ADVERTISEMENT

ಆಡಳಿತ ಪಕ್ಷದಿಂದ ಹಲ್ಲೆ; ಸ್ಪೀಕರ್‌ ವಿರುದ್ಧ ರಾಜ್ಯಪಾಲರಿಗೆ ದೂರು: ಸ್ಟಾಲಿನ್‌

ಏಜೆನ್ಸೀಸ್
Published 18 ಫೆಬ್ರುವರಿ 2017, 12:00 IST
Last Updated 18 ಫೆಬ್ರುವರಿ 2017, 12:00 IST
ಆಡಳಿತ ಪಕ್ಷದಿಂದ ಹಲ್ಲೆ; ಸ್ಪೀಕರ್‌ ವಿರುದ್ಧ ರಾಜ್ಯಪಾಲರಿಗೆ ದೂರು: ಸ್ಟಾಲಿನ್‌
ಆಡಳಿತ ಪಕ್ಷದಿಂದ ಹಲ್ಲೆ; ಸ್ಪೀಕರ್‌ ವಿರುದ್ಧ ರಾಜ್ಯಪಾಲರಿಗೆ ದೂರು: ಸ್ಟಾಲಿನ್‌   

ಚೆನ್ನೈ: ಸದನದಲ್ಲಿ ಪ್ರತಿಭಟನೆ ನಡೆಸಿದ ನಮ್ಮ ಮೇಲೆ ಆಡಳಿತ ಪಕ್ಷ ಹಲ್ಲೆ ನಡೆಸಿದೆ ಎಂದು ಡಿಎಂಕೆ ಮುಖಂಡ ಎಂ.ಕೆ. ಸ್ಟಾಲಿನ್‌ ಹೇಳಿದರು.

ಗದ್ದಲ ಎಬ್ಬಿಸಿದ್ದರಿಂದ ಮಾರ್ಷಲ್‌ಗಳು ಸ್ಟಾಲಿನ್‌ ಅವರನ್ನು ಸದನದಿಂದ ಹೊರ ಹಾಕಿದರು. ಸದನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟಾಲಿನ್‌ ಅವರು, ಮೈಮೇಲಿನ ಕಿತ್ತು ಹೋಗಿರುವ ಅಂಗಿಯನ್ನು ತೋರಿಸುತ್ತಾ ಮಾರ್ಷಲ್‌ಗಳು ಹಲ್ಲೆ ನಡೆಸಿ ಬಟ್ಟೆ ಕಿತ್ತಿದ್ದಾರೆ. ಇದು ಆಡಳಿತ ಪಕ್ಷ ನಡೆಸಿದ ಹಲ್ಲೆ. ನಮ್ಮನ್ನು ಸದನದಿಂದ ಹೊರಗಿಟ್ಟು ವಿಶ್ವಾಸಮತ ಯಾಚನೆಗೆ ಅವಕಾಶ ನೀಡಿರುವ ಸ್ಪೀಕರ್‌ ಅವರ ವಿರುದ್ಧ ರಾಜ್ಯಪಾಲ ವಿದ್ಯಾಸಾಗರ್‌ ರಾವ್‌ ಅರಿಗೆ ದೂರು ಕೊಡಲಾಗುವುದು ಎಂದು ಹೇಳಿದರು.

ಇದರ ಬೆನ್ನಲ್ಲೇ ಡಿಎಂಕೆ ಕಾರ್ಯರ್ತರು, ಪಕ್ಷದ ಸದಸ್ಯರನ್ನು ಒತ್ತಾಯ ಪೂರ್ವಕವಾಗಿ ಸದನದಿಂದ ಹೊರ ತಳ್ಳಿದ್ದಾರೆ ಎಂದು ರಾಜಭನದ ಎದರು ಪ್ರತಿಭಟನೆ ನೆಡೆಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.