ADVERTISEMENT

ಎನ್‌ಕೌಂಟರ್‌ಗೆ ಲಷ್ಕರ್ ಇ ತೈಯಬಾ ಕಮಾಂಡರ್‌ ಬಲಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2014, 19:30 IST
Last Updated 9 ಸೆಪ್ಟೆಂಬರ್ 2014, 19:30 IST

ಜಮ್ಮು (ಪಿಟಿಐ):  ಸೇನಾಪಡೆ ಗುಂಡಿಗೆ ಕಾಶ್ಮೀರ ಕಣಿವೆಯ ಲಷ್ಕರ್‌–ಇ– ತೈಯಬಾ ಕಮಾಂಡರ್ ಉಮರ್ ಭಟ್ಟಿ ಬಲಿಯಾಗಿ­ರುವ ಘಟನೆ ಜಮ್ಮು ಮತ್ತು ಕಾಶ್ಮೀ­ರದ ಕುಪ್ವಾರ ಜಿಲ್ಲೆ­ಯಲ್ಲಿ ಮಂಗಳವಾರ ನಡೆದಿದೆ.

ಕಾಶ್ಮೀರ ಕಣಿವೆಯಲ್ಲಿ 20 ತಿಂಗಳಿನಿಂದ ಎಲ್‌ಇಟಿ ಕಾರ್ಯಾ­ಚ­ರಣೆ ನಡೆಸುತ್ತಿದ್ದ ಉಮರ್, ಹಂದ್ವಾರ ಪ್ರದೇಶದ ಲರಿಬಾಗ್‌ನಲ್ಲಿ ಉಮರ್‌ ಇರುವುದನ್ನು ಖಚಿತಪಡಿಸಿ ಕೊಂಡ ಸೇನಾಪಡೆಯ ‘ರಾಷ್ಟ್ರೀಯ ರೈಫಲ್ಸ್‌ ಘಟಕ’ (ಆರ್ಆರ್), ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿತು.

ಈ ವೇಳೆ, ಉಮರ್  ಮತ್ತು ಆರ್‌ ಆರ್‌ ತಂಡದ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ ಉಮರ್ ಮೃತಪಟ್ಟ. ಘಟನಾ ಸ್ಥಳದಲ್ಲಿ ಎಕೆ 47 ಬಂದೂಕು, ಗ್ರೆನೇಡ್‌ ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.