ADVERTISEMENT

ಅಸ್ಸಾಂ: ಉಗ್ರರು–ಸೇನೆ ನಡುವೆ ಗುಂಡಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2014, 19:30 IST
Last Updated 26 ಡಿಸೆಂಬರ್ 2014, 19:30 IST

ಕಜಾಲ್ಗಾಂವ್/ಅಸ್ಸಾಂ (ಪಿಟಿಐ): ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ) ಸಿಬ್ಬಂದಿ ಮತ್ತು ಸಾಂಗ್‌ಬಿಜಿತ್‌ ಗುಂಪಿಗೆ ಸೇರಿದ ಬೋಡೊ ಉಗ್ರರ ನಡುವೆ ಚಿರಾಂಗ್‌ ಜಿಲ್ಲೆಯಲ್ಲಿ ಗುಂಡಿನ ಚಕ­ಮಕಿ ನಡೆದಿದೆ. ದಾಳಿಯಲ್ಲಿ ಯಾವುದೇ ಸಾವು–ನೋವು ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್‌ಎಸ್‌ಬಿ ಸಿಬ್ಬಂದಿ ಫೊಯಿಸನಾ ಬಜಾರ್‌ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವ ವೇಳೆ ಉಗ್ರರು ಗ್ರೆನೇಡ್‌ ಎಸೆದು, ಗುಂಡು ಹಾರಿಸಿದರು. ಇದಕ್ಕೆ ಪ್ರತಿಯಾಗಿ ದಾಳಿ ಮಾಡಿದಾಗ ದಟ್ಟ ಕಾಡಿನೊಳಗೆ ನುಗ್ಗಿ ತಪ್ಪಿಸಿಕೊಂಡರು ಎಂದು ಅವರು ಹೇಳಿದ್ದಾರೆ.
ಘಟನೆ ನಡೆದ ಕೂಡಲೇ ಸಮೀಪದ ಬನ್ಬಾರಿ ಶಿಬಿರದಲ್ಲಿದ್ದ ಸಿಆರ್‌ಪಿಎಫ್‌ ಸಿಬ್ಬಂದಿ, ಎಸ್‌ಎಸ್‌ಬಿಯೊಂದಿಗೆ ಉಗ್ರರ ಪತ್ತೆಗೆ ಜಂಟಿ ಕಾರ್ಯಾಚರಣೆ ಪ್ರಾರಂಭಿಸಿದರು.

ಮರಾಂಡಿ ಭೇಟಿ: ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಬಾಬುಲಾಲ್‌ ಮರಾಂಡಿ ಕೋಕರಾಝಾರ್‌ ಜಿಲ್ಲೆಗೆ ಭೇಟಿ ನೀಡಿ ಜನರೊಂದಿಗೆ ಮಾತುಕತೆ ನಡೆಸಿದರು. ಅಸ್ಸಾಂ ಸರ್ಕಾರದ ವೈಫಲ್ಯವೇ ಹಿಂಸಾಚಾರಕ್ಕೆ ಕಾರಣ ಎಂದು ಮರಾಂಡಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.