ADVERTISEMENT

ಎಎಪಿ ಪ್ರಚಾರಕ್ಕೆ 526 ಕೋಟಿ ರೂಪಾಯಿ ಖರ್ಚು

​ಪ್ರಜಾವಾಣಿ ವಾರ್ತೆ
Published 3 ಜುಲೈ 2015, 6:29 IST
Last Updated 3 ಜುಲೈ 2015, 6:29 IST
ಎಎಪಿ ಪ್ರಚಾರಕ್ಕೆ 526 ಕೋಟಿ ರೂಪಾಯಿ ಖರ್ಚು
ಎಎಪಿ ಪ್ರಚಾರಕ್ಕೆ 526 ಕೋಟಿ ರೂಪಾಯಿ ಖರ್ಚು   

ನವದೆಹಲಿ (ಪಿಟಿಐ): ದೆಹಲಿ ಸರ್ಕಾರ 526 ಕೋಟಿ ರೂಪಾಯಿ  ಹಣವನ್ನು ಎಎಪಿ ಪಕ್ಷದ ಪ್ರಚಾರ ಮತ್ತು ಜಾಹೀರಾತಿಗೆ ವ್ಯಯ ಮಾಡುವ ಮೂಲಕ ಸಾರ್ವಜನಿಕರ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಬಿಜೆಪಿ ಶುಕ್ರವಾರ ಆರೋಪಿಸಿದೆ.

ದೆಹಲಿ ಬಿಜೆಪಿ ಘಟಕ ಲೆ.ಗವರ್ನರ್‌ ನಜೀಬ್‌ ಜಂಗ್‌ ಅವರನ್ನು ಭೇಟಿ ಮಾಡಿ ದೆಹಲಿ ಸರ್ಕಾರದ  ವಿರುದ್ಧ ದೂರು ನೀಡಿದೆ. 

ದೆಹಲಿ ಸರ್ಕಾರ ಕಳೆದ ವರ್ಷ ಎಸ್ಸಿ/ಎಸ್‌ಟಿ ಅಭಿವೃದ್ಧಿಗೆ 338 ಕೋಟಿ, ಕಾರ್ಮಿಕರ ಉದ್ಯೋಗಕ್ಕೆ 208 ಕೋಟಿ, ಪೌಷ್ಠಿಕ ಆಹಾರಕ್ಕೆ 350 ಕೋಟಿ, ಕೊಳೆಗೇರಿ ಅಭಿವೃದ್ಧಿಗೆ 400 ಕೋಟಿ ರೂಪಾಯಿ ಖರ್ಚು ಮಾಡಿದ್ದರೆ  ಪಕ್ಷದ ಪ್ರಚಾರ ಮತ್ತು ಜಾಹೀರಾತಿಗೆ 526 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ  ಸತೀಶ್‌ ಉಪಾಧ್ಯಾಯ ಆರೋಪಿಸಿದ್ದಾರೆ.

ADVERTISEMENT

ಮುಖ್ಯಮಂತ್ರಿ ಕೇಜ್ರಿವಾಲ್‌ ಜನರ ಅಭಿವೃದ್ಧಿ ಮಾಡುವ ಬದಲು ಪಕ್ಷವನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಕೇಜ್ರಿವಾಲ್‌ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಸತೀಶ್‌ ಉಪಾಧ್ಯಾಯ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.