ADVERTISEMENT

ಅರ್ಧ ತೂಕ ಕಳೆದುಕೊಂಡ ‘ಭಾರಿ ತೂಕದ ಮಹಿಳೆ’

ಏಜೆನ್ಸೀಸ್
Published 22 ಏಪ್ರಿಲ್ 2017, 5:45 IST
Last Updated 22 ಏಪ್ರಿಲ್ 2017, 5:45 IST
ಎಮಾನ್‌ ಅಬ್ದೆಲಾತೀಫ್‌
ಎಮಾನ್‌ ಅಬ್ದೆಲಾತೀಫ್‌   

ಮುಂಬೈ: ಬೊಜ್ಜು ಕರಗಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವಿಶ್ವದ ಭಾರಿ ತೂಕದ ಮಹಿಳೆ ಈಜಿಪ್ಟ್‌ನ ಎಮಾನ್‌ ಅಹ್ಮದ್‌ ಅಬ್ದ್‌ -ಎಲ್‌- ಅತಿ (36) ಅವರು ತಮ್ಮ ದೇಹದ ಅರ್ಧದಷ್ಟು ತೂಕ ಕಳೆದುಕೊಂಡಿದ್ದಾರೆ.

‘ಎಮಾನ್‌ ಅವರಿಗೆ ಮಾಡಿದ್ದ ಶಸ್ತ್ರಚಿಕಿತ್ಸೆ ಹೆಚ್ಚು ಸವಾಲಿನದ್ದಾಗಿತ್ತು. ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗುವ ಸಾಧ್ಯತೆ ಶೇಕಡ 1ರಷ್ಟು ಮಾತ್ರ ಇತ್ತು. ಎಮಾನ್‌ ಅವರು ಪವಾಡದ ರೀತಿಯಲ್ಲಿ ಚೇತರಿಸಿಕೊಂಡಿದ್ದಾರೆ’ ಎಂದು ಮುಂಬೈನ ಸೈಫಿ ಆಸ್ಪತ್ರೆಯ ವೈದ್ಯ ಡಾ. ಮುಫಾಝಲ್‌ ಲಕ್ಡವಾಲಾ ತಿಳಿಸಿದ್ದಾರೆ.

ಸುಮಾರು 500 ಕೆ.ಜಿ. ತೂಕವಿದ್ದ ಎಮಾನ್‌ ಫೆಬ್ರುವರಿ ತಿಂಗಳಲ್ಲಿ ಶಸ್ತ್ರಚಿಕಿತ್ಸೆಗೆಂದು ಮುಂಬೈಗೆ ಬಂದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.