ADVERTISEMENT

ಇ– ಪಡಿತರ ಕಾರ್ಡ್

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

ನವದೆಹಲಿ (ಪಿಟಿಐ): ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಇ–ಪಡಿತರ ಸೌಲಭ್ಯಕ್ಕೆ ಶುಕ್ರವಾರ ಇಲ್ಲಿ ಚಾಲನೆ ನೀಡಿದರು.

ಇ–ಪಡಿತರ ಸೌಲಭ್ಯದಲ್ಲಿ ಪಡಿತರ ಕಾರ್ಡ್‌ಗಳಿಗೆ ಅಂತರ್ಜಾಲದಲ್ಲೇ ಅರ್ಜಿ ಸಲ್ಲಿಸಬಹುದು. ಪಡಿತರ ಧಾನ್ಯಗಳ ಲಭ್ಯತೆ ಮತ್ತು ಅವುಗಳ ದರವನ್ನೂ ಪರಿಶೀಲನೆ ಮಾಡಬಹುದು. ದೇಶದಲ್ಲೇ ಮೊದಲ ಬಾರಿಗೆ ಇ–ಪಡಿತರವನ್ನು   ಆರಂಭಿಸಿದ ಖ್ಯಾತಿ ದೆಹಲಿ ಪಡೆದಿದೆ.

‘ಬಹುತೇಕ  ಪಡಿತರ ಕಾರ್ಡ್‌ಗಳು ಅಗತ್ಯ ಇರುವವರಿಗೆ ಸಿಗುವುದಿಲ್ಲ. ಅವುಗಳನ್ನು ಪಡಿತರ ಕಾರ್ಡ್‌ ವಿತರಣೆ ಮಾಡುವವರು ಇಟ್ಟುಕೊಂಡಿರುತ್ತಾರೆ. ಅಲ್ಲದೆ ದುರ್ಬಳಕೆ ಮಾಡುತ್ತಾರೆ’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.
ಇ–ಪಡಿತರ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೆ ಅದಕ್ಕೆ ಸಂಬಂಧಿಸಿದ ಮಾಹಿತಿ ಯನ್ನು ಅರ್ಜಿದಾರರ ಮೊಬೈಲ್‌ಗೆ ರವಾನಿಸಲಾಗುತ್ತದೆ. ಅವರು   ಕಾರ್ಡ್ ಮುದ್ರಿಸಿಕೊಳ್ಳಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.