ADVERTISEMENT

ಅಪಘಾತ ಸುದ್ದಿ ಕೇಳಿ ಮೃತಪಟ್ಟ ತಂದೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2014, 19:30 IST
Last Updated 24 ಜುಲೈ 2014, 19:30 IST

ಮೆದಕ್‌/ಹೈದರಾಬಾದ್‌: ನಜ್ಜು­ಗುಜ್ಜಾದ ಶಾಲಾ ವಾಹನ, ಅವಶೇಷಗಳ ಮೇಲೆಲ್ಲ ರಕ್ತದ ಕಲೆಗಳು, ಚೆಲ್ಲಾಪಿಲ್ಲಿಯಾಗಿ ಬಿದ್ದ ಚೀಲಗಳು, ತಿಂಡಿ ಡಬ್ಬಗಳು, ಪುಸ್ತಕಗಳು, ಇನ್ನೊಂದೆಡೆ, ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆರ್ತನಾದ...

ಅಪಘಾತದ ಸ್ಥಳದಲ್ಲಿನ ಈ ದೃಶ್ಯಗಳು ಕರುಳು ಹಿಂಡುವಂತಿದ್ದವು. ಸುದ್ದಿ ತಿಳಿದಿದ್ದೇ ತಡ ಕಿಷ್ಟಾಪುರ ಗ್ರಾಮದ ವಲಿಯುದ್ದಿನ್‌ ಸುಮಾರು ಮೂರು ಕಿ.ಮೀ ಓಡಿಕೊಂಡೇ ಸ್ಥಳಕ್ಕೆ ಹೋದರು.    ತಮ್ಮ ಮಕ್ಕಳಾದ  ಗೌಸಿಯಾ (4) ಹಾಗೂ ಅಬ್ದುಲ್‌ ರಶೀದ್‌ (6) ಶವಗಳನ್ನು ನೋಡಿ ಅವರು ಹೃದಯಾಘಾತದಿಂದ ಕುಸಿದು ಬಿದ್ದರು. ಕೂಡಲೇ ಅವರನ್ನು ಹೈದರಾಬಾದ್‌ ಆಸ್ಪತ್ರೆಗೆ ಸೇರಿಸ 
ಲಾ­ಯಿತು. ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದರು.

ಗುಂಡರೆಡ್ಡಿಪಲ್ಲಿ, ಯಾದಗಿರಿ, ಇಸ್ಲಾಂಪುರ, ಘಾನ್‌ಪುರ, ವೆಂಕಟಯ್ಯಪಲ್ಲಿ, ಗುಂಡೆಂಟಿ ಪಲ್ಲಿ, ಚೆಟ್ಲತಿಮ್ಮಯ್ಯಪಲ್ಲಿ ಗ್ರಾಮಗಳಲ್ಲಿ ಸ್ಮಶಾನ ಮೌನ ಆವರಿಸಿದೆ.

₨ 2 ಲಕ್ಷ ಪರಿಹಾರ:  ಮೃತರ ಕುಟುಂಬಕ್ಕೆ  ರೈಲ್ವೆ ಸಚಿವಾಲಯ ತಲಾ₨ 2 ಲಕ್ಷ ಹಾಗೂ ತೆಲಂಗಾಣ ಸರ್ಕಾರ ತಲಾ ₨ 5 ಲಕ್ಷ ಪರಿ­ಹಾರ ಘೋಷಿಸಿವೆ. ಸಂಸತ್‌ನ ಉಭಯ ಸದನಗಳಲ್ಲಿಯೂ ಈ ಕುರಿತು ಹೇಳಿಕೆ ನೀಡಿದ ರೈಲ್ವೆ ಸಚಿವ ಸದಾನಂದ ಗೌಡ, ‘ಗಂಭೀರವಾಗಿ ಗಾಯಗೊಂಡವರಿಗೆ ತಲಾ ₨ 1 ಲಕ್ಷ ಹಾಗೂ ಸಣ್ಣಪುಟ್ಟ­ ಗಾಯ­ಗೊಂಡವರಿಗೆ ತಲಾ ₨ 20,000 ಪರಿಹಾರ
ನೀಡ­ಲಾಗುತ್ತದೆ’ ಎಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.