ADVERTISEMENT

ಇಂಡೋ–ಪಾಕ್‌ ಗಡಿ: ನಾಲ್ವರು ಕಳ್ಳಸಾಗಣೆದಾರರ ಹತ್ಯೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2016, 10:14 IST
Last Updated 7 ಫೆಬ್ರುವರಿ 2016, 10:14 IST
ಇಂಡೋ–ಪಾಕ್‌ ಗಡಿ: ನಾಲ್ವರು ಕಳ್ಳಸಾಗಣೆದಾರರ ಹತ್ಯೆ
ಇಂಡೋ–ಪಾಕ್‌ ಗಡಿ: ನಾಲ್ವರು ಕಳ್ಳಸಾಗಣೆದಾರರ ಹತ್ಯೆ   

ಫಿರೋಜ್‌ ಪುರ್‌ (ಪಿಟಿಐ): ಇಲ್ಲಿನ ಇಂಡೋ–ಪಾಕ್‌ ಗಡಿಯಲ್ಲಿ ಅಕ್ರಮವಾಗಿ ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿದ್ದ ನಾಲ್ವರನ್ನು ಬಿಎಸ್‌ಎಫ್‌ ಯೋಧರು  ಭಾನುವಾರ ಬೆಳಗ್ಗೆ ಹತ್ಯೆ ಮಾಡಿದ್ದಾರೆ.

ಹತ್ತು ಕೆಜಿ ತೂಕದ ಹೆರಾಯಿನ್‌ ಹೊಂದಿದ್ದ ಕಳ್ಳಸಾಗಣೆದಾರರು ಭಾರತದ ಗಡಿಯೊಳಗೆ  ನುಸುಳಲು ಯತ್ನಿಸುತ್ತಿರುವಾಗ ಭಾರತೀಯ ಗಡಿ ಭದ್ರತಾ ಪಡೆ ಯೋಧರು ಗುಂಡು ಹಾರಿಸಿ   ಕಳ್ಳಸಾಗಣೆದಾರರನ್ನು ಹತ್ಯೆ ಮಾಡಿದ್ದಾರೆ ಎಂದು ಬಿಎಸ್‌ಎಫ್‌ ಕಚೇರಿ ಮೂಲಗಳು ಖಚಿತಪಡಿಸಿವೆ.

ನಾಲ್ವರು ಕಳ್ಳಸಾಗಣೆದಾರರಲ್ಲಿ ಇಬ್ಬರು ಪಾಕಿಸ್ತಾನದವರು ಮತ್ತು ಇಬ್ಬರು ಭಾರತೀಯರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.