ADVERTISEMENT

ಎನ್‌ಎಸ್‌ಸಿಎನ್‌ ಜತೆ ಶಾಂತಿ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2015, 13:45 IST
Last Updated 3 ಆಗಸ್ಟ್ 2015, 13:45 IST

ನವದೆಹಲಿ (ಪಿಟಿಐ): ನಾಗಾಲ್ಯಾಂಡ್‌ನ ತೀವ್ರವಾದಿ ಸಂಘಟನೆ ನ್ಯಾಷನಲಿಸ್ಟ್‌ ಸೋಷಿಯಲಿಸ್ಟ್‌ ಕೌನ್ಸಿಲ್‌ ಆಫ್‌ ನಾಗಾಲ್ಯಾಂಡ್‌ (ಎನ್‌ಎಸ್‌ಸಿಎನ್‌– ಐಎಂ) ಜತೆಗಿನ ಶಾಂತಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಂ.7, ರೇಸ್‌ ಕೋರ್ಸ್‌ ರಸ್ತೆಯ ನಿವಾಸದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮೋದಿ, ಗೃಹ ಸಚಿವ ರಾಜನಾಥ್‌ ಸಿಂಗ್‌, ಕೇಂದ್ರದ ಹಿರಿಯ ಅಧಿಕಾರಿಗಳು ಮತ್ತು ಎನ್‌ಎಸ್‌ಸಿಎನ್‌– ಐಎಂ ಮುಖ್ಯಸ್ಥ ತುಯಿಂಗ್ಲೆಂಗ್‌ ಮುಯಿವಾ ಹಾಗೂ ಸಂಘಟನೆಯ ಇತರೆ ನಾಯಕರ ಸಮ್ಮುಖದಲ್ಲಿ ಈ ವಿಷಯವನ್ನು ಘೋಷಿಸಲಾಯಿತು.

ಈ ವಿಷಯವನ್ನು ಗೌಪ್ಯವಾಗಿಟ್ಟಿದ್ದ ಪ್ರಧಾನಿ ಮೋದಿ, ‘ಸಂಜೆ 6.30ಕ್ಕೆ ರೇಸ್‌ ಕೋರ್ಸ್‌ ರಸ್ತೆಯ ನಿವಾಸದಲ್ಲಿ ವಿಶೇಷವಾದ ಘೋಷಣೆಯೊಂದನ್ನು ಮಾಡಲಿದ್ದೇನೆ’ ಎಂದು ಟ್ವೀಟ್‌ ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.