ADVERTISEMENT

ಅಮಿತ್‌ ಷಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ?

ಇಂದು ಅಧಿಕೃತ ಘೋಷಣೆ ಸಂಭವ

​ಪ್ರಜಾವಾಣಿ ವಾರ್ತೆ
Published 8 ಜುಲೈ 2014, 19:30 IST
Last Updated 8 ಜುಲೈ 2014, 19:30 IST

ನವದೆಹಲಿ (ಪಿಟಿಐ):  ಪ್ರಧಾನಿ ನರೇಂದ್ರ ಮೋದಿ ಆಪ್ತ ಅಮಿತ್‌ ಷಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಬುಧವಾರ ನಡೆಯಲಿರುವ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಷಾ ಅವರ ನೇಮಕಕ್ಕೆ ಅಧಿಕೃತ ಮುದ್ರೆ ಬೀಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಂಸದೀಯ ಮಂಡಳಿ ಸಭೆ ನಂತರ ಹಾಲಿ ಅಧ್ಯಕ್ಷ ರಾಜನಾಥ ಸಿಂಗ್‌ ಅವರು ಷಾ ಅವರ ನೇಮಕವನ್ನು ಪ್ರಕಟಿಸಲಿದ್ದಾರೆ ಎಂದು ಗೊತ್ತಾಗಿದೆ. 

‘ಒಬ್ಬರಿಗೆ ಒಂದು ಹುದ್ದೆ’ ಸೂತ್ರದ ಪ್ರಕಾರ ಸಂಪುಟ ಸೇರಿರುವ ಗೃಹ ಸಚಿವ ರಾಜನಾಥ ಸಿಂಗ್‌ ಅಧ್ಯಕ್ಷ ಸ್ಥಾನ ತೊರೆಯಲಿದ್ದಾರೆ. ಆರ್‌ಎಸ್‌ಎಸ್‌ ಒಪ್ಪಿಗೆ ಪಡೆದು ಮೋದಿ ಆಪ್ತ ಷಾ ಅವರನ್ನು  ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಗುತ್ತದೆ ಎನ್ನಲಾಗಿದೆ.
ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ 71 ಸ್ಥಾನಗಳಲ್ಲಿ
ಬಿಜೆಪಿ ಗೆಲುವು ಸಾಧಿಸುವಲ್ಲಿ  ಅಮಿತ್‌ ಷಾ ಅವರು ಪ್ರಮುಖ ಪಾತ್ರ ವಹಿಸಿದ್ದರು.

‘ಆರ್‌ಎಸ್‌ಎಸ್‌ಗೆ ಬಿಜೆಪಿ ಹೊಸದಲ್ಲ’
ಧಾರ್ (ಮಧ್ಯಪ್ರದೇಶ)  (ಪಿಟಿಐ): 
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ನಿಂದ ತರಬೇತಿ ಪಡೆದ­ವ­ರನ್ನು ಬಿಜೆಪಿಗೆ ಕಳುಹಿಸಲಾ­ಗು­ತ್ತದೆ. ಅದು ಆರ್‌ಎಸ್‌ಎಸ್‌ ಸಂಪ್ರದಾಯ.ಅದರಂತೆ ತಮ್ಮನ್ನು ಬಿಜೆಪಿಗೆ ಕಳುಹಿಸಿದ್ದಾರೆ ಎಂದು ಸಂಘದ ವಕ್ತಾರ ರಾಮ್‌ ಮಾಧವ ತಿಳಿಸಿದರು.

‘ನಮ್ಮಲ್ಲಿ ತರಬೇತಿ ತೆಗೆದುಕೊಂಡವರು  ಬಿಜೆಪಿಗೆ ಕಳುಹಿಸಿದ್ದಾರೆ. ನಾನು ಸಹ ಅದೇ ರೀತಿ ಬಿಜೆಪಿಗೆ ಬಂದಿ­ರುವೆ. ಅದರಲ್ಲಿ ಹೊಸ­ದೇನೂ ಇಲ್ಲ. ಬಿಜೆಪಿ­ಯಲ್ಲಿನ ಆಡಳಿತದ ಬಗ್ಗೆ ಒಳಹೊರಗು ತಿಳಿ­ಯುವ ಪ್ರಯತ್ನ­ವನ್ನು ಆರ್‌ಎಸ್‌ಎಸ್‌ ಮಾಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT