ADVERTISEMENT

ಉತ್ತರ ಪ್ರದೇಶದ ಎಟಿಎಂನಲ್ಲಿ ಗ್ರಾಹಕರಿಗೆ ಸಿಕ್ಕಿದ್ದು ₹500 ನಕಲಿ ನೋಟು!

ಏಜೆನ್ಸೀಸ್
Published 24 ಏಪ್ರಿಲ್ 2018, 9:12 IST
Last Updated 24 ಏಪ್ರಿಲ್ 2018, 9:12 IST
ನಕಲಿ ನೋಟು  (ಕೃಪೆ: ಎಎನ್ಐ)
ನಕಲಿ ನೋಟು (ಕೃಪೆ: ಎಎನ್ಐ)   

ನವದೆಹಲಿ: ಬರೇಲಿಯ ನಿವಾಸಿಯೊಬ್ಬರು ಎಟಿಎಂನಿಂದ ದುಡ್ಡು ವಿತ್ ಡ್ರಾ ಮಾಡಿದಾಗ ಸಿಕ್ಕಿದ್ದು ₹500 ನಕಲಿ ನೋಟು! ಭಾನುವಾರ ಸಂಜೆ ಸುಭಾಷ್ ನಗರದಲ್ಲಿರುವ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಿಂದ ₹4500 ವಿತ್ ಡ್ರಾ ಮಾಡಿದಾಗ ಅದರಲ್ಲಿ ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಎಂದು ಮುದ್ರಿತವಾಗಿರುವ ₹500 ನಕಲಿ ನೋಟು ಸಿಕ್ಕಿದೆ ಎಂದು ಅಶೋಕ್ ಪಾಠಕ್ ಹೇಳಿದ್ದಾರೆ.

ಈ ನಕಲಿ ನೋಟುಗಳಲ್ಲಿ ‘ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ’ ಎಂಬ ಜಾಗದಲ್ಲಿ ‘ಚಿಲ್ಡ್ರನ್‌ ಬ್ಯಾಂಕ್‌ ಆಫ್‌ ಇಂಡಿಯಾ’ ಎಂದು ಮುದ್ರಣವಾಗಿದೆ. ಆರ್‌ಬಿಐನ ಲೋಗೊ ಇರುವಲ್ಲಿ ‘ಪಿ.ಕೆ’ ಎಂದು ಮುದ್ರಣವಾಗಿದೆ. ‘ಗ್ಯಾರಂಟೀಡ್‌ ಬೈ ದಿ ಸೆಂಟ್ರಲ್‌ ಗೌವರ್ನ್ಮೆಂಟ್‌’ (ಭಾರತ ಸರ್ಕಾರದಿಂದ ಪ್ರಮಾಣಿತ) ಎಂಬಲ್ಲಿ ‘ಗ್ಯಾರಂಟೀಡ್‌ ಬೈ ದಿ ಚಿಲ್ಡ್ರನ್‌’ಸ್‌ ಗೌವರ್ನ್ಮೆಂಟ್‌’ ಎಂದು ಮುದ್ರಣವಾಗಿದೆ.

ನಕಲಿ ನೋಟು ಎಂದು ಗೊತ್ತಾದ ಕೂಡಲೇ ನಾನು ಆ ನೋಟನ್ನು ಎಟಿಎಂ ಸಿಸಿಟಿವಿ ಮುಂದೆ ತೋರಿಸಿ ಜನರಿಗೆ ಮಾಹಿತಿ ನೀಡಿದೆ. ಪ್ರದೀಪ್ ಉತ್ತಮ್ ಎಂಬ ವ್ಯಕ್ತಿಯೊಬ್ಬರು ₹2,000 ವಿತ್ ಡ್ರಾ ಮಾಡಿದಾಗ ಅವರಿಗೆ ₹500 ಎರಡು ನಕಲಿ ನೋಟು ಸಿಕ್ಕಿದೆ ಎಂದು ಎಎನ್‍ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಪಾಠಕ್ ಹೇಳಿದ್ದಾರೆ.

ADVERTISEMENT

ಇದೇ ಎಟಿಎಂನಲ್ಲಿ ಇಂದ್ರ ಕುಮಾರ್ ಶುಕ್ಲಾ ಎಂಬವರಿಗೂ ₹500 ರ ನಕಲಿ ನೋಟುಸಿಕ್ಕಿದೆ. ಎಟಿಎಂನಲ್ಲಿ ನಕಲಿ ನೋಟು ಸಿಕ್ಕಿರುವ ವಿಡಿಯೊವನ್ನು ಇವರು ಟ್ವಿಟರ್‍‍ನಲ್ಲಿ ಶೇರ್ ಮಾಡಿದ್ದು, ಈ ವಿಡಿಯೊ ವೈರಲ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.