಧ್ಯತೆ ಇರುವ ಕುರಿತು ವಿಜ್ಞಾನಿಗಳು ತಿಳಿಸಿರುವುದಾಗಿ ಎಪಿಎನ್‌ ವರದಿ ಮಾಡಿದೆ.

(ಮೂಲ ವರದಿ ಇಂಡಿಯಾ ಸೈನ್ಸ್‌ ವೈರ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.